Asianet Suvarna News

'ಬೋಗಸ್‌ ಪ್ಯಾಕೇಜ್‌ ಹೆಸ​ರಿ​ನಲ್ಲಿ ಪ್ರಧಾನಿ ಮೋದಿ ಮತ್ತೆ ಸುಳ್ಳು ಹೇಳ್ತಿದ್ದಾರೆ'

ಪ್ರಧಾನಿ ಮೋದಿ​ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಣೆ ಮಾಡಿದೆ| ಮೋದಿ ಘೋಷಿ​ಸಿ​ರುವ ಪ್ಯಾಕೇಜ್‌ನ ಹಣಕ್ಕೆ ಎಷ್ಟು ಸೊನ್ನೆ​ಗ​ಲಿವೆ ಎಂಬುದು ನಿಮಗೆ ಗೊತ್ತಾ? ಇದು ಬೋಗಸ್‌ ಘೋಷಣೆ ಅಲ್ಲದೆ ಮತ್ತೇನು ಎಂದು ಪ್ರಶ್ನಿ​ಸಿ​ದ: ಸಿದ್ದರಾಮಯ್ಯ| ಹೈಕ​ಮಾಂಡ್‌ ನಿರ್ದೇ​ಶ​ನ​ದಂತೆ ಕೊರೋನಾ ಲಾಕ್‌ಡೌನ್‌ ನಿಂದ ಸಂಕ​ಷ್ಟ​ದ​ಲ್ಲಿ​ರುವ ಜನರ ನೆರ​ವಿಗೆ ಕಾಂಗ್ರೆಸ್‌ ಪಕ್ಷ ಧಾವಿ​ಸಿದೆ|

Former CM Siddaramaiah Talks Over PM Narendra Modi
Author
Bengaluru, First Published May 24, 2020, 2:04 PM IST
  • Facebook
  • Twitter
  • Whatsapp

ಕುದೂರು/ರಾ​ಮ​ನ​ಗ​ರ​:(ಮೇ.24): ಬಿಜೆಪಿ ನೇತೃ​ತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾ​ರ​ಗಳ ಪ್ಯಾಕೇಜ್‌ ಘೋಷ​ಣೆ​ಗಳು ಬರೀ ಬೋಗಸ್‌ ಪ್ಯಾಕೇಜ್‌ ಎಂದು ವಿರೋಧ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಟೀಕಿ​ಸಿದ್ದಾರೆ. 

ಕುದೂ​ರಿ​ನಲ್ಲಿ ಶನಿ​ವಾ​ರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಪ್ರಧಾನಿ ನರೇಂದ್ರ ಮೋದಿ​ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಣೆ ಮಾಡಿದೆ. ಅವರು ಘೋಷಿ​ಸಿ​ರುವ ಪ್ಯಾಕೇಜ್‌ನ ಹಣಕ್ಕೆ ಎಷ್ಟು ಸೊನ್ನೆ​ಗ​ಲಿವೆ ಎಂಬುದು ನಿಮಗೆ ಗೊತ್ತಾ? ಇದು ಬೋಗಸ್‌ ಘೋಷಣೆ ಅಲ್ಲದೆ ಮತ್ತೇನು ಎಂದು ಪ್ರಶ್ನಿ​ಸಿ​ದರು.

ದೇಶ ಆರ್ಥಿ​ಕ​ವಾಗಿ ಸುಧಾ​ರಣೆ ಆಗ​ಬೇ​ಕಾ​ದರೆ ಬಡ​ವರ ಜೇಬಿ​ನಲ್ಲಿ ಹಣ ಇರ​ಬೇಕು. ಜನ​ರಿಗೆ ಸಾಲ ಕೊಡು​ತ್ತಾರೆ. ಮತ್ತೆ ಆ ಹಣ​ವನ್ನು ಜನರು ವಾಪಸ್‌ ನೀಡ​ಬೇಕು. ಜನರ ಜೇಬಿನಲ್ಲಿ ಹಣ ಇಲ್ಲದೆ ಹೋದರೆ ಯಾವ ವ್ಯಾಪಾರ ಮಾಡಲು ಸಾಧ್ಯ​ವಾ​ಗು​ತ್ತದೆ ಎಂದು ಪ್ರಶ್ನೆ ಮಾಡಿ​ದ​ರು.

'ಪ್ರಧಾನಿ ಮೋದಿ ಬೇಜ​ವಾ​ಬ್ದಾ​ರಿ​ಯಿಂದ ಭಾರತಕ್ಕೆ ಕೊರೋನಾ ಬಂದಿದೆ'

ನರೇಂದ್ರ ಮೋದಿ ಪ್ರಧಾನಿ ಮಂತ್ರಿ ಆದಾ​ಗ​ನಿಂದಲೂ ಸಾಕಷ್ಟು ಸುಳ್ಳು ಹೇಳಿ​ದ್ದಾರೆ. ಇದೀಗ ಪ್ಯಾಕೇಜ್‌ ಹೆಸ​ರಿ​ನಲ್ಲಿ ಮತ್ತೆ ಸುಳ್ಳು ಹೇಳು​ತ್ತಿ​ದ್ದಾರೆ. ಈಗ ಪರಿ​ಸ್ಥಿತಿ ಸಂಕ​ಷ್ಟ​ದ​ಲ್ಲಿದೆ. ಆರ್ಥಿ​ಕ​ವಾಗಿ ಚೇತ​ರಿ​ಸಿ​ಕೊ​ಳ್ಳುವ ಸಲು​ವಾಗಿ ಲಾಕ್‌ ಡೌನ್‌ ಸಡಿ​ಲಿಕೆ ಮಾಡಿ​ದ್ದಾರೆ ಎಂದು ಹೇಳಿ​ದರು.

ಹೈಕ​ಮಾಂಡ್‌ ನಿರ್ದೇ​ಶ​ನ​ದಂತೆ ಕೊರೋನಾ ಲಾಕ್‌ ಡೌನ್‌ ನಿಂದ ಸಂಕ​ಷ್ಟ​ದ​ಲ್ಲಿ​ರುವ ಜನರ ನೆರ​ವಿಗೆ ಕಾಂಗ್ರೆಸ್‌ ಪಕ್ಷ ಧಾವಿ​ಸಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯ​ಕ​ರ್ತರು ತಮ್ಮ ಕೈಲಾದ ಸಹಾಯ ಮಾಡು​ತ್ತಿ​ದ್ದಾರೆ. ಅದ​ರಂತೆ ಕಷ್ಟ​ದ​ಲ್ಲಿ​ರುವ ಜನ​ರಿಗೆ ಆಹಾರ ಕಿಟ್‌ಗಳನ್ನು ವಿತ​ರಣೆ ಮಾಡು​ತ್ತಿ​ದ್ದೇವೆ ಎಂದ​ರು.

ವಕ್ಫ್ ಮಂಡಳಿಯಿಂದ ಹಣವನ್ನು ಕೊರೋನಾ ನಿರ್ವಹಣೆಗೆಂದು ಮುಖ್ಯಮಂತ್ರಿ ಪರಿಹಾರಕ್ಕೆ ಕೊಡಬೇಡಿ ಎಂದು ಶಾಸ​ಕ ಜಮೀರ್‌ ಅಹಮದ್‌ ಹೇಳಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ, ಈ ಪ್ರಶ್ನೆಯನ್ನು ವಕ್ಫ್ಗೆ ಸಂಬಂಧಿ​ಸಿ​ದ​ವ​ರನ್ನು ಕೇಳಿ ಎಂದು ಹೇಳಿ ತೆರ​ಳಿ​ದ​ರು.
 

Follow Us:
Download App:
  • android
  • ios