ಹೆಚ್‌ಡಿಕೆ ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಅಂದಿದ್ರು, ಈಗ ಮಹಿಳೆಯರೇ ದಾರಿ ತಪ್ಪಿದ್ದಾರೆ ಎಂದ್ರು; ಚಲುವರಾಯಸ್ವಾಮಿ ಕಿಡಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ರೈತ ಮಹಿಳೆಗೆ ಎಲ್ಲಿ ಮಲಗಿದ್ದಿ ಎಂದು ಕೇಳಿದ್ದರು. ಈಗ ಇಡೀ ಮಹಿಳೆಯರೇ ದಾರಿ ತಪ್ಪಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟೀಕೆ ಮಾಡಿದ್ದಾರೆ.

Former CM HD Kumaraswamy scolding to Karnataka women they lost their way sat

ಮಂಡ್ಯ (ಏ.15): ರಾಜ್ಯದಲ್ಲಿ ಮಹಿಳೆಯರ ಬಗ್ಗೆ ತಲೆ ತಗ್ಗಿಸುವಂತಹ ಹೇಳಿಕೆ ನೀಡುವುದು ನಮ್ಮ ಸಂಸ್ಕೃತಿಯಲ್ಲ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಹಿಂದೊಮ್ಮೆ ರೈತ ಮಹಿಳೆಗೆ ನೀನು ಎಲ್ಲಿ ಮಲಗಿದ್ದೀಯಮ್ಮಾ? ಎಂದು ಕೇಳಿದ್ದರು. ಈಗ ಗ್ಯಾರಂಟಿ ಯೋಜನೆ ಪಡೆದು ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿದ್ದಾರೆ. ಯಾವುದೇ ರಾಜಕಾರಣಿಗಳಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಟೀಕೆ ಮಾಡಿದರು. ಇಂತಹ ಮಾತುಗಳು ನಮ್ಮ ಸಂಸ್ಕೃತಿಯಲ್ಲ. ಈ‌ ಹಿಂದೆ ಕೂಡ ರೈತ ಮಹಿಳೆ ಬಗ್ಗೆ ಬೇರೆ ತರಹ ಮಾತನಾಡಿದ್ದರು. ಇವತ್ತು ಇಡೀ ಮಹಿಳೆಯರ ಬಗ್ಗೆ ಈ ರೀತಿ ಮಾತನಾಡ್ತಾರೆ. ಒಬ್ಬ ಮಾಜಿ ಸಿಎಂ ಈ ಮಟ್ಟಿಗೆ ಮಾತನಾಡೋದು ಎಷ್ಟರ ಮಟ್ಟಿಗೆ ಸರಿ?. ಇದನ್ನ ಅವರೇ ಯೋಚನೆ ಮಾಡಲಿ. ಅವರ ಈ ಮಾತು ಬಾಯಿ ತಪ್ಪಿ ಹಾಡಿದ್ದಲ್ಲ.ಅವರ ಮನಸ್ಸಿನಲ್ಲಿರುವ ರೋಷಾವೇಶ, ಕಲ್ಪನೆಯಿಂದ ಬಂದ ಮಾತು ಎಂದು ಹೇಳಿದರು.

ಕರ್ನಾಟಕ ಲೂಟಿ ಆಗೋದನ್ನು ತಪ್ಪಿಸಲೆಂದೇ ಮೊದಿಯೊಂದಿಗೆ ಹೋಗಲು ಕುಮಾರಸ್ವಾಮಿಗೆ ಹೇಳಿದೆ: ಹೆಚ್.ಡಿ.ದೇವೇಗೌಡ

ರಾಜ್ಯದಲ್ಲಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದರೆ ನೂರಾರು ಅರ್ಥ ಬರುತ್ತದೆ. ಈ ಹಿಂದೆಯೂ ಎಲ್ಲಿ ಮಲಗಿದ್ರು ಎಂದಿದ್ದ ಮಾತಿಗೆ ಅರ್ಥ ಹೇಳೋಕೆ ಸಾಧ್ಯನಾ? ಅವರ ಈ ಹೇಳಿಕೆಗಳು ತಲೆ ತಗ್ಗಿಸುವಂತದ್ದಾಗಿವೆ. ಯಾವುದೇ ರಾಜಕಾರಣಿಗಳಿಗೆ ಇದು ಶೋಭೆ ತರಲ್ಲ. ತಮ್ಮ ಹೇಳಿಕೆಗೆ ಹೆಚ್ಡಿಕೆಯಿಂದ ವಿಷಾಧ ವಿಚಾರ. ನಿಮ್ಮನೆ ಹೆಣ್ಣುಮಕ್ಕಳ ರೀತಿ ಬೇರೆ ಮನೆ ಮಕ್ಕಳನ್ನ ನೋಡಬೇಕು. ಆದ್ರೆ ನಿಮ್ಮನೆ ಹೆಣ್ಣು ಮಕ್ಕಳು ಬೇರೆ, ನಮ್ಮನೆ ಹೆಣ್ಣು ಮಕ್ಕಳು ಬೇರೆ ಎಂದು ಮಾತಾಡ್ಬಿಟ್ರೆ ಆಗುತ್ತಾ? ವಿಷಾಧ ವ್ಯಕ್ತಪಡಿಸಿದ್ರೆ ಕಡಿಮೆಯಾದ ಗೌರವ ವಾಪಸ್ಸು ಬರುತ್ತಾ?. ಜನರು, ಮಹಿಳೆಯರೇ ಅದರ ಬಗ್ಗೆ ತೀರ್ಮಾನ ಮಾಡ್ತಾರೆ. ಖಂಡಿತ ಇದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದರು.

ನರೇಂದ್ರ ಮೋದಿ ಅವರು ಮೊದಲ ಅವಧಿಯ ಚುನಾವಣೆಯ ವೇಳೆ ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂ. ಹಾಕ್ತೀನಿ ಎಂದಿದ್ದರು, ಆ ಹಣ ಕೊಟ್ಟರಾ? ಬ್ಲಾಕ್ ಮನಿ ತರ್ತೀನಿ ಅಂದ್ರು ತಂದ್ರಾ? ಬಿಜೆಪಿಯರದ್ದು ಯಾವ ಗ್ಯಾರಂಟಿ ಇಲ್ಲ. ಮೋದಿನೆ ಗ್ಯಾರಂಟಿ ಅಂತಾರೆ ಅಷ್ಟೇ. ಇವೆಲ್ಲ ಬಹಳ ದಿನ ನಡೆಯಲ್ಲ. ಈ ಚುನಾವಣೆಯಲ್ಲಿ ಇಂಡಿಯಾ ಕಾಂಗ್ರೆಸ್ ಗೆಲ್ಲುತ್ತೆ. 20 ಕ್ಕು ಹೆಚ್ಚು ಸೀಟು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಸೆಂಟ್ರಲ್ ಮಿನಿಸ್ಟರ್ ಆದರೆ ಮಂಡ್ಯ ಜನರ ಹೊಟ್ಟೆ ತುಂಬುತ್ತದೆಯೇ? ಹಿಂದೆ ಕೂಡ ರಾಜ್ಯದಲ್ಲಿ ಮೂರು ಜನ ಸೆಂಟ್ರಲ್ ಮಿನಿಸ್ಟರ್ ಇದ್ದರು. ರಾಜ್ಯಕ್ಕೆ ಆ ಮಿನಿಸ್ಟರ್ ಏನ್ ಮಾಡುದ್ರು? ಎಲ್ಲವನ್ನೂ ರಾಜ್ಯ ಸರ್ಕಾರವೇ ಮಾಡಬೇಕು. ಕುಮಾರಸ್ವಾಮಿ‌ ಪೆನ್ ಪೇಪರ್ ಇದ್ದು, ಸಿಎಂ ಆಗಿದ್ದಾಗಲೆ ಏನು ಮಾಡದವರು. ಈಗ ಸಂಸದರಾಗಿ ಏನ್ ಮಾಡ್ತಾರೆ. ಸ್ಟಾರ್ ಚಂದ್ರು ಗೆದ್ದರೇ ನಮ್ಮ ರಾಜ್ಯ ಸರ್ಕಾರದ ಜೊತೆ ಶಕ್ತಿಯಾಗಿ ನಿಲ್ತಾರೆ. ಕಾಂಗ್ರೆಸ್‌ನವರು ಹೇಮಾಮಾಲಿನಿಗೆ ಕೆಟ್ಟದಾಗಿ ಮಾತನಾಡಲಿಲ್ಲವಾ? ಕಾಂಗ್ರೆಸ್ ನವರು ಗಂಡು, ಹೆಣ್ಣು, ನೆಲ, ಜಲಕ್ಕೆ ಗೌರವ ಕೊಟ್ಟು ಬದುಕಿದ್ದೇವೆ. ಆ ರೀತಿ ನಾವು ಮಾತನಾಡುವ ಪ್ರಶ್ನೆಯೆ ಇಲ್ಲ. ಅಧಿಕಾರಕ್ಕೆ ಕಿತ್ತಾಡಿದವರು ಇಂದು ಒಂದಾಗಿದ್ದಾರೆ. ಎಲ್ಲವನ್ನು ಜನರು ನೋಡಿದ್ದು, ಅವರೇ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಪ್ರಧಾನಿ ಮೋದಿಗೆ ಕೊಟ್ಟ ಚೀಟಿ ರಹಸ್ಯ ಬಯಲು; ಮೇಕೆದಾಟು, ಮಹದಾಯಿಗೆ ಬೇಡಿಕೆಯಿಟ್ಟ ಶಾಸಕ ಜಿ.ಟಿ.ದೇವೇಗೌಡ

ಇಡೀ ದೇಶದಲ್ಲಿ ಭಾವನೆಗಳ ಮೇಲೆ ಚುನಾವಣೆ ನಡೆಯುತ್ತದೆ. ಜನರೊಂದಿಗೆ ಪ್ರೀತಿ, ಸಂಪರ್ಕದೊಂದಿಗೆ ಚುನಾವಣೆ ಮಾಡಲಾಗುತ್ತಿದೆ. ಅಭಿವೃದ್ದಿ ಮೇಲೆ ಚುನಾವಣೆ ನಡೆದಿದ್ದರೆ, ನನ್ನ ಮೇಲೆ ಯಾರು ಗೆಲ್ಲುವ ಪ್ರಶ್ನೆ ಇರಲಿಲ್ಲ. ನಾಗಮಂಗಲ ತಾಲೂಕಿನ ಕೆಲಸ ಆಗಿದ್ರೆ ಅದು ಚಲುವರಾಯಸ್ವಾಮಿಯಿಂದ. ವೋಟ್ ಹಾಕುವಾಗ ಮಾತ್ರ ಫೈಟ್. ಅದಕ್ಕಾಗಿ ನನ್ನ ಕ್ಷೇತ್ರದ ಜನರಿಗೆ ನೋವು ಮಾಡಬೇಡಿ ಎಂದಿದ್ದೇನೆ. ಅಭ್ಯರ್ಥಿ ಸ್ಟಾರ್ ಚಂದ್ರು ನಮ್ಮ ತಾಲೂಕಿನವರೆ ಆಗಿದ್ದಾರೆ. ಇದರಿಂದ ಜವಾಬ್ದಾರಿ ಹೆಚ್ಚಾಗಿದೆ. ಪರೋಕ್ಷವಾಗಿ ಸ್ಟಾರ್ ಚಂದ್ರು ಗೆಲ್ಲಿಸುವ ಹೊಣೆ ತನ್ನದು ಎಂದು ಸಚಿವ ಚಲುವರಾಯಸ್ವಾಮಿ ಎಂದು ಹೇಳಿದರು.

Latest Videos
Follow Us:
Download App:
  • android
  • ios