ರಾಜಕೀಯದಲ್ಲಿ ಏನೇ ಇದ್ದರೂ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು ಎಂದ ಎಚ್‌.ಡಿ.ರೇವಣ್ಣ| ಅರಸೀಕೆರೆ ತಾಲೂಕಿನ ಗಂಗೆಮಡು ಗ್ರಾಮದಲ್ಲಿ ಕಾಗಿನೆಲೆ ಕನಕಪೀಠದಿಂದ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ರೇವಣ್ಣ ಭಾಗಿ| ರಾಜಕೀಯದಲ್ಲಿ ಏರುಪೇರು ಸಹಜ. ಆದರೆ, ವಿಶ್ವಾಸಕ್ಕೆ ಎಂದೂ ಕೂಡ ಧಕ್ಕೆ ಬರಬಾರದು| ಸಿದ್ದರಾಮಯ್ಯ ಅವರ ವಿರುದ್ಧ ನಾನೆಂದೂ ಕೂಡ ಸಣ್ಣದಾಗಿ ಮಾತನಾಡಲು ಹೋಗಲ್ಲ

ಹಾಸನ:(ಸೆ.21)  ರಾಜಕೀಯದಲ್ಲಿ ಏನೇ ಇದ್ದರೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ಅಗಾಧವಾದದ್ದು, ರಾಜಕೀಯ ಏನೇ ಇರಲಿ, ಯಾರು ಏನೇ ಹೇಳಲಿ ಅವರೇ ನಮ್ಮ ನಾಯಕರು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಸಿದ್ದರಾಮಯ್ಯನವರ ನಡುವೆ ಸಮ್ಮಿಶ್ರ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ವಾಗ್ವಾದ ನಡೆದ ನಡುವೆ ರೇವಣ್ಣ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಅರಸೀಕೆರೆ ತಾಲೂಕಿನ ಗಂಗೆಮಡು ಗ್ರಾಮದಲ್ಲಿ ಕಾಗಿನೆಲೆ ಕನಕಪೀಠದಿಂದ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ರೇವಣ್ಣ ಜೊತೆಯಾಗಿ ಪಾಲ್ಗೊಂಡು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯ ಅವರ ವಿರುದ್ಧ ನಾನೆಂದೂ ಕೂಡ ಸಣ್ಣದಾಗಿ ಮಾತನಾಡಲು ಹೋಗಲ್ಲ. ರಾಜಕೀಯದಲ್ಲಿ ಏರುಪೇರು ಸಹಜ. ಆದರೆ, ವಿಶ್ವಾಸಕ್ಕೆ ಎಂದೂ ಕೂಡ ಧಕ್ಕೆ ಬರಬಾರದು ಎಂದು ಹೇಳಿದರು. 

ಸೆಲ್ಫಿಗಾಗಿ ಮುಗಿ ಬಿದ್ದ ಅಭಿಮಾನಿಗಳು:

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಅಭಿಮಾನಿಗಳು ಮುಗಿ ಬಿದ್ದರು. ವೇದಿಕೆ ಮೇಲೆ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಸಿದ್ದು ಫೋಸ್‌ ನೀಡಿದರು. ಕೂಲಾಗಿ ಎಲ್ಲರೊಟ್ಟಿಗೂ ಸೆಲ್ಫಿ ಕ್ಲಿಕ್ಕಸಲು ಸಿದ್ದರಾಮಯ್ಯ ಸಹಕರಿಸಿದರು.