Hanuman Jayanti: ಯಲಗೂರು ಆಂಜನೇಯ ದರ್ಶನ ಪಡೆದ ಮಾಜಿ ಸಿಎಂ: HDK ಸಾಫ್ಟ್ ಹಿಂದೂತ್ವ ಪ್ರದರ್ಶನ..!
* ಅರಮನೆ ಮೈದಾನದಲ್ಲಿ ಗಂಗಾರತಿಯನ್ನು ಮಾಡ್ತೀವಿ ಎಂದ ಹೆಚ್ಡಿಕೆ
* ದೇವೆಗೌಡರ ಕೊಡುಗೆ ವರ್ಣನೆ ಮಾಡಲು ಸಾಧ್ಯವಿಲ್ಲ
* ಅನುದಾನ ಸಾಕಾಗುತ್ತಿಲ್ಲ - ಹಚ್ಡಿಕೆ ಅಸಮಧಾನ
ವಿಜಯಪುರ(ಏ.16): ಧರ್ಮ ದಂಗಲ್ ವಿಚಾರದಲ್ಲಿ ಹಿಂದೂ(Hindu) ಸಂಘಟನೆಗಳ ವಿರುದ್ಧ ಹರಿಹಾಯ್ದು, ಮುಸ್ಲಿಂ(Muslim) ಸಮುದಾಯದ ಪರ ನಿಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಈಗ ಸಾಫ್ಟ್ ಹಿಂದೂತ್ವ ಪ್ರದರ್ಶಿಸಿದ್ದಾರೆ. ಜನತಾ ಜಲಧಾರೆ ಕಾರ್ಯಕ್ರಮ ನಿಮಿತ್ಯ ವಿಜಯಪುರ(Vijayapura) ಜಿಲ್ಲೆಯ ಆಲಮಟ್ಟಿಗೆ ಭೇಟಿ ನೀಡಿದ ಹೆಚ್ಡಿಕೆ ಇಂದು ಜಾಗೃತ ಸ್ಥಳ ಯಲಗೂರು ಆಂಜನೇಯ ದೇಗುಲಕ್ಕೆ ಭೇಟಿ ನೀಡಿದರು. ಇಂದು ಹನುಮ ಜಯಂತಿ ಹಿನ್ನೆಲೆ ಮಾರುತಿಯ ದರ್ಶನ ಪಡೆದರು. ಈ ಮೂಲಕ ಸಾಫ್ಟ್ ಹಿಂದೂತ್ವ ಪ್ರದರ್ಶಿಸಿದ್ದಾರೆ.
ಮಾಧ್ಯಮಗಳಿಗೆ ಹೆಚ್ಡಿಕೆ ಹೇಳಿಕೆ
ಯಲಗೂರು ಆಂಜನೇಯ ದರ್ಶನ ಪಡೆದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ನಮ್ಮ ಪಕ್ಷದಿಂದ ಇಂದು ಹನುಮ ಜಯಂತಿ ಇರುವುದರಿಂದ ಜನತಾ ಜಲಧಾರೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದ್ದು. ಅದರಂತೆ ಹನುಮ ಜಯಂತಿ ಹಿನ್ನಲೆ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿ ಆರಂಭಿಸಿದ್ದೇವೆ ಎಂದಿದ್ದಾರೆ.
ತೊರವಿ ಲಕ್ಷ್ಮೀನರಸಿಂಹನ ದರ್ಶನ ಪಡೆದಾಗಲೆಲ್ಲ ಪ್ರಹ್ಲಾದ್ ಜೋಶಿಗೆ ಕುಲಾಯಿಸಿದೆ ಲಕ್..! ಈ ಬಾರಿ ಏನು?
ಅನುದಾನ ಸಾಕಾಗುತ್ತಿಲ್ಲ - ಹಚ್ಡಿಕೆ ಅಸಮಧಾನ
ಮಹದಾಯಿ(Mahadayi), ಕೃಷ್ಣಾ ಮೇಲ್ದಂಡೆ, ಭದ್ರ ಮೇಲ್ದಂಡೆ ಯೋಜನೆಗೆ ಸರ್ಕಾರ ನೀಡ್ತಿರೋ ಅನುದಾನ(Grants) ಸಾಲುತ್ತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷ ಕೇಂದ್ರದಲ್ಲಿ ಸರಿಯಾದ ಮಹತ್ವ ನೀಡುತ್ತಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.
ವಿಜಯಪುರ: ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!
ದೇವೇಗೌಡರ ಕೊಡುಗೆ ವರ್ಣನೆ ಮಾಡಲು ಸಾಧ್ಯವಿಲ್ಲ
ಹಿಂದೆ 17ಜನ ಜೆಡಿಎಸ್(JDS) ಸದಸ್ಯರನ್ನ ಆರಿಸಿ ಕಳಿಸಿದಾಗ ದೇವೇಗೌಡರು(HD Devegowda) ಪ್ರಧಾನಿಯಾಗಿದ್ರು. ಆಗ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ(Almatti Dam) ಹೆಚ್ಚು ಅನುದಾನವನ್ನು ದೇವೇಗೌಡರು ನೀಡಿದ್ರು. ಮತ್ತು ಈ ಭಾಗದ ನೀರಾವರಿ ಯೋಜನೆಗೆ(Irrigation Project) ದೇವೇಗೌಡರು ನೀಡಿದ ಕೊಡುಗೆ ಯಾರೂ ವರ್ಣನೆ ಮಾಡಲು ಸಾಧ್ಯವಿಲ್ಲ.
ಅರಮನೆ ಮೈದಾನದಲ್ಲಿ ಗಂಗಾರತಿ
ನಾವು ಎಲ್ಲಾ ಯೋಜನೆ ಆರಂಭಿಸ್ತೇವೆ. ಜನತಾ ಜಲದಾರೆ ಕಾರ್ಯಕ್ರಮ ಇಂದು ರಾಜ್ಯದ 15ಕಡೆ ಏಕ ಕಾಲದಲ್ಲಿ ಪ್ರಾರಂಭವಾಗಲಿದೆ. 150 ಕಡೆ ಸಂಚಾರ ನಡೆಯಲಿದೆ. ಕೃಷ್ಣಾ ನದಿ ನೀರನ್ನ ತುಂಬಿ, ಕಳಸ ಪೂಜೆ ಮಾಡುತ್ತೇವೆ. ಸಂಕಲ್ಪ ಯಾತ್ರೆ ಬೆಂಗಳೂರಿಗೆ ತಲುಪಿದ ಬಳಿಕ ಯಾತ್ರೆಯ ಎಲ್ಲಾ ಕಳಸಗಳು ಒಂದು ಕಡೆ ಸೇರಲಿವೆ. ಅಂದು ಅರಮನೆ ಮೈದಾನದಲ್ಲಿ ಗಂಗಾರತಿ ನಡೆಯಲಿದೆ.