ಮಾಜಿ ಸಚಿವರ ಪುತ್ರರಿಬ್ಬರು ಕಾಂಗ್ರೆಸ್ ಸೇರ್ಪಡೆ
- ಜೆಡಿಎಸ್‌ನ ಮಾಜಿ ಸಚಿವ ಸಿ.ಚನ್ನಿಗಪ್ಪ ಅವರ ಇಬ್ಬರು ಮಕ್ಕಳು ಕಾಂಗ್ರೆಸ್ ಸೇರ್ಪಡೆ
- ಡಿಸಿ ಅರುಣ್ ಕುಮಾರ್ ಹಾಗೂ ತಮ್ಮ ವೇಣುಗೋಪಾಲ್ ಕಾಂಗ್ರೆಸ್ ಸೇರ್ಪಡೆ ಯಾಗುವುದಾಗಿ ಅಧಿಕೃತ ಘೋಷಣೆ
ಕೊರಟಗೆರೆ (ಅ.26): ಜೆಡಿಎಸ್‌ನ (JDS) ಮಾಜಿ ಸಚಿವ ಸಿ.ಚನ್ನಿಗಪ್ಪ (c chennigappa) ಅವರ ಹಿರಿ ಮಗ ಹಾಗೂ ಹಾಲಿ ತುಮಕೂರು (Tumakur) ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಸಹೋದರ ಡಿಸಿ ಅರುಣ್ ಕುಮಾರ್ ಹಾಗೂ ತಮ್ಮ ವೇಣುಗೋಪಾಲ್ ಕಾಂಗ್ರೆಸ್ ಸೇರ್ಪಡೆ ಯಾಗುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಅವರು ಭಾನುವಾರ ಕೊರಟಗೆರೆ (Koratagere) ತಾಲೂಕಿನ ಎಲೆರಾಂಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬೈಚೇನಹಳ್ಳಿ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Temple) ಪೂಜೆ ಸಲ್ಲಿಸಿ ಮುಂದಿನ ನನ್ನ ರಾಜಕೀಯ (Politics) ಭವಿಷ್ಯವನ್ನು ಕಾಂಗ್ರೆಸ್ (congress) ಪಕ್ಷದಿಂದ ರೂಪಿಸಿಕೊಳ್ಳಲಾಗುವುದು ಎಂದರು.
'ಮತ್ತಷ್ಟು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ : ಸ್ವಾಗತಿಸಿದ ಮಾಜಿ ಡಿಸಿಎಂ'
ಜೆಡಿಎಸ್‌ನ ಮಾಜಿ ಜನಪ್ರಿಯ ಸಚಿವರಾದ ಸಿ. ಚನ್ನಿಗಪ್ಪನವರು ಕೊರಟಗೆರೆ ತಾಲೂಕಿನಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆಯೊಂದಿಗೆ ಕೊರಟಗೆರೆ ಮನೆ ಮಗನಾಗಿ ಸತತ ಜನರ ಸೇವೆ ಮಾಡುತ್ತಾ ಜನ ಬೆಂಬಲದೊಂದಿಗೆ ಹಲವು ಖಾತೆಗಳ ಮೂಲಕ ಜನಪ್ರಿಯರಾಗಿದ್ದರು. ಅಂಥ ನಮ್ಮ ತಂದೆ ಆಶಯದಂತೆ ಕೊರಟಗೆರೆ ತಾಲೂಕಿನಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಪ್ರಾರಂಭಿಸಲಾಗುವುದು ಎಂದು ಇಂಗಿತ ವ್ಯಕ್ತಪಡಿಸಿದ್ದರು.
ನನಗೆ ಈ ಬಾರಿ ಕಾಂಗ್ರೆಸ್‌ನಿಂದ (Congress) ಜಿಲ್ಲಾ ಪಂಚಾಯಿತಿಗೆ ಬರುವ ಆಶಯವಿದು, ಅವಕಾಶ ನೋಡಿ ನಿರ್ಧರಿಸಲಾಗುವುದು. ಆದರೆ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ್ (G Parameshwar) ಅವರಿಗೆ ಮುಂದಿನ ಚುನಾವಣೆಯಲ್ಲಿ ಮನೆಮನೆಗೂ ಅವರ ಗೆಲುವಿಗೆ ಟೊಂಕಕಟ್ಟಿ ನಿಲ್ಲುವುದರ ಜೊತೆಗೆ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಕೆ ಎನ್ ರಾಜಣ್ಣನವರ (KN Rajanna) ಮಗ ರಾಜೇಂದ್ರ ಅವರ ಗೆಲುವಿಗೂ ಶ್ರಮ ವಹಿಸುವುದಾಗಿ ಅಭಿಪ್ರಾಯಪಟ್ಟರು.
ಡಿಸೆಂಬರ್‌ನಲ್ಲಿ ಸೇರ್ಪಡೆ: ನಮ್ಮ ಕುಟುಂಬ ಆದವರು ಕುಳಿತು ನಿರ್ಧರಿಸಿದ್ದೇವೆ. ಅರುಣ್ ಕುಮಾರ್ ಹಾಗೂ ವೇಣುಗೋಪಾಲ್ ಇಬ್ಬರು ಮಕ್ಕಳು ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಜೀವನವನ್ನು ಪ್ರಾರಂಭಿಸಲಿದ್ದು ಮುಂದಿನ ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK shivakumar), ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ ಪರಮೇಶ್ವರ್ ಹಾಗೂ ಕೆ ಎನ್ ರಾಜಣ್ಣನವರ ಮೂಲಕ ನಮ್ಮ ಹುಟ್ಟೂರು ಬೈರನಾಯಕನಹಳ್ಳಿಯಲ್ಲಿ ದೊಡ್ಡ ಸಮಾರಂಭದ ಮೂಲಕ ಇಡೀ ತುಮಕೂರಿನ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಸೇರಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಾಗುವುದು ಎಂದು ಅಧಿಕೃತ ಘೋಷಣೆ ಮಾಡಿದರು.
ತಂದೆ ನೆನೆದು ಕಣ್ಣೀರಿಟ್ಟ ಅರುಣ್ ಕುಮಾರ್: ನಮ್ಮ ತಂದೆ ಸಿ ಚನ್ನಿಗಪ್ಪ ನವರನ್ನ ಕೊರಟಗೆರೆ ಜನತೆ ಮೂರು ಬಾರಿ ಗೆಲ್ಲಿಸುವುದರ ಮೂಲಕ ನಮ್ಮ ಕುಟುಂಬವನ್ನು ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದ್ದೀರಿ, ನನ್ನನ್ನು ಸಹ ಕೊರಟಗೆರೆ ಕ್ಷೇತ್ರಕ್ಕೆ ಹೋಗಿ ರಾಜಕಾರಣ ಮಾಡು ಅಲ್ಲಿನ ಜನ ತುಂಬಾ ಒಳ್ಳೆಯವರು ನಮ್ಮ ಕುಟುಂಬವನ್ನು ಎಂದೂ ಕೈ ಬಿಡುವುದಿಲ್ಲ ಎಂದಿದ್ದರು.
ಅವರ ಆಶಯದಂತೆ ನಾನು ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರಾಜಕೀಯ ಪ್ರಾರಂಭಿಸಲು ಇಚ್ಚಿಸಿದ್ದೇನೆ. ನಮ್ಮ ತಂದೆಯ ಆದಿಯಲ್ಲಿ ನನ್ನನ್ನು ಆಶೀರ್ವದಿಸಬೇಕು ಎಂದು ಅವರು ತಂದೆ ನೆನೆದು ಭಾವುಕರಾಗಿ ಕಣ್ಣೀರಿಟ್ಟರು.
ಕಾಂಗ್ರೆಸ್ ಸೇರ್ಪಡೆ ಲಿಸ್ಟ್‌ಗೆ ಮತ್ತೋರ್ವ ಮುಖಂಡ : ಖಚಿತ ಪಡಿಸಿದ ನಾಯಕ
ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರದ ಕಾರ್ಮಿಕ ಒಕ್ಕೂಟದ ಸಂಪತ್ ಕುಮಾರ್, ಸ್ಥಳೀಯ ಕಾಂಗ್ರೆಸ್ ಮುಖಂಡ ಸಿ.ರಂಗಯ್ಯ ತುಮಕೂರು ಗ್ರಾಮಾಂತರ ಮುಖಂಡರಾದ ಕುಮಾರಣ್ಣ, ಮಹೇಶ್, ಚಂದ್ರು, ಕೆಂಪರಾಜು ಎಲೆರಾಂಪುರ ಗ್ರಾ.ಪಂ ಅಧ್ಯಕ್ಷ ಗಂಗಾದೇವಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ರಂಗಶಾಮಯ್ಯ ಗೀತಾ ನರಸಿಂಹರಾಜು ,ಮಮತಾ ರಂಗಮುತ್ತಯ್ಯ, ಗಂಗಮ್ಮ ರಾಕೇಶ್, ಹನುಮಂತರಾಯಪ್ಪ, ತ್ರಿವೇಣಿ ತಿಮ್ಮರಾಜು, ಕುಮಾರ್, ಚಂದ್ರಣ್ಣ, ಸರ್ವೇಶ್ ಎನ್ ಎಚ್ ಮುಖಂಡ ಸಿಂಗ್ರೀಹಳ್ಳಿ ಚಂದ್ರಣ್ಣ,ಕಾಂತರಾಜು ದೇವರಾಜು ,ರಾಮಣ್ಣ ಜಯರಾಮಯ್ಯ ಹಲವರು ಉಪಸ್ಥಿತರಿದ್ದರು.