*   ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿದ ಬಾಗಲಕೋಟೆ ಜಿಲ್ಲಾ​ಧಿಕಾರಿ *  ಎರಡು ದಿನಗಳಿಂದ ಸ್ವಕ್ಷೇತ್ರ ಬಾದಾಮಿಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ *  ಜಿಲ್ಲಾಧಿ​ಕಾರಿಗಳು ಕ್ಷೇತ್ರದ ಪ್ರತಿನಿ​ಧಿಯನ್ನು ಸಂಪರ್ಕಿಸಿ ಅನುಮತಿ ಪಡೆಯಬೇಕು

ಬಾಗಲಕೋಟೆ(ಜೂ.20): ಕೇಂದ್ರ ಸಚಿವರು ಪಾಲ್ಗೊಳ್ಳುವ ಬಾದಾಮಿಯ ಪಟ್ಟದಕಲ್ಲಿನ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿರುವ ಬಾಗಲಕೋಟೆ ಜಿಲ್ಲಾ​ಧಿಕಾರಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ(ಭಾನುವಾರ) ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಎರಡು ದಿನಗಳಿಂದ ಸ್ವಕ್ಷೇತ್ರ ಬಾದಾಮಿಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಜೂ.21ರಂದು ಪಟ್ಟದಕಲ್ಲಿನಲ್ಲಿ ನಡೆಯುವ ಯೋಗ ದಿನಾಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮನ್ನು ಕೇಳದೆ ಹೆಸರು ಹಾಕಿದ ಜಿಲ್ಲಾ​ಧಿಕಾರಿ ಸುನಿಲ್‌ ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಭ್ರಷ್ಟ ವ್ಯವಸ್ಥೆ ತೊಲಗಿಸಿದ ಕೀರ್ತಿ ಬಿಜೆಪಿಯದ್ದು: ಸಚಿವ ಕಾರಜೋಳ

ದೂರವಾಣಿ ಮೂಲಕ ಜಿಲ್ಲಾ​ಧಿಕಾರಿಗಳನ್ನು ಸಂಪರ್ಕಿಸಿದ ಸಿದ್ದರಾಮಯ್ಯ, ಶಿಷ್ಟಾಚಾರ ಮರೆತಿರುವ ನೀವು ಕೇಂದ್ರದ ಸಚಿವರು ಬರುತ್ತಿದ್ದಾರೆಂಬ ಕಾರಣ ಮುಂದಿಟ್ಟುಕೊಂಡು ಶಾಸಕನಾಗಿರುವ ನನ್ನನ್ನು ಸಂಪರ್ಕಿಸದೆ ನನ್ನ ಹೆಸರು ಹಾಕಿದ್ದೀರಿ. ಇದರಿಂದ ಕ್ಷೇತ್ರದ ಜನತೆಗೆ ಯಾವ ಸಂದೇಶ ಹೋಗುತ್ತದೆ? ಜಿಲ್ಲಾಧಿ​ಕಾರಿಗಳು ಕ್ಷೇತ್ರದ ಪ್ರತಿನಿ​ಧಿಯನ್ನು ಸಂಪರ್ಕಿಸಿ ಅನುಮತಿ ಪಡೆಯಬೇಕು. ಆದರೆ, ನೀವು ಅದನ್ನು ಪಾಲಿಸಿಲ್ಲ ಎಂದರಲ್ಲದೆ, ಅ​ಧಿವೇಶನಕ್ಕೂ ಮುನ್ನ ಬಂದು ನನ್ನನ್ನು ಕಾಣಬೇಕು ಎಂದು ಎಚ್ಚರಿಸಿದರು.