ಬಿಎಸ್‌ವೈ ಮಾತಿಗೆ ತಪ್ಪದ ಮಗ: ಹೆಚ್. ವಿಶ್ವನಾಥ್‌| ನನಗೇನು ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಿದರೆ ಅಥವಾ ಶಾಸಕನಾಗಿ ಮಾಡಿದರೆ ನನ್ನ ವ್ಯಕ್ತಿತ್ವ ಮೇಲು ಹೋಗಲ್ಲ, ಕೆಳಗೂ ಹೋಗಲ್ಲ. ವಿಶ್ವನಾಥ್‌ ಹೇಗಿದ್ರು ವಿಶ್ವನಾಥೆ. ನನ್ನ ಅನುಭವವನ್ನ ಉಪಯೋಗಿಸಿಕೊಳ್ಳಿ|

ಮೈಸೂರು(ಜೂ.29): ಪರಿಷತ್‌ಗೆ ನಾಮನಿರ್ದೇಶನದ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ ಮಾತ್ರ. ಅವರು ಮಾತಿಗೆ ತಪ್ಪದ ಮಗ. ಕೊಟ್ಟ ಮಾತನ್ನ ಉಳಿಸಿಕೊಳ್ಳುವ ವ್ಯಕ್ತಿ. ಈ ಮಾತಿಗೆ ನೀವು ಅಪವಾದ ಆಗಬೇಡಿ, ರಾಜ್ಯದಲ್ಲಿ ಮಾತಿನ ಮೇಲೆ ನಿಲ್ಲೋರು ನೀವೊಬ್ಬರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವನಾಥ್‌ ಖೇಲ್ ಖತಂ? ಮುಲಾಜಿಲ್ಲದೇ ನೇರವಾಗಿ ಹೇಳಿಬಿಟ್ರು ಸಿಎಂ!

ನನಗೆ ಸಚಿವ ಸ್ಥಾನ ಕೊಟ್ಟೆ ಕೊಡಬೇಕು ಅಂತ ಹೇಳುತ್ತಿಲ್ಲ. ಕೊಡೋದು ನಿಮಗೆ ಬಿಟ್ಟ ವಿಚಾರ. ಆದರೆ ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ. ದೇಶದ ರಾಜಕಾರಣ ನಡೆಯೋದೆ ಭಾವನೆ ಮತ್ತು ನಂಬಿಕೆ ಮೇಲೆ. ಇದು ಎರಡು ಮುಗಿದು ಹೋದರೆ ರಾಜಕಾರಣ ಇರುವುದಿಲ್ಲ. ಜನನಾಯಕರು ಈ ಭಾವನೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ. ರಾಜ್ಯದ ಜನರ ಅಭಿಪ್ರಾಯ ಏನೆಂದರೆ ಯಡಿಯೂರಪ್ಪನವರೇ ನೀವೂ ಮಾತು ತಪ್ಪದ ಮಗನಾಗಿ. ಮಾತು ತಪ್ಪಿದ ಮಗನಾಡಬೇಡಿ. ಯಡಿಯೂರಪ್ಪನವರೇ ನೀವು ನಾಲಿಗೆ ಮೇಲೆ ನಿಂತ ನಾಯಕನಾಗಿ. ನಾಲಿಗೆ ಕಳೆದುಕೊಂಡ ನಾಯಕನಾಗಬೇಡಿ ಎಂಬುದಾಗಿದೆ ಎಂದು ಅವರು ಹೇಳಿದರು.

ನನಗೇನು ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಿದರೆ ಅಥವಾ ಶಾಸಕನಾಗಿ ಮಾಡಿದರೆ ನನ್ನ ವ್ಯಕ್ತಿತ್ವ ಮೇಲು ಹೋಗಲ್ಲ, ಕೆಳಗೂ ಹೋಗಲ್ಲ. ವಿಶ್ವನಾಥ್‌ ಹೇಗಿದ್ರು ವಿಶ್ವನಾಥೆ. ನನ್ನ ಅನುಭವವನ್ನ ಉಪಯೋಗಿಸಿಕೊಳ್ಳಿ ಎಂದರು.