Asianet Suvarna News Asianet Suvarna News

ಜನಾರ್ಧನ ರೆಡ್ಡಿ ಬಳ್ಳಾರಿಗೆ ಬರಲಿ ನೋಡೋಣ: ಸಿದ್ದು ಗುದ್ದು

ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ  ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತಿನ ಸಮರ ಮುಂದುವರೆಸಿದ್ದಾರೆ. 

Former Cm Siddaramaiah Slams Janardhan Reddy at Ballari bypoll
Author
Bengaluru, First Published Oct 31, 2018, 8:58 PM IST
  • Facebook
  • Twitter
  • Whatsapp

ಬಳ್ಳಾರಿ, [ಅ.31]: ಬಳ್ಳಾರಿ ಲೋಕಸಭಾ ಉಪಚುನಾವಣಾ ದಿನದಿಂದ ದಿನಕ್ಕೆ ರಂಗೇರಿದೆ. ಮತ್ತೊಂದೆಡೆ ಪಕ್ಷಗಗಳ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ.

ಇಂದು ಬಳ್ಳಾರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜನಾರ್ಧನ ರೆಡ್ಡಿ ವಿರುದ್ಧ ಮಾತಿನ ಸಮರ ಮುಂದುವರೆಸಿದ್ದು, ಇವತ್ತು ಜನಾರ್ಧನ ರೆಡ್ಡಿ  ಬಳ್ಳಾರಿಗೆ ಬರಲಿ ನೋಡೋಣ ಎಂದು ಸವಾಲು ಹಾಕಿದರು.

ಸದನದಲ್ಲಿ ನನಗೆ ಶ್ರೀರಾಮುಲು ಮತ್ತು ರೆಡ್ಡಿ ನನಗೆ ಹೊಡೆಯಲು ಧಾವಿಸಿದ್ರು. ಇವತ್ತು ರೆಡ್ಡಿಗೆ ಯಾವ ಪರಿಸ್ಥಿತಿ ಆಗಿದೆ? ಇವತ್ತು ಅದೇ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರೋ ಹಾಗೆ ಇಲ್ಲ ಎಂದು ಸಿದ್ದು ರೆಡ್ಡಿಗೆ ಗುದ್ದು ನೀಡಿದರು.

ಅಂದು ತೊಡೆ ತಟ್ಟಿ ಬಳ್ಳಾರಿಗೆ ಬಾ ಅಂತಾ ಸವಾಲು ಹಾಕಿದ್ರಿ ಇವತ್ತು ಜನಾರ್ಧನ ರೆಡ್ಡಿ ಬಳ್ಳಾರಿಗೆ ಬರಲಿ ನೋಡೋಣ. ಕಾನೂನು ನಿಮ್ಮನ್ನು ಕಟ್ಟಿ ಹಾಕಿದೆ. ಇದೇ ಪ್ರಜಾಪ್ರಭುತ್ವ ಎಂದು ಟಾಂಗ್ ಕೊಟ್ಟರು.

ಇವರಿಗೆ ಮನುಷ್ಯತ್ವವೇ ಇಲ್ಲ, ಕ್ರೂರಿಗಳು, ಮೃಗಗಳು ಎಷ್ಟೋ ಮೇಲು . ನಿಮಗೆ ರಿಪಬ್ಲಿಕ್ ಆಫ್ ಬಳ್ಳಾರಿ ಬೇಕಾ ಅಥವಾ ವಾಯ್ಸ್ ಆಫ್ ಬಳ್ಳಾರಿ ಬೇಕಾ ಅಂತಾ ಡಿಸೈಡ್ ಮಾಡಿ ಎಂದರು.

Follow Us:
Download App:
  • android
  • ios