ಮಂಡ್ಯ(ಸೆ.04): ನನ್ನ ರಾಜಕೀಯ ಅಂತ್ಯ ಜೆಡಿಎಸ್‌ನಲ್ಲೇ ಹೊರತು ಬೇರೆ ಯಾವುದೇ ಪಕ್ಷದಲ್ಲಿ ಅಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಮಂಗಳವಾರ ತಾವು ಬಿಜೆಪಿಗೆ ಹೋಗುವ ಮಾಧ್ಯಮಗಳ ಊಹಾಪೋಹಗಳಿಗೆ ತೆರೆ ಎಳೆದರು.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ಬಿಜೆಪಿ ಕಡೆಗೆ ನನ್ನ ನಡೆ ಎಂದು ಕೆಲ ಟಿವಿ ಮಾಧ್ಯಮದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿ ಕಡೆಗೆ ಹೋಗುವ ಅಗತ್ಯತೆ ನನಗೇನಿದೆ ಎಂದು ಪ್ರಶ್ನಿಸಿದ್ದಾರೆ.

ಕಾರಿನಲ್ಲಿ ಬಂದು ಮನೆಮುಂದಿನ ಕೊಟ್ಟಿಗೆಯಿಂದಲೇ ಕುರಿ ಕದ್ದೊಯ್ದರು..!

ನಾನು ವಿದ್ಯಾರ್ಥಿ ದೆಸೆಯಿಂದಲೂ ಜಯಪ್ರಕಾಶ್‌ ನಾರಾಯಣರ ಹೋರಾಟದಲ್ಲಿ ತೊಡಗಿಕೊಂಡು ಬಂದವನು. ಈಗ ಎರಡೂವರೆ ದಶಕಗಳಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ರಾಜಕೀಯ ಮೆಟ್ಟಿಲು ತುಳಿದವನು. ಹೀಗಾಗಿ ನನ್ನ ರಾಜಕೀಯ ಅಂತ್ಯವೇನಿದ್ದರೂ ಜೆಡಿಎಸ್‌ನಲ್ಲೇ ಹೊರತು. ಬೇರೆ ಯಾವುದೇ ಪಕ್ಷದಲ್ಲಿ ಅಲ್ಲ. ಈ ವಿಚಾರಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಕೋರಿದರು.