Tumakuru: ಕಾಂಗ್ರೆಸ್ ಸಭೆಯಲ್ಲಿ ಕುಸಿದುಬಿದ್ದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಾವು
ಕಾಂಗ್ರೆಸ್ ವತಿಯಿಂದ ಆಯೋಜಿಸುತ್ತಿರುವ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಪೂರ್ವಭಾವಿ ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ತುಮಕೂರು (ಡಿ.28): ರಾಜ್ಯದಲ್ಲಿ ಮುಂದಿನ ತಿಂಗಳು ಕಾಂಗ್ರೆಸ್ ವತಿಯಿಂದ ಆಯೋಜಿಸುತ್ತಿರುವ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪೂರ್ವಭಾವಿ ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ವಿಭಿನ್ನವಾಗಿ ಸಮಾವೇಶಗಳನ್ನು ಮತ್ತು ಯಾತ್ರೆಗಳನ್ನು ಹಮ್ಮಿಕೊಂಡಿವೆ. ಕಳೆದ ತಿಂಗಳು ಬಿಜೆಪಿ ವತಿಯಿಂದ ಪರಿಶಿಷ್ಟ ಪಂಗಡ ವರ್ಗದ ಶಕ್ತಿ ಪ್ರದರ್ಶನ ಸಮಾವೇಶದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದ ಐಕ್ಯತಾ ಸಮಾವೇಶವನ್ನು ಆಯೋಜನೆ ಮಾಡಲಾಗುತ್ತಿದೆ.
ಇನ್ನು ಈ ಸಮಾವೇಶದ ನೇತೃತ್ವವನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರಟಗೆರೆಯಲ್ಲಿ ಸ್ಥಳೀಯ ಎಸ್‌ಸಿ, ಎಸ್‌ಟಿ ಮುಖಂಡರ ಮತ್ತು ಕಾರ್ಯಕರ್ತರನ್ನು ಸೇರಿಸಿ ಸಭೆಯನ್ನು ಆಯೋಜನೆ ಮಾಡಿದ್ದರು. ಆದರೆ, ಸಭೆಯಲ್ಲಿಯೇ ಕುಸಿದು ಬಿದ್ದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಾವನ್ನಪ್ಪಿದ್ದಾನೆ.
Ramanagara: ಹೋಟೆಲ್‌ನಲ್ಲಿ ಊಟ ಮಾಡುವಾಗಲೇ ಕುಸಿದು ಬಿದ್ದು ಯುವಕ ಸಾವು
ಭಾಷಣ ಮುಗಿಯುತ್ತಿದ್ದಂತೆ ಸಾವು: ಕ್ಯಾಷ್ವಾರ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜಪ್ಪ(60) ಮೃತ ದುರ್ದೈವಿ. ಕಾಂಗ್ರೆಸ್‌ನ ಎಸ್.ಟಿ. ಎಸ್ಸಿ ಸಮಾವೇಶದ ಪೂರ್ವಭಾವಿ ಸಭೆ ನಡೆಯುತ್ತಿದ್ದ ಕೊರಟಗೆರೆ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದೆ. ಈ ಸಭೆಯಲ್ಲಿ ನಾಗರಾಜಪ್ಪ ಪಾಲ್ಗೊಂಡಿದ್ದನು. ಮಾಜಿ ಡಿಸಿಎಂ ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ ನಡೆಯುತ್ತಿದ್ದು, ಅವರು ಭಾಷಣ ಮುಗಿಸಿದ ತಕ್ಷಣವೇ ವೇದಿಕೆಯಲ್ಲಿದ್ದ ನಾಗರಾಜಪ್ಪ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಕೊರಟಗೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮೊದಲೇ ಸಾವನಪ್ಪಿದ್ದ ಎಂದು ತಿಳಿದುಬಂದಿದೆ.
ಹೆಚ್ಚುತ್ತಿರುವ ದಿಢೀರ್ ಸಾವು ಪ್ರಕರಣ: ರಾಜ್ಯದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಹೃದಯಾಘಾತದ ಸಾವಿನ ನಂತರ ದಿಢೀರ್ ಕುಸಿದುಬಿದ್ದು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಳಿತವರು, ನಿಂತವರು, ಕೆಲಸ ಮಾಡುತ್ತಿರುವವರು ಇದ್ದಕ್ಕಿಂದಂತೆ ಕುಸಿದು ಬಿದ್ದು ಪ್ರಾಣ ಬಿಡುತ್ತಿದ್ದಾರೆ. ಪ್ರತಿ ತಿಂಗಳು ಮೂರ್ನಾಲ್ಕು ಪ್ರಕರಣಗಳು ಇಂತಹ ಘಟನೆಗಳು ನಡೆಯುತ್ತಿವೆ. ಆದರೆ, ಕುಸಿದುಬಿದ್ದು ಸಾವನ್ನಪ್ಪುತ್ತಿರುವವರ ಪೈಕಿ ಬಹುತೇಕರು ಮಧ್ಯವಯಸ್ಕರು ಆಗಿದ್ದಾರೆ ಎನ್ನುವುದೇ ಇಲ್ಲಿ ಆತಂಕದ ವಿಚಾರವಾಗಿದೆ. ಮೊನ್ನೆ ರಾಮನಗರ ಜಿಲ್ಲೆಯ ಕನಕಪುರದ ಹೋಟೆಲ್‌ನಲ್ಲಿ ಯುವಕನೊಬ್ಬ ಊಟ ಮಾಡುತ್ತಿರುವಾಗಲೇ ಸಾವನನ್ಪಪ್ಪಿದ್ದನು.
ರಸ್ತೆಯಲ್ಲಿ ಸ್ನೇಹಿತರೊಂದಿಗೆ ಸಾಗುತ್ತಿದ್ದಾಗಲೇ ಕುಸಿದು ಬಿದ್ದು ಯುವಕ ಸಾವು: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಯುವಕ ಸಾವು ಗಾಬರಿ ಹುಟ್ಟಿಸುತ್ತದೆ: ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ದಾರಿ ಮಧ್ಯದಲ್ಲಿ ಊಟ ಮಾಡುವುದಕ್ಕಾಗಿ ಕನಕಪುರದ ಪ್ರೈಡ್ ಹೋಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಹೋಟೆಲ್‌ನಲ್ಲಿ ಊಟ ಮಾಡುವಾಗಲೇ ಕುಸಿದು ಬಿದ್ದ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಕನಕಪುರದ ಪ್ರೈಡ್ ಹೋಟೆಲ್‌ನಲ್ಲಿ ಊಟ ಮಾಡುವಾಗ ಕುಸಿದು ಬಿದ್ದ ಯುವಕನನ್ನು ಮೈಸೂರಿನ ಸಿದ್ದಾರ್ಥ ನಗರದ ನಿವಾಸಿ ಪ್ರೀತಂ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ವಾಪಸ್ ಮೈಸೂರಿಗೆ ಸ್ನೇಹಿತರೊಂದಿಗೆ ಹೋಗುತ್ತಿರುವಾಗ ಕನಕಪುರದಲ್ಲಿ ಊಟ ಮಾಡಲೆಂದು ಹೋಟೆಲ್‌ಗೆ ತೆರಳಿದ್ದರು. ತಮ್ಮ ಸ್ನೇಹಿತರೆಲ್ಲರೂ ಸೇರಿ ಹೋಟೆಲ್‌ನೊಳಗೆ ಊಟ ಮಾಡುತ್ತಿರುವಾಗ ಮೇಲೆ ಎದ್ದೇಳಲು ಆಗದೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕನಕಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಪ್ರೀತಂ ಮೃತಪಟ್ಟಿದ್ದನು.