‘ಬಿಜೆಪಿಯಿಂದ ಹೊರ ಬರಲು ಸಿದ್ಧರಾಗಿದ್ದಾರೆ 15 ಮಂದಿ’
ರಾಜ್ಯ ರಾಜಕೀಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. 10 ರಿಂದ 15 ಜನ ಬಿಜೆಪಿ ಬಿಟ್ಟು ಹೊರಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದು, ರಾಜ್ಯ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹಾಸನ [ಜ.06]: ಹಾಸನ ಜಿಲ್ಲೆಯ ತೆಂಗು ಬೆಳೆಗಾರರಿಗೆ ನಾನು 180 ಕೋಟಿ ಪರಿಹಾರ ನೀಡಿದ್ದೆ. ಆದರೆ ಈ ಜಿಲ್ಲೆಗೆ ಹಿಂದೆ ಕೊಟ್ಟಿದ್ದ ಹಣ ಬಿಡುಗಡೆ ಮಾಡಿದರೆ ಸಾಕು. ಆದರೆ ಎಷ್ಟೋ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಆರ್ಥಿಕ ನಿರ್ವಹಣೆಯಲ್ಲಿ ರಾಜ್ಯ ಮೇಲ್ದರ್ಜೆಗೆ ಏರಿದ್ದಕ್ಕೆ ನನ್ನ ಆಡಳಿತ ಕಾರಣ ಎಂದರು.
ಯಡಿಯೂರಪ್ಪ ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದು, ರಾಜಾಹುಲಿ ಆಗಿರುವ ಸಿಎಂ ಪ್ರಧಾನಿ ಮುಂದೆ ಇಲಿಯಾಗಿದ್ದಾರೆ. ನಾವಾಗಿಯೇ ಸರ್ಕಾರ ಬೀಳಿಸಲು ಹೋಗುವುದಿಲ್ಲ. ಸ್ವಲ್ಪ ದಿನಗಳ ಕಾಲ ಆಡಳಿತ ನಡೆಸಲಿ. ಸಂಪೂರ್ಣ ರಾಜ್ಯದಲ್ಲಿ ಕೆಲಸಗಳು ಸ್ಥಗಿತ ಆಗಿವೆ ಎಂದು ಆರೋಪಿಸಿದ್ದು, ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಲಿ ಎಂದರು.
ಬಪ್ಪರೇ..! ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ HDK.
ಇನ್ನು ನನ್ನ ಪಕ್ಷ ಸಂಘಟನೆ ಮಾಡುತ್ತೇನೆ. ಈಗಲೇ ರಾಜಕೀಯ ನಿವೃತ್ತಿ ಹೊಂದುವಷ್ಟು ವಯಸ್ಸು ನನಗೆ ಆಗಿಲ್ಲ. ನನಗೆ ವೈರಾಗ್ಯವೂ ಬಂದಿಲ್ಲ. ನಾನು ನನ್ನ ತಪ್ಪು ಸರಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ. ಛೀ ಎನ್ನಿಸಿಕೊಂಡು ರಾಜಕೀಯ ಮಾಡಲ್ಲ. ಜನರ ಪ್ರೀತಿ ಇರುವವರೆಗೆ ರಾಜಕೀಯದಲ್ಲಿ ಮುಂದುವರಿಯುವೆ ಎಂದರು.
HDK ಮತ್ತು ಸಿದ್ದುಗೆ ಬಹಿರಂಗ ಟಾಸ್ಕ್ ಕೊಟ್ಟ ಯಡಿಯೂರಪ್ಪ...
ಇನ್ನು ಅಧಿಕಾರ ಎನ್ನುವುದು ಯಾರಿಗೂ ಶಾಶ್ವತ ಅಲ್ಲ. ಈಗಾಗಲೇ ಬಿಜೆಪಿಯಿಂದ ಬೇಸತ್ತು 10 - 15 ಜನರು ಹೊರ ಬರಲು ಸಿದ್ಧರಾಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸಿದರು. ಒಳ್ಳೆ ಕೆಸಲ ಮಾಡಿ ಜನ ನೆನೆಯುವಂತೆ ಮಾಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.