Mahesh Joshi ಕನ್ನಡ ಸಾಹಿತ್ಯ ಪರಿಷತ್‌ ನೂತನ ಅಧ್ಯಕ್ಷ: ಘೋಷಣೆ ಬಾಕಿ!

*44000 ಮತಗಳ ಮುನ್ನಡೆ: ದಾಖಲೆ ಜಯದತ್ತ
*ಅಂಚೆ ಮತಗಳ ಎಣಿಕೆ ಬಳಿಕ ನಾಳೆ ಫಲಿತಾಂಶ
*ಕಸಾಪ 26ನೇ  ರಾಜ್ಯಾಧ್ಯಕ್ಷ : ದಾಖಲೆ ಗೆಲುವು ಸಾಧ್ಯತೆ 

former director of Doordarshan Mahesh Joshi set to head Kannada Sahitya Parishat mnj

ಬೆಂಗಳೂರು(ನ.23): ಕನ್ನಡ ಸಾಹಿತ್ಯ ಪರಿಷತ್‌ (Kannada Sahitya Parishat) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯ (Election) ಮತ ಎಣಿಕೆ ಬಹುತೇಕ ಪೂರ್ಣಗೊಂಡಿದೆ. ದಾಖಲೆಯ 44 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿರುವ ನಾಡೋಜ ಡಾ. ಮಹೇಶ್‌ ಜೋಶಿ (Dr. Mahesh Joshi) ಅವರು ಜಯಗಳಿಸುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆಯಷ್ಟೇ (Official announcement) ಬಾಕಿ ಇದೆ.ಇದರೊಂದಿಗೆ ದೂರದರ್ಶನ (Doordarshan) ನಿರ್ದೇಶಕ ಹುದ್ದೆಯಿಂದ ನಿವೃತ್ತರಾದ ಬಳಿಕ ಸಂಪೂರ್ಣ ಕನ್ನಡದ ಕಾರ್ಯದಲ್ಲಿ ತೊಡಗಿರುವ ಜೋಶಿ ಅವರು ಕಸಾಪ 26ನೇ  ರಾಜ್ಯಾಧ್ಯಕ್ಷರಾಗಿ ಮುಂದಿನ 5 ವರ್ಷಗಳ ಕಾಲ ಕನ್ನಡದ ತೇರು ಎಳೆಯುವುದು ನಿಶ್ಚಿತವಾಗಿದೆ. ನ.24ರಂದು ಅಂಚೆ ಮತಗಳ ಎಣಿಕೆ ಬಳಿಕ ಕಸಾಪ ಚುನಾವಣಾ ಫಲಿತಾಂಶದ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ಭಾಷೆ ಪ್ರೋತ್ಸಾಹ ಸಮಿತಿಗೆ ಚಮೂ ಕೃಷ್ಣಶಾಸ್ತ್ರಿ ಅಧ್ಯಕ್ಷ

ಇದುವರೆಗೆ ಅಂಚೆ ಮತ (Postal Votes) ಹೊರತುಪಡಿಸಿ ಉಳಿದೆಲ್ಲಾ ಮತಗಳ ಎಣಿಕೆ (Votes Counting) ಪೂರ್ಣಗೊಂಡಿದ್ದು ಜೋಶಿ ಅವರು ಅತಿಹೆಚ್ಚು 68,525 ಮತ ಪಡೆದು ಜಯದ ಹೊಸ್ತಿಲಲ್ಲಿ ನಿಂತಿದ್ದಾರೆ. ಅವರ ಸಮೀಪ ಸ್ಪರ್ಧಿ ಶೇಖರಗೌಡ ಮಾಲಿ ಪಾಟೀಲ (Shekhargouda Malipatil) ಎರಡನೇ ಅತಿ ಹೆಚ್ಚು 22,357 ಮತಗಳನ್ನು ಪಡೆದಿದ್ದಾರೆ. ಇದರೊಂದಿಗೆ ಜೋಶಿ 44 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುಂದಿದ್ದಾರೆ. ಈ ಇಬ್ಬರು ಸೇರಿದಂತೆ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಟ್ಟು 21 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ವ.ಚ.ಚನ್ನೇಗೌಡ ಅವರು 16,755, ಸಿ.ಕೆ.ರಾಮೇಗೌಡ 14,110, ಮಾಯಣ್ಣ 8,791, ಸರಸ್ವತಿ ಶಿವಪ್ಪ ಚಿಮ್ಮಲಗಿ 6471 ಮತ್ತು ರಾಜಶೇಖರ ಮುಲಾಲಿ 5209 ಮತ ಗಳಿಸಿದ್ದಾರೆ. ಉಳಿದ ಅಭ್ಯರ್ಥಿಗಳು 2 ಸಾವಿರಕ್ಕಿಂತಲೂ ಕಡಿಮೆ ಮತ ಗಳಿಸಿದ್ದಾರೆ.

ದಾಖಲೆ ಗೆಲುವು ಸಾಧ್ಯತೆ:

ಕಳೆದ ಬಾರಿಯ ಚುನಾವಣೆಯಲ್ಲಿ ಕಸಾಪ ನಿರ್ಗಮಿತ ಅಧ್ಯಕ್ಷ ಮನು ಬಳಿಗಾರ್‌ (Manu Baligar) 61 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿಯಿಂದ 38 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಮಹೇಶ್‌ ಜೋಶಿ ಅವರು ಇದಕ್ಕಿಂತಲೂ ಹೆಚ್ಚು ಅಂದರೆ 68 ಸಾವಿರಕ್ಕೂ ಹೆಚ್ಚು ಮತ ಪಡೆದು 44 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ದಾಖಲೆಯ ಜಯಗಳಿಸುವ ಹಾದಿಯಲ್ಲಿದ್ದಾರೆ.

ಜರಾಸಂಧ ಕೊಲ್ಲಲು ಬಂದಾಗ ಯುದ್ಧ ಮಾಡದೆ ರಾತ್ರೋರಾತ್ರಿ ಊರು ಬಿಟ್ಟು ಓಡಿದ ಕೃಷ್ಣ

ಈ ಮೊದಲು ಮೂರು ವರ್ಷಗಳಿದ್ದ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷರ ಅಧಿಕಾರಾವಧಿಯನ್ನು ಬೈಲಾಗೆ ತಿದ್ದುಪಡಿ ತಂದು 5 ವರ್ಷಗಳಿಗೆ ಹೆಚ್ಚಿಸಲಾಗಿದೆ. ಕಳೆದ ಮೇ ತಿಂಗಳಲ್ಲೇ ನಡೆಯಬೇಕಿದ್ದ ಚುನಾವಣೆ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನ.21ರಂದು ರಾಜ್ಯಾಧ್ಯಕ್ಷ ಸ್ಥಾನ ಮಾತ್ರವಲ್ಲದೆ ಜಿಲ್ಲಾಧ್ಯಕ್ಷರ ಸ್ಥಾನಗಳಿಗೂ ಚುನಾವಣೆ ನಡೆದಿದ್ದು ಈಗಾಗಲೇ ಜಿಲ್ಲಾಧ್ಯಕ್ಷರ ಫಲಿತಾಂಶ ಪ್ರಕಟವಾಗಿದೆ.

ಯಾರಿಗೆ ಎಷ್ಟುಮತ?

*ಮಹೇಶ ಜೋಶಿ - 68,525

*ಶೇಖರಗೌಡ ಮಾಲಿಪಾಟೀಲ- 22,357

*ವ.ಚ.ಚನ್ನೇಗೌಡ- 16,755

*ಸಿ.ಕೆ. ರಾಮೇಗೌಡ- 14,110

ತಾಂಬೂಲದೊಂದಿಗೆ ಪುಸ್ತಕ ನೀಡುವ ಪರಂಪರೆ ಸೃಷ್ಟಿಯಾಗಲಿ: ಸೋಮೇಶ್ವರ

ಗ್ರಂಥದಾನ ಶ್ರೇಷ್ಠ ದಾನವಾಗಿದ್ದು ತಾಂಬೂಲ ಕೊಡುವಾಗ ವೀಳ್ಯದೆಲೆ, ಅಡಕೆಯ ಜೊತೆಗೆ ಪುಸ್ತಕವನ್ನು ಕೊಡುವ ಹೊಸ ಪರಂಪರೆ ಸೃಷ್ಟಿಯಾಗಬೇಕು ಎಂದು ಖ್ಯಾತ ಬರಹಗಾರ ಡಾ. ನಾ.ಸೋಮೇಶ್ವರ(Dr.Na Someshwara) ಹೇಳಿದ್ದಾರೆ. 

ಅವರು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದ 12ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪುಸ್ತಕೋತ್ಸವದಲ್ಲಿ ‘ಕನ್ನಡಪ್ರಭ’(Kannada Prabha) ಪುರವಣಿ ಪ್ರಧಾನ ಸಂಪಾದಕ ಎಚ್‌.ಗಿರೀಶ್‌ರಾವ್‌ (ಜೋಗಿ)(Girish Rao Hatwar) ಅವರ ‘ಐ ಹೇಟ್‌ ಮೈ ವೈಫ್‌’(I Hate My Wife) ಹಾಗೂ ಉಪ ಸುದ್ದಿಸಂಪಾದಕ ಮಹಾಬಲ ಸೀತಾಳಭಾವಿ ಅವರ ‘ಮ್ಯಾನೇಜ್‌ಮೆಂಟ್‌ ಭಗವದ್ಗೀತೆ’(Management Bhagavad Gita) ಸೇರಿದಂತೆ ಒಟ್ಟು ಹತ್ತು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

Latest Videos
Follow Us:
Download App:
  • android
  • ios