Asianet Suvarna News Asianet Suvarna News

Ramanagara: ಅಪಾರ ಬೆಳೆ ಹಾನಿ, ರೈತರ ಸಾವಿಗೆ ಕಾರಣವಾಗಿದ್ದ ಕಾಡಾನೆಗಳ‌ ಸೆರೆಗೆ ಮುಂದಾದ ಅರಣ್ಯ ಇಲಾಖೆ!

ಕನಕಪುರ ತಾಲ್ಲೂಕಿನ ಹಲವು ಭಾಗಗಳಲ್ಲಿ ಕಾಡಾನೆಗಳ ಹಾವಳಿ  ಹೆಚ್ಚಾದ ಹಿನ್ನೆಲೆ ಕಾಡಾನೆ ಸೆರೆಗೆ ಇದೀಗ ಅರಣ್ಯ ಇಲಾಖೆ ಮುಂದಾಗಿದೆ. ಸಾತನೂರು ಅರಣ್ಯ ವ್ಯಾಪ್ತಿಯಲ್ಲಿ ಎರಡು ಪುಂಡಾನೆಗಳ ಸೆರೆಗೆ ಇಂದಿನಿಂದ ಕಾರ್ಯಾಚರಣೆ ಆರಂಭವಾಗಿದೆ.
 

Forest department has moved to capture wild elephants that caused huge crop damage and farmers deaths gvd
Author
First Published May 30, 2024, 5:48 PM IST

ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಮೇ.30): ಕನಕಪುರ ತಾಲ್ಲೂಕಿನ ಹಲವು ಭಾಗಗಳಲ್ಲಿ ಕಾಡಾನೆಗಳ ಹಾವಳಿ  ಹೆಚ್ಚಾದ ಹಿನ್ನೆಲೆ ಕಾಡಾನೆ ಸೆರೆಗೆ ಇದೀಗ ಅರಣ್ಯ ಇಲಾಖೆ ಮುಂದಾಗಿದೆ. ಸಾತನೂರು ಅರಣ್ಯ ವ್ಯಾಪ್ತಿಯಲ್ಲಿ ಎರಡು ಪುಂಡಾನೆಗಳ ಸೆರೆಗೆ ಇಂದಿನಿಂದ ಕಾರ್ಯಾಚರಣೆ ಆರಂಭವಾಗಿದ್ದು, ದುಬಾರಿ ಹಾಗೂ ಮತ್ತಿಗೋಡು ಶಿಬಿರದಿಂದ 7 ಸಾಕಾನೆ ಮೂಲಕ ಆಪರೇಷನ್ ಪುಂಡಾನೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು  ಸಿದ್ದರಾಗಿದ್ದಾರೆ.

ಆಪರೇಷನ್ ಪುಂಡಾನೆಗೆ ಫೀಲ್ಡಿಗಿಳಿದ ಸಾಕಾನೆಗಳು: ಹೌದು, ರಾಮನಗರ ಜಿಲ್ಲೆ ಕನಪುರ ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರ ನಿದ್ದೆಗೆಡಿಸಿವೆ. ಬರದಿಂದ ತತ್ತರಿಸಿರುವ ರೈತರು ಇತ್ತ ಕಾಡಾನೆಗಳ ದಾಂಧಲೆಗೆ ರೋಸಿಹೋಗಿದ್ದಾರೆ. ಕಳೆದ ಆರೇಳು ತಿಂಗಳಿಂದ 5 ಕ್ಕೂ ಹೆಚ್ಚು ರೈತರು ಕಾಡಾನೆ ದಾಳಿಗೆ ಸಾವಿಗೀಡಾಗದ್ದಾರೆ.  ಪ್ರತಿನಿತ್ಯ ರೈತರ ಬೆಳೆಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಕಾಡಾನೆಗಳ ಉಪಟಳದಿಂದ ರೋಸಿಯೋಗಿರುವ ರೈತರು ಅರಣ್ಯ ಇಲಾಖೆಗೆ ಆನೆ ಹಾವಳಿ ತಪ್ಪಿಸುವಂತೆ ನಿರಂತರ ಆಗ್ರಹ ಮಾಡುತ್ತಲೆ ಬಂದಿದ್ದರು. 

ಮಾಗಡಿಗೆ ಹೇಮೆ ನೀರು ತಡೆಯಲು ಸಾಧ್ಯವಿಲ್ಲ: ಮಾಜಿ ಸಚಿವ ಎಚ್.ಎಂ.ರೇವಣ್ಣ

ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಇಂದಿನಿಂದ ಕಾಡಾನೆ ಕಾರ್ಯಾಚರಣೆಗೆ ಮುಂದಾಗಿದೆ. ಅಂದಹಾಗೆ ರೈತರ ಆಗ್ರಹದ ಬೆನ್ನಲ್ಲೇ ಕಾಡಾನೆಗಳ ಸೆರೆಗೆ ಸಾಕಾನೆಗಳ ತಂಡ ಫೀಲ್ಡಿಗಿಳಿದಿವೆ.  ಕಾವೇರಿ ವನ್ಯಜೀವಿ ವಲಯದಿಂದ ತೆಂಗಿನಕಲ್ಲು, ಸಾತನೂರು ಅರಣ್ಯ ಪ್ರದೇಶದಲ್ಲಿ ಸುಮಾರು 15ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ರೈತರ ಬೆಳೆ ಹಾಗು ಜೀವಕ್ಕೆ ಕಂಟಕವಾಗಿರುವ  ಎರಡು ಆನೆಗಳನ್ನು ಸೆರೆಹಿಡಿಯಲು ಇಲಾಖೆ ಮುಂದಾಗಿದೆ. ಮೊದಲ ಒಂದು ವಾರ 15 ಕಾಡಾನೆಗಳನ್ನು ಪುನಃ ಕಾವೇರಿ ವನ್ಯಜೀವಿ ವಲಯಕ್ಕೆ ಹಿಮ್ಮೆಟ್ಟಿಸುವ ಕಾರ್ಯ ನಡೆಯಿಲಿದೆ. 

ಜೊತೆಗೆ ಗುರುತಿಸಿರುವ ಎರಡು ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಕಾರ್ಯಾಚಾರಣೆಗೆ ದುಬಾರೆ ಹಾಗು ಮತ್ತಿಗೂಡು ಆನೆ ಶಿಬಿರದಿಂದ ಏಳು ಸಾಕಾನೆಗಳನ್ನ ಬಳಸಿಕೊಳ್ಳುತ್ತಿರುವ ಅರಣ್ಯ ಇಲಾಖೆ ಈಶ್ವರ, ವಿಕ್ರಮ, ಅಜಯ್, ಶ್ರೀರಾಮ, ಲಕ್ಷ್ಮಣ ಕಂಜನ್, ಶ್ರೀಕಂಠ ಆನೆಗಳು ಕನಪುರದ ಹಲಸಿನ ಮರದದೊಡ್ಡಿ ಗ್ರಾಮದ ಹೊರಹೊಲಯದಲ್ಲಿ ಬೀಡು ಬಿಟ್ಟಿವೆ. ಕಾಡಾನೆಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು ಇಂದಿನಿಂದಲೇ ಕಾರ್ಯಚರಣೆಗೆ ಇಳಿಯಲಿದೆ.

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಡಿಕೆಶಿ ಮಾಸ್ಟರ್‌ಮೈಂಡ್: ಸಿ.ಪಿ.ಯೋಗೇಶ್ವರ್

ಇನ್ನು ಕಾಡಾನೆ ಕಾರ್ಯಚರಣೆಗೆ ಇಳಿದಿರೋದು ಸಹಜವಾಗಿಯೇ ಸ್ಥಳೀಯರ ನಿಟ್ಟುಸಿರು ಬಿಡುವಂತಾಗಿದೆ. ಗ್ರಾಮದ ಸುತ್ತಮುತ್ತ ಬೀಡುಬಿಟ್ಟಿರುವ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಿ, ಉಳಿದ ಎರಡು ಆನೆಗಳನ್ನ ಸೆರೆ ಹಿಡಿದರೆ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಆನೆಗಳ ಉಪಟಳ ನಿಯಂತ್ರಣಕ್ಕೆ ಸರ್ಕಾರ ಶಾಶ್ವತ ಪರಿಹಾರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಒಟ್ಟಾರೆ ರೈತರಿಗೆ ಉಪಟಳ ನೀಡ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಖೆಡ್ಡಾ ತೋಡಿದ್ದು ಕಾರ್ಯಾಚರಣೆ ಚುರುಕುಗೊಳಿಸಿದೆ. ಆನೆ ಹಾವಳಿ ತಡೆಗೆ ಕಾರ್ಯಾಚರಣೆ ಆರಂಭವಾಗಿದೆ.. ಎರಡು ಕಾಡಾನೆಗಳ ಸೆರೆ ಬಳಿಕವಾದ್ರೂ ಈ ಭಾಗದ ರೈತರಿಗೆ ಆನೆಗಳ ಉಪಟಳ ತಪ್ಪುತ್ತಾ ಎಂದು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios