ಕಡಬ (ಫೆ.03) :  ನಾಯಿ ಹಿಡಿಯಲು ಬಂದು ಮನೆ ಬಳಿಯ ಟಾಯ್ಲೆಟ್ ನುಗ್ಗಿದ್ದ  ಚಿರತೆಯನ್ನು ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ ವಿಫಲವಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬದಲ್ಲಿ ಮನೆಯ ಟಾಯ್ಲೆಟ್‌ ಒಳಗೆ ಸೇರಿದ್ದ ಚಿರತೆ ಇದೀಗ ತಪ್ಪಿಸಿಕೊಂಡು ಕಾಡಿನತ್ತ  ಓಡಿದೆ. ಚಿರತೆಯನ್ನು ಬೋನಿಗೆ ಹಾಕಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಅರವಳಿಕೆ ಮದ್ದು ನೀಡಲು ಯತ್ನಿಸುತ್ತಿರುವ ವೇಳೆ ತಪ್ಪಿಸಿಕೊಂಡು ಓಡಿದೆ.  

ವಿರೂಪಾಪುರ ಗಡ್ಡೆಯಲ್ಲಿ ಬೋನಿಗೆ ಬಿತ್ತು ಮತ್ತೊಂದು ಚಿರತೆ: ನಿಟ್ಟುಸಿರು ಬಿಟ್ಟ ಜನತೆ ...

ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನು ಟಾಯ್ಲೆಟ್‌ನಲ್ಲಿ ಕೂಡಿ ಹಾಕಲಾಗಿತ್ತು. ಈ ವೇಳೆ ಟಾಯ್ಲೆಟ್ ಒಳಗಡೆ ನಾಯಿ ಜೊತೆ ಬಂಧಿಯಾಗಿತ್ತು. ಮನೆಯವರೇ ಚಿರತೆಯನ್ನು ಬಂಧಿಸಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. 

ಸರಿಯಾದ ತರಬೇತಿ ಇಲ್ಲದೇ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹೊರಟಿದ್ದ ವೇಳೆ ತಪ್ಪಿಸಿಕೊಂಡು ಚಿರತೆ ಕಾಡಿಗೆ ಹೋಗಿದೆ. ಈ ವೇಳೆ ಯಾವುದೇ ಅನಾಹುತವಾಗಿಲ್ಲ ಎಂಬುವುದು ಮಾತ್ರ ನೆಮ್ಮದಿ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.