Asianet Suvarna News Asianet Suvarna News

ಚೆಲ್ಲಾಪಿಲ್ಲಿಯಾಗಿದ್ದ ಕಚೇರಿ, 1965ರ ಫೈಲ್ ಕೇಳಿದ ಶಾಸಕ

ಡಿಎಫ್‌ಒ ಕಚೇರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಡತಗಳನ್ನು ನೋಡಿದ ಶಾಸಕ ಗೌರಿಶಂಕರ ಅವರು ಡಿಎಫ್‌ಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 1965ನೇ ಇಸವಿಯ ಫೈಲ್‌ ತೋರಿಸಿ ಎಂದು ಡಿಎಫ್‌ಒಗೆ ಹೇಳಿದ್ದಾರೆ.

MLA asks for 1965 document in dfo at tumakur
Author
Bangalore, First Published Jan 11, 2020, 12:04 PM IST

ತುಮಕೂರು(ಜ.11): ಡಿಎಫ್‌ಒ ಕಚೇರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಡತಗಳನ್ನು ನೋಡಿದ ಶಾಸಕ ಗೌರಿಶಂಕರ ಅವರು ಡಿಎಫ್‌ಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 1965ನೇ ಇಸವಿಯ ಫೈಲ್‌ ತೋರಿಸಿ ಎಂದು ಡಿಎಫ್‌ಒಗೆ ಹೇಳಿದ್ದಾರೆ.

ಡಿಎಫ್‌ಒ ಕಚೇರಿಯ ನೆಲ ಮಹಡಿ, ಮೊದಲ ಮಹಡಿಯ ಎಲ್ಲೆಂದರಲ್ಲಿ ಕಡತಗಳನ್ನ ಮೂಟೆ ಕಟ್ಟಿಇಡಲಾಗಿದೆ. ಸಾರ್ವಜನಿಕರು ಓಡಾಡುವ ದಾರಿಯಲ್ಲೂ ಫೈಲ್‌ಗಳನ್ನು ಇಟ್ಟಿದ್ದನ್ನು ಕಂಡ ಶಾಸಕ ಗೌರಿಶಂಕರ್‌ ಡಿಎಫ್‌ಒ ಹಾಗೂ ಸಿಬ್ಬಂದಿ ಮೇಲೆ ಹರಿಹಾಯ್ದರು.

3 ತಾಲೂಕುಗಳಲ್ಲಿ ನರಹಂತಕ ಚಿರತೆ ಸಂಚಾರ: ಭೀತಿಯಲ್ಲಿ ಜನ

ನರಹಂತಕ ಚಿರತೆ ಸೆರೆ ಹಿಡಿಯಲು ಆಯೋಜಿಸಿದ್ದ ಪ್ರತಿಭಟನೆಗೆ ಅರಣ್ಯ ಇಲಾಖೆಗೆ ಹೋಗಿದ್ದ ಶಾಸಕ ಗೌರಿಶಂಕರ್‌ ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 1965ನೇ ಇಸವಿಯ ಫೈಲ್‌ ತೋರಿಸಿ ಎಂದು ಡಿಎಫ್‌ಒಗೆ ಹೇಳಿದ್ದಾರೆ. ಅಲ್ಲದೇ ಸರಿಯಾಗಿ ಫೈಲ್‌ಗಳನ್ನು ಇಟ್ಟು ಕೊಳ್ಳುವುದಕ್ಕೆ ಆಗುವುದಿಲ್ಲವೆಂದು ತರಾಟೆಗೆ ತೆಗೆದುಕೊಂಡರು. ಶಾಸಕರ ಅವಾಜ್‌ಗೆ ಡಿಎಫ್‌ಒ ಕಕ್ಕಾಬಿಕ್ಕಿಯಾಗಿದ್ದಾರೆ.

ಅಕ್ರಮ ಗಣಿಗಾರಿಕೆ ಎಚ್ಚರಿಕೆ:

ತುಮಕೂರು ತಾಲೂಕಿನಲ್ಲಿ ಡೀಮ್ಡ್‌ ಅರಣ್ಯದೊಳಗೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಡೀಮ್‌್ಡ ಅರಣ್ಯದೊಳಗೆ ಗಣಿಗಾರಿಕೆ ನಡೆಯುತ್ತಿರುವುದರಿಂದ ವನ್ಯಜೀವಿಗಳು ನಗರದತ್ತ ಬರುವಂತಾಗಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದ ಅವರು, ಅಕ್ರಮವಾಗಿ ಗಣಿಗಾರಿಕೆ ನಡೆಸುವವರನ್ನು ಜೈಲಿಗೆ ಕಳುಹಿಸುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್‌ ಹೇಳಿದ್ದಾರೆ.

ತುಮಕೂರು: ಚಿರತೆ ದಾಳಿಗೆ 3 ಬಲಿ, 40 ಕಡೆ ಬೋನಿಟ್ಟರೂ ನೋ ಯೂಸ್..!

Follow Us:
Download App:
  • android
  • ios