ಮೈಸೂರಿನ ಸರಗೂರು ಬಳಿ ಕಾಡಾನೆ ದಾಳಿಗೆ ಅರಣ್ಯ ವಾಚರ್‌ ದುರ್ಮರಣ

ಶುಕ್ರವಾರ ಸಂಜೆ 6ರ ಸಮಯದಲ್ಲಿ ವಾಚರ್‌ಗಳಾದ ಬೊಮ್ಮ, ಮಧು ಕೋಯ್ಲಿರ್‌ ಇಬ್ಬರು ಕಲ್ಕೆರೆ ವಲಯ ಅರಣ್ಯ ವ್ಯಾಪ್ತಿಯ ವಡೆರಹಳ್ಳಿ ಹಾಡಿಯಿಂದ ಎರವಕಡು ಕ್ಯಾಂಪ್‌ಗೆ ಕೆಲಸದ ನಿಮಿತ್ತ ಕಾಡಿನೊಳಗೆ ನಡೆದುಕೊಂಡು ಹೋಗುವಾಗ ಹಠಾತ್ತನೆ ಕಾಡಿನಿಂದ ಹೊರ ಬಂದ ಆನೆ ವಾಚರ್‌ ಬೊಮ್ಮನನ್ನು ಓಡಿಸಿಕೊಂಡು ಹೋಗಿದೆ. ಆಗ ಬೊಮ್ಮ ಗುಂಡಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

Forest Watcher Dies Due to Elephant Attack at Sargur in Mysuru grg

ಮೈಸೂರು(ಮಾ.05): ಕೆಲಸದ ನಿಮಿತ್ತ ಕಾಡಿನಲ್ಲಿ ತೆರಳುತ್ತಿದ್ದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿ ಅರಣ್ಯ ವೀಕ್ಷಕನೊರ್ವ ಮೃತಪಟ್ಟಿರುವ ಘಟನೆ ಹೆಡಿಯಾಲ ಉಪವಿಭಾಗದ ಎ.ಎಂ. ಗುಡಿ ವಲಯದಲ್ಲಿ ನಡೆದಿದೆ. ತಾಲೂಕಿನ ದಡದಹಳ್ಳಿ ಹಾಡಿಯ ಅರಣ್ಯ ಸಿಬ್ಬಂದಿ ಬೊಮ್ಮ (59) ಮೃತಪಟ್ಟವರು. ಇವರಿಗೆ ಪತ್ನಿ, ಪುತ್ರಿ ಇದ್ದಾರೆ.

ಘಟನೆ ವಿವರ: 

ಶುಕ್ರವಾರ ಸಂಜೆ 6ರ ಸಮಯದಲ್ಲಿ ವಾಚರ್‌ಗಳಾದ ಬೊಮ್ಮ, ಮಧು ಕೋಯ್ಲಿರ್‌ ಇಬ್ಬರು ಕಲ್ಕೆರೆ ವಲಯ ಅರಣ್ಯ ವ್ಯಾಪ್ತಿಯ ವಡೆರಹಳ್ಳಿ ಹಾಡಿಯಿಂದ ಎರವಕಡು ಕ್ಯಾಂಪ್‌ಗೆ ಕೆಲಸದ ನಿಮಿತ್ತ ಕಾಡಿನೊಳಗೆ ನಡೆದುಕೊಂಡು ಹೋಗುವಾಗ ಹಠಾತ್ತನೆ ಕಾಡಿನಿಂದ ಹೊರ ಬಂದ ಆನೆ ವಾಚರ್‌ ಬೊಮ್ಮನನ್ನು ಓಡಿಸಿಕೊಂಡು ಹೋಗಿದೆ. ಆಗ ಬೊಮ್ಮ ಗುಂಡಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ: ಕಾಡಾನೆ ದಾಳಿ ಪ್ರಕರಣ, ಅರಣ್ಯ ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ

ಕೂಡಲೇ ಆನೆ ಗುಂಡಿಗೆ ಬಿದ್ದ ಬೊಮ್ಮನನ್ನು ಸೋಂಡಿಲಿನಿಂದ ಬಲವಾಗಿ ತಿವಿದಿದ್ದು, ಬೊಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ವಾಚರ್‌ ಮಧು ತಪ್ಪಿಸಿಕೊಂಡು ಪಕ್ಕದಲ್ಲೇ ಇದ್ದ ಅರಣ್ಯ ಸಿಬ್ಬಂದಿಗೆ ಪೋನ್‌ ಮಾಡಿ ತಿಳಿಸಿದ್ದಾರೆ. ನಂತರ ಸರಗೂರಿನ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಲಾಯಿತು. ಸ್ಥಳಕ್ಕೆ ಶಾಸಕ ಅನಿಲ್‌ ಚಿಕ್ಕಮಾದು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ತಿಳಿಸಿ, ಧನ ಸಹಾಯ ನೀಡಿದರು. ಮೃತಪಟ್ಟಬೊಮ್ಮ ಕುಟುಂಬಕ್ಕೆ ಇಲಾಖೆಯಿಂದ 30 ಲಕ್ಷ ರು., ಕುಟುಂಬಸ್ಥರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್‌ಗೌಡ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕಿತ್ತು. ಆದರೆ, ಆಕಸ್ಮಿಕವಾಗಿ ಘಟನೆ ನಡೆದಿದ್ದು, ಇಂಥ ಘಟನೆ ಮರುಕಳಿಸದಂತೆ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಸಿಎಫ್‌ ಡಾ. ರಮೇಶ್‌ಕುಮಾರ್‌, ಎಸಿಎಫ್‌ ಪರಮೇಶ್‌, ವಲಯ ಅರಣ್ಯಾಧಿಕಾರಿ ಪುನೀತ್‌ಕುಮಾರ್‌, ಅರಣ್ಯ ಸಿಬ್ಬಂದಿಗಳಾದ ಮನೋಜ್‌, ಸಂತೋಷ್‌, ಫಾರೂಕ್‌, ಎಸ್‌ಡಿಪಿಎಫ್‌ ಸಿಬ್ಬಂದಿ, ಸರಗೂರು ಪಪಂ ಸದಸ್ಯ ಶ್ರೀನಿವಾಸ್‌, ಕರ್ನಾಟಕ ರಾಜ್ಯ ರೈತ ಸಂಘ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್‌ಗೌಡ, ಪಿ.ಎಲ್‌.ಡಿ ಬ್ಯಾಂಕ್‌ ಸದಸ್ಯ ಡಿ.ಸಿ.ಸಿದ್ದಪ್ಪ, ಕಾಂಗ್ರೆಸ್‌ ಮುಖಂಡ ಬಸವರಾಜು, ದಡದಹಳ್ಳಿ ಚಿನ್ನಸ್ವಾಮಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಲಕ್ಷಿ ್ಮಕಾಂತ್‌, ಎಸ್‌ಐ ಶ್ರವಣದಾಸರೆಡ್ಡಿ, ಸಿಬ್ಬಂದಿಗಳಾದ ಎಎಸ್‌ಐ ರಂಗನಾಥ್‌, ನಾಗನಾಯಕ, ಜಗದೀಶ್‌ ಹಾಜರಿದ್ದರು. ಸರಗೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.

Latest Videos
Follow Us:
Download App:
  • android
  • ios