Asianet Suvarna News Asianet Suvarna News

ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜಿನಿಂದ ಸರ್ಕಾರಿ ಜಾಗ ಒತ್ತುವರಿ..!

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಕಾಲೇಜು ಸಕರ್ಕಾರಿ ಜಾಗ ಒತ್ತುವರಿ ಮಾಡಿದ ಪರಿಣಾಮ ಸಾರ್ವಜನಿಕ ರಿಂಗ್ ರೋಡ್ ಕಾಮಗಾರಿ ವಿಳಂಬವಾಗುತ್ತಿದೆ. ಸುಮಾರು 8 ತಿಂಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

former dcm g parameshwars siddharth college illegally acquired govt land in tumakur
Author
Bangalore, First Published Jan 12, 2020, 10:57 AM IST
  • Facebook
  • Twitter
  • Whatsapp

ತುಮಕೂರು(ಜ.12): ಮಾಜಿ ಡಿಸಿಎಂ ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಕಾಲೇಜು ಸಕರ್ಕಾರಿ ಜಾಗ ಒತ್ತುವರಿ ಮಾಡಿದ ಪರಿಣಾಮ ಸಾರ್ವಜನಿಕ ರಿಂಗ್ ರೋಡ್ ಕಾಮಗಾರಿ ವಿಳಂಬವಾಗುತ್ತಿದೆ. ಸುಮಾರು 8 ತಿಂಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ತುಮಕೂರು‌ ನಗರದ ಮರಳೂರು ದಿಣ್ಣೆಯಲ್ಲಿರುವ ಸಿದ್ದಾರ್ಥ ಇಂಜಿನಿಯರ್ ಕಾಲೇಜಿನಿಂದ ರಸ್ತೆ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಜಾಗ ಒತ್ತುವರಿ ಹಿನ್ನೆಲೆಯಲ್ಲಿ ತುಮಕೂರು ನಗರದ ರಿಂಗ್ ರೋಡ್ ಕಾಮಗಾರಿ ವಿಳಂಬವಾಗಿದೆ.

ತಾಯಿ ಕಣ್ಣೆದುರೇ ಮಗನನ್ನು ಕೊಂದು ಹಾಕಿದ ಚಿರತೆ..!.

8 ತಿಂಗಳಿಂದ ಕಾಮಗಾರಿ ವಿಳಂಬವಾಗಿದ್ದು, ಪರಮೇಶ್ವರ್ ಕಾಲೇಜು ಒಡೆತನದ ಜಾಗ ತೆರುವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಿದ್ದಾರ್ಥ ಕಾಲೇಜು13 ಮೀಟರ್ ಜಾಗ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ಜಾಗ ತೆರವಿಗೆ ಅಧಿಕಾರಿಗಳು ಗುರುತು ಮಾಡಿಕೊಂಡಿದ್ದಾರೆ.

ಕಾಲೇಜು ಆಡಳಿತ ಮಂಡಳಿ ರಸ್ತೆ ಜಾಗಕ್ಕೆ ಕೌಪೌಂಡ್ ಕಟ್ಟಿಕೊಂಡಿದೆ. ಕಾಲೇಜು‌ ಬಳಿ ಅರ್ಧಕ್ಕೆ ರಸ್ತೆ ಕಾಮಗಾರಿ ಸ್ಥಗಿತವಾಗಿದ್ದು, ಕಾಪೌಂಡ್ ಜಾಗ ಅಳತೆ ಮಾಡಿ 13 ಮೀಟರ್ ಜಾಗವನ್ನು ಅಧಿಕಾರಿಗಳು ಗುರುತಿಸಿದ್ದಾರೆ.

ಚೆಲ್ಲಾಪಿಲ್ಲಿಯಾಗಿದ್ದ ಕಚೇರಿ, 1965ರ ಫೈಲ್ ಕೇಳಿದ ಶಾಸಕ

ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ತುಮಕೂರು ಕ್ಯಾತಸಂದ್ರದಿಂದ ಗುಬ್ಬಿಗೇಟ್‌ವರೆಗೂ ರಿಂಗ್ ರೋಡ್ ರಸ್ತೆ ಕಾಮಗಾರಿ ನಡೆಯುತ್ತಿದೆ. 2018 ಡಿಸೆಂಬರ್ ನಲ್ಲಿ ಪ್ರಾರಂಭವಾದ ರಿಂಗ್ ರೋಡ್ ಅಭಿವೃದ್ದಿ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ.

ಸ್ಮಾರ್ಟ್ ಸಿಟಿ ಅಧಿಕಾರಿಗಳು ಒಂದು ವರ್ಷದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧಾರ ಮಾಡಿದ್ದರು. ಪರಮೇಶ್ವರ್ ಕಾಲೇಜು ಜಾಗ ಒತ್ತುವರಿ ಮಾಡಿಕೊಂಡಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ತುಮಕೂರು - ಗುಬ್ಬಿಗೇಟ್ ಚಥುಸ್ಪಥ ರಿಂಗ್ ರೋಡ್ ಅಂದಾಜು 80 ಕೋಟಿ ವೆಚ್ಚದ ಕಾಮಗಾರಿಯಾಗಿದೆ.

ತುಮಕೂರು: ಚಿರತೆ ದಾಳಿಗೆ 3 ಬಲಿ, 40 ಕಡೆ ಬೋನಿಟ್ಟರೂ ನೋ ಯೂಸ್..!

Follow Us:
Download App:
  • android
  • ios