ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ ಅದ್ಧೂರಿ ಆಚರಣೆ
80ನೇ ವರ್ಷದ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು 20 ಕೆಜಿ ಕೇಕ್ ತಂದಿದ್ದಾರೆ. ಭದ್ರಾವತಿಯ ತಮಿಳು ಸಮಾಜದ ಮುಖಂಡ ಕದಿರೇಶ್ ನೇತೃತ್ವದಲ್ಲಿ ಭಾರಿ ಗಾತ್ರದ ಕೇಕ್ ತಯಾರಿಸಲಾಗಿದೆ. ಭದ್ರಾವತಿಯಿಂದ ಅಭಿಮಾನಿಗಳು ತಂದ ಕೇಕ್ ಮಾಜಿ ಸಿಎಂ ಬಿಎಸ್‌ವೈ ಅನ್ನು ಕತ್ತರಿಸಿದ್ದಾರೆ.
ಶಿವಮೊಗ್ಗ(ಫೆ.27): ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನ ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಭದ್ರಾವತಿ ತಮಿಳು ಸಮಾಜದಿಂದ ಬಿಎಸ್ವೈ ಬೃಹತ್ ಗಾತ್ರದ ಕೇಕ್ ತಯಾರಿಸಿದ್ದಾರೆ. ಬಿಎಸ್‌ವೈ ನಿಂತಿರುವ ಫೋಟೋ ಬಿಎಸ್‌ವೈ ತಲೆಯ ಭಾಗದಲ್ಲಿ ಪುತ್ರರಾದ ವಿಜಯೇಂದ್ರ ಮತ್ತು ಬಿ.ವೈ. ರಾಘವೇಂದ್ರ ಇರುವ ಫೋಟೋ ಹಾಕಿರುವ ಕೇಕ್ ತಯಾರಿಸಲಾಗಿದೆ.
80ನೇ ವರ್ಷದ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು 20 ಕೆಜಿ ಕೇಕ್ ತಂದಿದ್ದಾರೆ. ಭದ್ರಾವತಿಯ ತಮಿಳು ಸಮಾಜದ ಮುಖಂಡ ಕದಿರೇಶ್ ನೇತೃತ್ವದಲ್ಲಿ ಭಾರಿ ಗಾತ್ರದ ಕೇಕ್ ತಯಾರಿಸಲಾಗಿದೆ. ಭದ್ರಾವತಿಯಿಂದ ಅಭಿಮಾನಿಗಳು ತಂದ ಕೇಕ್ ಮಾಜಿ ಸಿಎಂ ಬಿಎಸ್‌ವೈ ಅನ್ನು ಕತ್ತರಿಸಿದ್ದಾರೆ.
SHIVAMOGGA: ವಿಮಾನ ನಿಲ್ದಾಣ ಉದ್ಘಾಟನೆಗೆ ವಿದ್ಯಾರ್ಥಿಗಳು; ಬೇಳೂರು ಗೋಪಾಲಕೃಷ್ಣ ವ್ಯಂಗ್ಯ
ಕೇಕ್ ಕತ್ತರಿಸಿದ ಬಿಎಸ್‌ವೈ ಹಾಗೂ ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಹಾಗೂ ಸಚಿವರಾದ ಪ್ರಹ್ಲಾದ್ ಜೋಶಿ, ಆರಗ ಜ್ಞಾನೇಂದ್ರ ತಿನ್ನಿಸಿದ್ದಾರೆ. ಬರ್ತಡೇ ಹಿನ್ನೆಲೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಶಿವಮೊಗ್ಗದ ವಿನೋಬಾ ನಗರ ನಿವಾಸ ಬಳಿ ಅಭಿಮಾನಿಗಳಿಂದ ಬಿಎಸ್‌ವೈ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್‌ವೈ ಹುಟ್ಟುಹಬ್ಬಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಭ ಹಾರೈಸಿದ್ದಾರೆ. ಬಿಎಸ್‌ವೈ ಅವರ ಜೊತೆಗೆ 1983 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅನುಭವವನ್ನ ಹಂಚಿಕೊಂಡಿದ್ದಾರೆ. ತಾವು ಸೋತಾಗಲು ಯಡಿಯೂರಪ್ಪ ಅವರು ತಮ್ಮ ಬೆನ್ನು ತಟ್ಟಿಕೊಂಡಿದ್ದರು. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ತಮ್ಮನ್ನು ಸಚಿವ ಸ್ಥಾನ ನೀಡಲು ಸಾಧ್ಯವಾಗದಿದ್ದಕ್ಕೆ ಕೆಹೆಚ್ ಬಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಶಿವಮೊಗ್ಗ ವಿಮಾನ ನಿಲ್ದಾಣ ಬಿಎಸ್‌ವೈ ಕನಸಿನ ಮನಸು ಮಾಡಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆರ್ಥಿಕ ವಹಿವಾಟು ಹೆಚ್ಚಾಗಲಿದೆ. ಬಿಎಸ್‌ವೈ ನನಗೆ ಅಣ್ಣನ ಹಾಗೆ ನನ್ನನ್ನ ಸೋತಾಗಲು ಪ್ರೋತ್ಸಾಹಿಸಿ ರಾಜಕೀಯವಾಗಿ ಬೆಂಬಲಿಸಿದ್ದಾರೆ. ನನಗೆ ಸಿಕ್ಕ ಎಲ್ಲ ಸ್ಥಾನಮಾನಗಳು ಬಿಎಸ್‌ವೈ ನನ್ನನ್ನು ಗುರುತಿಸಿದ ಕಾರಣಕ್ಕಾಗಿ ಸಿಕ್ಕಿದೆ ಅಂತ ತಿಳಿಸಿದ್ದಾರೆ.