ಹಾಸ​ನ(ಜೂ.27): ತಾಲೂ​ಕಿನ ಮೊಸಳೆ ಹೊಸಳ್ಳಿ ಎಂಜಿನಿಯರಿಂಗ್‌ ಕಾಲೇಜನ್ನು ಸ್ಥಳಾಂತರ ಮಾಡುವ ಮೂಲಕ ರದ್ದು ಮಾಡಲು ಮುಂದಾದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರಲಾಗು​ವುದು, ನಮ್ಮನ್ನು ಏನಾದ್ರು ಅರೆಸ್ಟ್‌ ಮಾಡಿ​ಸಿದ್ರೆ ಮಾಡಿ​ಸಲಿ ಎಂದು ಮಾಜಿ ಸಚಿವ ಎಚ್‌.​ಡಿ.​ ರೇ​ವಣ್ಣ ಸವಾಲು ಹಾಕಿದ್ದಾರೆ. 

ನಗ​ರ​ದಲ್ಲಿ ಶುಕ್ರ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ಎಂಜಿನಿಯರಿಂಗ್‌ ಕಾಲೇಜನ್ನು ಹಾಸನ ನಗ​ರಕ್ಕೆ ಸ್ಥಳಾಂತರಿಸಲು ಸರ್ಕಾರ ಚಿಂತನೆ ನಡೆ​ಸು​ತ್ತಿದ್ದು, ಈ ಕಾಲೇ​ಜನ್ನು ಹಾಸನ ಇಂಜಿನಿಯರಿಂಗ್‌ ಕಾಲೇಜನ್ನು ಸ್ಥಳಾಂತರಿಸಿ ಮೊಸಳೆ ಹೊಸಳ್ಳಿಯಲ್ಲಿರುವ ಕಾಲೇಜನ್ನು ಮುಚ್ಚಲಾಗುತ್ತಿದೆ. ಇಂತಹ ದ್ವೇಷದ ರಾಜಕಾರಣವನ್ನು ಯಡಿಯೂರಪ್ಪರವರು ಬಿಡಬೇಕು ಎಂದು ಹೇಳಿ​ದರು.

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ: H D ರೇವಣ್ಣ

ಕಾಲೇಜು ಮುಚ್ಚುವುದಿಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯ​ಮಂತ್ರಿ​ಗಳೇ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಕಮಿಟಿಗೆ ದೂರು ಸಲ್ಲಿಸುವುದಾಗಿ ಬೇಸರದಲ್ಲಿ ಹೇಳಿದರು. ಏನಾದರೂ ಮೊಸಳೆ ಹೊಸಳ್ಳಿ ಎಂಜಿನಿಯರಿಂಗ್‌ ಕಾಲೇಜನ್ನು ಸ್ಥಳಾಂತರ ಮಾಡಲು ಮುಂದಾದರೆ ದೊಡ್ಡ ಮಟ್ಟದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ನಂತರ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುವುದಾಗಿ ಮತ್ತೊಮ್ಮೆ ಎಚ್ಚರಿಕೆ ಕೊಟ್ಟರು.

ಯಡಿಯೂರಪ್ಪನವರಿಂದ ದ್ವೇಷದ ರಾಜಕಾರಣ

ರಾಜ್ಯದಲ್ಲಿರುವ ಇರುವುದು ಲೂಟಿ ಕೋರರ ಬಿಜೆಪಿ ಸರ್ಕಾರವಾಗಿದ್ದು, ಮೊಸಳೆ ಹೊಸಳ್ಳಿಯಲ್ಲಿರುವ ಸರಕಾರಿ ಇಂಜಿನಿಯರ್‌ ಕಾಲೇಜನ್ನು ಸ್ಥಳಾಂತರ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಯಾವ ಅಭಿವೃದ್ಧಿ ಕೆಲಸ ಮಾಡದೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಪಂಚಕ್ಕೆ ಆವರಿಸಿರುವ ಕೊರೋನಾ ಹೆಸರಿನಲ್ಲಿ ಸರಕಾರ ಲೂಟಿ ಮಾಡಲು ಮುಂದಾಗಿದೆ. ಸಾರ್ವಜನಿಕ ಹೌಸಿಂಗ್‌ ಕಮಿಟಿ ಚೇರ್ಮನ್‌ ಭೇಟಿ ಮಾಡಲು ನಮಗೆ ಅವಕಾಶ ಕೊಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರ ಅಳಿಯ ಎಂಜಿನಿಯರ್‌ ರನ್ನ ಹುಬ್ಬಳಿಯಲ್ಲೇ ಮುಂದುವರೆಸಿ ಅಳಿಯನಿಗೆ ಬಡ್ತಿಯನ್ನೂ ಕೊಡಿಸಿದಲ್ಲದೇ 14 ತಿಂಗಳು ನಮ್ಮ ಮೈತ್ರಿ ಸರ್ಕಾರದಲ್ಲಿ ನೇಮಿಸಿ ಕೊಂಡಿದಾಗ ಕಾಂಗ್ರೆಸ್‌ ಪಕ್ಷದವರು ವಿರೋಧಿಸಿದ್ದರು ಆದ್ರೂ ನಾನು ಯಡಿಯೂರಪ್ಪರ ಅಳಿಯನನ್ನ ಮುಂದುವರೆಸಿದರೂ ಈಗ ದ್ವೇಷದ ರಾಜಕಾರಣ ಮಾಡುತ್ತಿರುವುದಾಗಿ ಗಂಭೀರವಾಗಿ ಆರೋಪಿಸಿದರು.

ಹಾಸನ ಜಿಲ್ಲೆಯ ಜನರು ಏನಾದರೂ ದಂಗೆ ಎದ್ದರೆ ಈ ಬಿಜೆಪಿ ಸರ್ಕಾರ ಉಳಿಯುವುದಿಲ್ಲ.ಈ ಹಿಂದೆ ಕೆಲ ಸರ್ಕಾರಗಳು ಉರುಳಿದ ಉದಾಹರಣೆಗಳಿದ್ದು, ಜನರ ಶಾಪ ಒಳ್ಳೆಯದಾಗುವುದಿಲ್ಲ. ದೊಡ್ಡಹಳ್ಳಿಯಲ್ಲಿ ನಡೆದ ಗೋಲಿಬಾರ್‌ ಎಲ್ಲವನ್ನು ನೆನಪಿಸಿ ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದರು.

ಯಡಿಯೂರಪ್ಪನವರು ಏನ್‌ ಶಾಶ್ವತವಾಗಿ ಸಿಎಂ ಅಧಿಕಾರದಲ್ಲಿ ಇರುತ್ತಾರಾ, ಬಿಜೆಪಿ ಏನ್‌ ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾ ಎಂದು ಪ್ರಶ್ನಿಸಿ​ದ​ರು. ಕಾರ್ಯ​ಕಾರಿ ಎಂಜಿ​ನಿ​ಯರ್‌ ಅವರ ವರ್ಗಾವಣೆಗೆ 50 ಲಕ್ಷ ಪಡೆದಿದ್ದಾರೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ ಅವರು, ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಸ್ಥಾನ ಸಿಗುವುದಿಲ್ಲ ಎಂದರು. ಬಿಜೆಪಿಯವರು ಖಾತೆ ಇಲ್ಲದಿರೋ ಹಣವನ್ನು ಹೂಡಿಕೆ ಮಾಡಲು ಕೈಗಾರಿಕೆಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಕೈಗಾರಿಕೆ ನಿರ್ಮಾಣಕ್ಕೆ ಸರ್ಕಾರ ಮುಕ್ತ ಅವಕಾಶ ನೀಡಿದ ವಿಚಾರವಾಗಿ ಕಿಡಿಕಾರಿದರು.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"