ಹುಬ್ಬಳ್ಳಿ[ಫೆ.08]: ಸಿಎಂ ಬಿ. ಎಸ್. ಯಡಿಯೂರಪ್ಪ ಬಹಳ ದಿನಗಳ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಸಂಪುಟ ವಿಸ್ತರಣೆಯಿಂದ ಗೊಂದಲ ಮತ್ತಷ್ಟು ಗಟ್ಟಿಯಾಗಿದೆ. ಸಚಿವ ಸಂಪುಟ ವಿಸ್ತರಣೆಯಿಂದ ಜಗಳ ಆರಂಭವಾಗಿದೆ. ಖಾತೆ ಯಾವ ರೀತಿ ಹಂಚುತ್ತಾರೆ ಅನ್ನೋದರ‌ ಮೇಲೆ ಜಗಳ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ  ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದ್ದಕ್ಕೆ ಮೂಲ ಬಿಜೆಪಿಗರು ಸಿಟ್ಟಾಗಿದ್ದಾರೆ. ಯಡಿಯೂರಪ್ಪನವರು ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೆ ಕಾಯ್ದು ನೋಡಬೇಕು.
ನಾವು ಮಧ್ಯಂತರ ಚುನಾವಣೆ ಬರುತ್ತೆ ಅನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿಯಲ್ಲಿ ಬಹಳಷ್ಟು ಗೊಂದಲಗಲು ಇರುವ ಕಾರಣದಿಂದ ಸರ್ಕಾರ ಬಹಳ ದಿನ ಇರುವುದಿಲ್ಲ. ಇದು ಸ್ಥಿರವಾದ ಸರ್ಕಾರ ಅಲ್ಲ, ಗೊಂದಲಗಳ ಸರ್ಕಾರವಾಗಿದೆ. ಸಾರ್ವತ್ರಿಕ ಚುನಾವಣೆ ಆಗಬೇಕು, ಇಲ್ಲವೇ ರಾಷ್ಟ್ರಪತಿ ಆಡಳಿತ ಹೇರಬೇಕು. ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಸರ್ಕಾರ ಅಸ್ಥಿರವಾದರೆ ನಾವು ಯಾರ ಜೊತೆಗೂ ಹೋಗಲ್ಲಾ, ನೇರವಾಗಿ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.