Asianet Suvarna News Asianet Suvarna News

ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ: ಗ್ರಾಮಸ್ಥರ ಆತಂಕ ದೂರು ಮಾಡಿದ ಅರಣ್ಯ ಇಲಾಖೆ

ಜಿಲ್ಲೆಯ ‌ಮಾನವಿ ತಾಲೂಕಿನ ನೀರಮಾನವಿ ಗ್ರಾಮದ ಬಳಿ ಚಿರತೆವೊಂದು ಓಡಾಟ ನಡೆಸಿತ್ತು. ಕಳೆದ 8 ತಿಂಗಳಿಂದ ಓಡಾಟ ನಡೆಸಿದ ಚಿರತೆವೊಂದನ್ನ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಯಶ್ವಸಿಯಾಗಿದ್ದಾರೆ. 

Forest Department captured leopard in raichur district gvd
Author
Bangalore, First Published Aug 19, 2022, 3:15 AM IST

ವರದಿ: ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು 

ರಾಯಚೂರು (ಆ.19): ಜಿಲ್ಲೆಯ ‌ಮಾನವಿ ತಾಲೂಕಿನ ನೀರಮಾನವಿ ಗ್ರಾಮದ ಬಳಿ ಚಿರತೆವೊಂದು ಓಡಾಟ ನಡೆಸಿತ್ತು. ಕಳೆದ 8 ತಿಂಗಳಿಂದ ಓಡಾಟ ನಡೆಸಿದ ಚಿರತೆವೊಂದನ್ನ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಯಶ್ವಸಿಯಾಗಿದ್ದಾರೆ. ಒಂದು ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು 8 ತಿಂಗಳಿಂದ ನಿರಂತರವಾಗಿ ಶೋಧ ಕಾರ್ಯ ನಡೆಸಿದರೂ ಚಿರತೆ ಮಾತ್ರ ಕಾಣಿಸಿಕೊಂಡು ನಾಪತ್ತೆ ಆಗುತ್ತಿತ್ತು. 

ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಎಷ್ಟೇ ಕಾರ್ಯಾಚರಣೆ ಮಾಡಿದ್ರೂ ಚಿರತೆ ಸುಳಿವು ಸಿಗುತ್ತಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಬೋನ್‌ಗಳು ಇಟ್ಟಿದ್ರು. ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟ ಬೋನ್‌ಗೆ ಬಂದು ಚಿರತೆ ಲಾಕ್ ಆಗಿದೆ. ಹೀಗಾಗಿ 8 ತಿಂಗಳಿಂದ ಆತಂಕದಲ್ಲಿ ಓಡಾಟ ನಡೆಸುತ್ತಿದ್ದ ಗ್ರಾಮಸ್ಥರ ಆತಂಕ ಈಗ ದೂರವಾಗಿದೆ.

8 ತಿಂಗಳಿಂದ ನಿದ್ದೆಗೆಡಿಸಿದ ಚಿರತೆ ಕೊನೆಗೂ ಸೆರೆ: ಜಿಲ್ಲೆಯ ಮಾನವಿ ತಾಲೂಕಿನ ನೀರಮ್ವಾನಿ ಬಳಿ ಜನವರಿ ತಿಂಗಳ ಮೊದಲ ವಾರದಲ್ಲಿ ಕುರಿಗಾಹಿಗಳಿಗೆ ಬೆಟ್ಟದಲ್ಲಿ ಚಿರತೆವೊಂದು ಕಾಣಿಸಿಕೊಂಡಿತ್ತು. ಕುರಿಗಾಹಿಗಳು ಹೇಳಿದ ಮಾತುಗಳು ಯಾರು ಕೆಲ ದಿನಗಳ ಕಾಲ ನಂಬಿರಲಿಲ್ಲ. ಪತ್ತೆ ಪತ್ತೆ ಚಿರತೆ ನೋಡಿದ ಕುರಿಗಾಹಿಗಳು ಗ್ರಾಮದ ಮುಖ್ಯಸ್ಥರ ಗಮನಕ್ಕೆ ತೆಗೆದುಕೊಂಡು ಬಂದ್ರು. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Raichur: ಅನೈತಿಕ ‌ಸಂಬಂಧ ಶಂಕಿಸಿ ಪತ್ನಿಯನ್ನ ಕೊಚ್ಚಿಕೊಂದ ಪತಿ

ಗ್ರಾಮಸ್ಥರ ದೂರಿನ ಮೇಲೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೀರಮಾನ್ವಿ ಗುಡ್ಡದಲ್ಲಿ ಓಡಾಟ ನಡೆದರು. ಚಿರತೆ ‌ನೋಡಿದ ಸ್ಥಳೀಯರ ಮಾಹಿತಿ ಮೇರೆಗೆ ಮಾನ್ವಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಅವರ ನೇತೃತ್ವದಲ್ಲಿ ಸುಮಾರು 15 ದಿನಗಳ ಕಾಲ ಅಲ್ಲಲ್ಲಿ ಟೆಂಟುಗಳನ್ನು ಹಾಕಿ ಹಗಲು- ರಾತ್ರಿ ಚಿರತೆಗಾಗಿ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಸಿದರು. ಆದ್ರೆ ಚಿರತೆಯ ಸುಳಿವು ಮಾತ್ರ ಸಿಗಲಿಲ್ಲ. ಇದರಿಂದಾಗಿ ಆಗ ಕಾರ್ಯಾಚರಣೆ ಕೈ ಬಿಡಲಾಗಿತ್ತು.

ಜನವರಿಯಲ್ಲಿ ಕಾಣಿಸಿಕೊಂಡ ಚಿರತೆ ಮತ್ತೆ ಜೂನ್‌ನಲ್ಲಿ ಪತ್ತೆ: ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಕಾರ್ಯಾಚರಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಕೈಬಿಟ್ಟಿದರು. ಆಗ ಎಲ್ಲಿಯೂ ಕಾಣಿಸಿಕೊಳ್ಳದ ಚಿರತೆ ಮತ್ತೆ ಜೂನ್ ತಿಂಗಳಲ್ಲಿ ಕಾಣಿಸಿಕೊಂಡು ನೀರಮಾನ್ವಿ ಗ್ರಾಮದಲ್ಲಿ ನುಗ್ಗಿ ಎರಡು ಮೇಕೆ ಹಾಗೂ ಒಂದು ಹಸು ಕೊಂದು ತಿಂದು ಹಾಕಿತ್ತು. ಅಷ್ಟೇ ಅಲ್ಲದೆ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿತ್ತು. ಹೀಗಾಗಿ ಭಯಭೀತರಾದ ಗ್ರಾಮಸ್ಥರು ಕೃಷಿ ಕೆಲಸ ಕಾರ್ಯಗಳಿಗೆ ಹೋಗಲು ಸಹ ಹಿಂದೇಟು ಹಾಕುತ್ತಿದ್ದರು. 

ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆಗಾಗಿ ನಾನಾ ಕಸರತ್ತು ನಡೆಸಿದರು. ಕೊನೆಗೆ ಚಿರತೆ ಹೆಜ್ಜೆ ಗುರುತು ಇರುವ ಕಡೆಗಳಲ್ಲಿ ಮೂರು ಕಡೆಗಳಲ್ಲಿ ಬೋನ್‌ಗಳು ಇಟ್ಟು ಚಿರತೆಗಾಗಿ ಹುಡುಕಾಟ ನಡೆಸಿದರು. ಆದ್ರೂ ಬೆಟ್ಟದಲ್ಲಿ ಕಾಣಿಸಿಕೊಂಡು ನೋಡು ನೋಡುತ್ತಿದ್ದಂತೆ ಓಡಿ ಹೋಗುತ್ತಿತ್ತು. ಇದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಸವಾಲಾಗಿತ್ತು. ಹೀಗಾಗಿ ನೀರಮಾನ್ವಿ ಮತ್ತು ಬೆಟ್ಟದೂರು ಗುಡ್ಡಗಳಲ್ಲಿ ಮೂರು ಬೋನುಗಳನ್ನು ಅಳವಡಿಸಿ ಕಾರ್ಯಾಚರಣೆ ನಡೆಸಿದರು.

ಕೊನೆಗೂ ಬೋನಿಗೆ ಬಿದ್ದ ಹೆಣ್ಣು ಚಿರತೆ: ಕಳೆದ 8 ತಿಂಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಚೆಳ್ಳೆಹಣ್ಣು ತಿನ್ನಿಸುತ್ತಾ ಓಡಾಟ ನಡೆಸಿದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಚಿರತೆವೊಂದು ಸೆರೆ ಹಿಡಿಯುವಲ್ಲಿ ಮಾನವಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.  ಬೆಟ್ಟದೂರು ಗುಡ್ಡದಲ್ಲಿ ಅಳವಡಿಸಿದ ಬೋನಿನಲ್ಲಿ ಚಿರತೆ ಇಂದು ಸೆರೆಯಾಗಿದೆ. ಈ ಹಿಂದೆ ನೀರಮಾನ್ವಿ ಬೆಟ್ಟಕ್ಕೆ ಭೇಟಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ಸಂತಾನೋತ್ಪತ್ತಿಗಾಗಿ ಚಿರತೆ ಈ ಬೆಟ್ಟಕ್ಕೆ ಬಂದಿರಬಹುದು. 

Raichur; ಬಿಸಿಯೂಟ ಸೇವಿಸಿ 58 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ಮಸ್ಕಿ ತಹಸೀಲ್ದಾರ್ ಕವಿತಾ ಭೇಟಿ!

ನಾವು ಚಿರತೆಯನ್ನ ಸೆರೆ ಹಿಡಿಯುತ್ತೇವೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ರು. ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದಂತೆ ಹೆಣ್ಣು ಚಿರತೆವೊಂದು ಸೆರೆ ಹಿಡಿದು ಗ್ರಾಮಸ್ಥರ ಆತಂಕ ದೂರು ಮಾಡಿದ್ದಾರೆ. ಇನ್ನೂ ಈ ಕಾರ್ಯಾಚರಣೆಯಲ್ಲಿ ಮಾನವಿ RFO ರಾಜೇಶ್ ನಾಯಕ, ಹಣಮಂತ್ರಾಯ ಬಿರಾದಾರ ಮತ್ತು ಬೂದೆಪ್ಪ, ಅರುಣಾ ಹಾಗೂ ವನ್ಯಜೀವಿ ಛಾಯಾಗ್ರಾಹಕ ಜಗನ್ನಾಥ ಚೌದರಿ, ಪಕ್ಷಿ ಪ್ರೇಮಿ ಸಲಾವುದ್ದೀನ್  ಮತ್ತು ಅರಣ್ಯ ರಕ್ಷಕರಾದ ಹಾಜಿ ಪಾಷಾ ಮುನಿಸ್ವಾಮಿ, ಶರಣಬಸವ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಲ್ಲರಿಂದ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Follow Us:
Download App:
  • android
  • ios