Asianet Suvarna News Asianet Suvarna News

Raichur: ಅನೈತಿಕ ‌ಸಂಬಂಧ ಶಂಕಿಸಿ ಪತ್ನಿಯನ್ನ ಕೊಚ್ಚಿಕೊಂದ ಪತಿ

ಗಂಡ- ಹೆಂಡತಿ ಸಂಬಂಧ ಹಾಲು-ಜೇನು ಇದ್ದಂತೆ, ಸಂಸಾರದಲ್ಲಿ ಎಲ್ಲವೂ ಚೆಂದ ಇದ್ರೇ ಇಡೀ ಜೀವನವೇ ಸುಖ-  ಶಾಂತಿ, ನೆಮ್ಮದಿಯಿಂದ ಇರುತ್ತೆ.‌ ಸ್ವಲ್ಪ ಗಂಡ- ಹೆಂಡತಿ ನಡುವೆ ಅನುಮಾನ ಶುರುವಾದರೇ ಇಡೀ ಸಂಸಾರವೇ ಬೀದಿಪಾಲು ಆಗುತ್ತೆ.‌

man kills wife for suspicion of illegal affair in raichur gvd
Author
Bangalore, First Published Aug 17, 2022, 11:58 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಆ.17): ಗಂಡ- ಹೆಂಡತಿ ಸಂಬಂಧ ಹಾಲು-ಜೇನು ಇದ್ದಂತೆ, ಸಂಸಾರದಲ್ಲಿ ಎಲ್ಲವೂ ಚೆಂದ ಇದ್ರೇ ಇಡೀ ಜೀವನವೇ ಸುಖ-  ಶಾಂತಿ, ನೆಮ್ಮದಿಯಿಂದ ಇರುತ್ತೆ.‌ ಸ್ವಲ್ಪ ಗಂಡ- ಹೆಂಡತಿ ನಡುವೆ ಅನುಮಾನ ಶುರುವಾದರೇ ಇಡೀ ಸಂಸಾರವೇ ಬೀದಿಪಾಲು ಆಗುತ್ತೆ.‌ ಅದಕ್ಕೆ ಸಾಕ್ಷಿ ಎಂಬಂತೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಒಂದು ಸಂಸಾರ ಇಂದು ಬೀದಿಪಾಲಾಗಿದೆ. ಅದಕ್ಕೆ ಪತ್ನಿ ಮೇಲಿನ ಆ ಒಂದು ಶಂಕೆಯೇ ಇಡೀ ಸಂಸಾರವೇ ಹಾಳಾಗಿ ಹೋಗಿದೆ. 

ಅವರು ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದ ದಂಪತಿ.ಈ ಜೋಡಿಗೆ ಇಬ್ಬರು ಮುದ್ದಾದ  ಮಕ್ಕಳಾಗಿದ್ರೂ, ಪತ್ನಿ ಮೇಲೆ ಪತಿಗೆ ಎಲ್ಲಿಲ್ಲದ ಸಂಶಯ. ಅದೇ ಅನೈತಿಕ ಸಂಬಂಧದ ಅನುಮಾನದಿಂದಲೇ ಇಂದು ರಾಕ್ಷಸ ಪತಿ, ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ್ದಾನೆ. ಜಿಲ್ಲೆ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಇಂದು ಗೃಹಿಣಿಯೊಬ್ಬರ ಹತ್ಯೆ ನಡೆದಿದೆ. ರೇಣುಕಾ ಅನ್ನೋ ಇಪ್ಪತ್ತಾರು ವರ್ಷದ ಗೃಹಿಣಿಯನ್ನ ಆಕೆಯ ಪತಿ ಜೆಟ್ಟೆಪ್ಪ ಎಂಬಾತನೇ ಕೊಚ್ಚಿ ಕೊಂದಿದ್ದಾನೆ.

Raichuru; ಬಿಸಿಯೂಟ ಸೇವಿಸಿ 58 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ಮಸ್ಕಿ ತಹಸೀಲ್ದಾರ್ ಕವಿತಾ ಭೇಟಿ!

ಗಂಡ- ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ: ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ರೇಣುಕಾ ಎಂದಿನಂತೆ ಬೆಳಗ್ಗೆ ಎದ್ದು ಪಾತ್ರೆ ತೊಳೆಯುತ್ತಿದ್ದಳಂತೆ..ಅಷ್ಟೊತ್ತಿಗಾಗಲೇ ಬೆಳ್ಳಂಬೆಳಿಗ್ಗೆ ರೇಣುಕಾ ಹಾಗೂ ಪತಿ ಜೆಟ್ಟೆಪ್ಪನ ನಡುವೆ ಗಲಾಟೆ ಶುರುವಾಗಿತ್ತು. ಅದೇ ಕಿತ್ತಾಟದಿಂದ ಕೆರಳಿ ಕೆಂಡವಾಗಿದ್ದ ರಕ್ಕಸ ಪತಿ ಜೆಟ್ಟೆಪ್ಪ, ಪಾತ್ರೆ ತೊಳೆಯುತ್ತಿದ್ದ ಪತ್ನಿ ರೇಣುಕಾಗೆ ಹಿಂದಿನಿಂದ ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿದ್ದ. ಕೊಡಲಿ ಆಕೆ ತಲೆಯಲ್ಲಿ ಸಿಲುಕಿತ್ತು. ಆಕೆ ಒದ್ದಾಡುತ್ತಿದ್ದಂತೆ ಆ ಕೊಡಲಿ ಹೊರ ತೆಗೆದು, ಆಕೆ ಕುತ್ತಿಗೆಗೆ ಹೊಡೆದಿದ್ದ ಅಷ್ಟೇ. ನೋಡ ನೋಡುತ್ತಲೇ ರಕ್ತದ ಮೊಡಲಿನಲ್ಲಿ ಒದ್ದಾಡಿದ ರೇಣುಕಾ ಮನೆಯ ಪಡಶಾಲೆಯಲ್ಲಿಯೇ ಹೆಣವಾಗಿ ಹೋಗಿದ್ದಳು.

ಮೃತ ರೇಣುಕಾ ಮತ್ತು ಜೆಟ್ಟೆಪ್ಪನ ಲವ್ ಸ್ಟೋರಿ: ಮೃತ ರೇಣುಕಾ ಮೂಲತಃ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದವಳು. ಈಕೆ ಈ ಹಿಂದೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡೋಕೆ ಹೋಗಿದ್ದಳು. ಆಗ ಪತಿ ಜೆಡ್ಡೆಪ್ಪನೂ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡ್ತಿದ್ದ. ಆಗ ಇಬ್ಬರಿಗೂ ಪರಿಚಯವಾಗಿ, ಪರಸ್ಪರ ಪ್ರೀತಿಸುತ್ತಿದ್ರು. ನಂತರ ಇಬ್ಬರು ಮನೆಯವರನ್ನ ಒಪ್ಪಿಸಿ ಪ್ರೀತಿಸಿ ಮದುವೆಯಾಗಿದ್ರು. ನಂತರ ಪತಿಯ ಗುಡದನಾಳದಲ್ಲಿ ವಾಸವಿದ್ದರು. ಈ ದಂಪತಿಗೆ ಒಂದು ಎಂಟು ವರ್ಷದ ಗಂಡು ಮಗು ಹಾಗೂ ಏಳು ವರ್ಷದ ಗಂಡು ಮಗುವಿದೆ. ಈ ಪಾಪಿ ಪತಿ ಜೆಡ್ಡೆಪ್ಪ, ನಿತ್ಯ ಪತ್ನಿ ರೇಣುಕಾ ಮೇಲೆ ಸಂಶಯ ಪಡುತ್ತಿದ್ದ.

ಆಕೆ ಯಾರ ಜೊತೆ ಮಾತನಾಡಿದ್ರೂ, ವಿನಾಕಾರಣ ಬೈಯುತ್ತಿದ್ನಂತೆ. ಆಕೆ ತವರೂರಿನಲ್ಲಿ ವ್ಯಕ್ತಿಯೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳಂತೆ. ಈ ವಿಚಾರ ಪತಿ ಜೆಡ್ಡೆಪ್ಪನಿಗೆ ತಿಳಿದಿತ್ತಂತೆ. ಪತಿ ಮನೆಯಲ್ಲಿ ಇಲ್ಲದಿದ್ದಾಗ ಫೋನ್ ಕಾಲ್ ಮಾಡ್ತಿದ್ದಳಂತೆ. ಇದೇ ವಿಚಾರ ನಿನ್ನೆ ತಾರಕಕ್ಕೇರಿತ್ತು. ಆಕೆ ಈ ವಿಚಾರ ತಾಯಿ ಚೆನ್ನಮ್ಮಳಿಗೆ ಕರೆ ಮಾಡಿ ಹೇಳಿದ್ರು. ಆಕೆಯೂ ಮಗಳಿಗೆ ಸಮಾಧಾನ ಹೇಳಿದ್ರು. ಈ ಮಧ್ಯೆ ಇಂದು ಬೆಳ್ಳಂಬೆಳಿಗ್ಗೆ ರಾಕ್ಷಸ ಪತಿ ಜೆಟ್ಟೆಪ್ಪ ಪತ್ನಿ ಕೊಂದು ಹಾಕಿದ್ದಾನೆ. ಬಳಿಕ ಅತ್ತೆ ಚೆನಮ್ಮಗೆ ಕಾಲ್ ಮಾಡಿ ನಿನ್ನ ಮಗಳ ಕಥೆ ಮುಗಿಸಿದ್ದಿನಿ. ಈಗ ಮಕ್ಕಳ ಜೊತೆ ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಇಟ್ಟಿದ್ದ‌‌. ಬಳಿಕ ಆತ ಪೊಲೀಸ್ ಠಾಣೆಗೆ ಹೋಗುವ ಮಾರ್ಗ ಮಧ್ಯೆ ಲಿಂಗಸೂಗೂರು ಪೊಲೀಸರು ಆರೋಪಿ ಪತಿ ಜೆಟ್ಟೆಪ್ಪನನ್ನ ಬಂಧಿಸಿದ್ದಾರೆ.

ರೇಣುಕಾ ಸಾಯುವ ಮುನ್ನ ತಾಯಿಗೆ ಹೇಳಿದ್ದೇನು?: ರೇಣುಕಾ ಮತ್ತು ಜೆಟ್ಟೆಪ್ಪ ಪ್ರೀತಿಸಿ ಮದುವೆ ಆಗಿದ್ರು. ಮದುವೆಯಾದ ಆರಂಭದಲ್ಲಿ ಇಬ್ಬರೂ ಖುಷಿ ಖುಷಿಯಿಂದ ಜೀವನ ಸಾಗಿಸುತ್ತಿದ್ರು. ಆದ್ರೆ ಕಳೆದ ನಾಲ್ಕು- ಐದು ವರ್ಷಗಳಿಂದ ಪತಿ ಜೆಟ್ಟೆಪ್ಪಗೆ ಪತ್ನಿ ರೇಣುಕಾಳ ಮೇಲೆ ಅನುಮಾನ ಶುರುವಾಗಿತ್ತು. ಆ ಅನುಮಾನ ಇದ್ರೂ ರೇಣುಕಾ ಯಾರೋ ವ್ಯಕ್ತಿಯೊಬ್ಬನ ಜೊತೆಗೆ ನಿತ್ಯ ಫೋನ್ ‌ನಲ್ಲಿ ಮಾತನಾಡುತ್ತಿದ್ದಳು‌. ಇದೇ ವಿಚಾರಕ್ಕೆ ನಿತ್ಯ ಮನೆಯಲ್ಲಿ ಮಕ್ಕಳ ಎದುರೇ ಗಂಡ- ಹೆಂಡತಿ ಜಗಳವಾಡುತ್ತಿದ್ರು. ನಿನ್ನೆಯಿಂದಲ್ಲೇ ಮನೆಯಲ್ಲಿ ಜಗಳ ಶುರುವಾಗಿತ್ತು. ಆ ಜೆಟ್ಟೆಪ್ಪ ಚಾಕು ಹಿಡಿದುಕೊಂಡು ಮನೆ ಸುತ್ತ ತಿರುಗಾಟ ನಡೆಸಿದ್ದಾನೆ ಅಂತ ರೇಣುಕಾ ತನ್ನ ತಾಯಿ ಚೆನ್ನಮ್ಮಗೆ ಫೋನ್ ಮಾಡಿ ಮನೆಯಲ್ಲಿ ನಡೆದ ಜಗಳ ತಿಳಿಸಿದ್ದಾಳೆ. 

ಆಗ ಚೆನ್ನಮ್ಮ ತವರು ಮನೆಗೆ ಬರುವಂತೆ ಹೇಳಿದ್ದಾಳೆ. ನಾಳೆ ಬೆಳಗ್ಗೆ ಬರುವುದಾಗಿ ರೇಣುಕಾ ಹೇಳಿದ್ದಾಳೆ. ರಾತ್ರಿ ಎಂದಿನಂತೆ ಮನೆಯಲ್ಲಿ ‌ಮಲಗಿದ್ರು. ಬೆಳಗ್ಗೆ ತವರಿಗೆ ಹೋಗಲು ರೇಣುಕಾ ತಯಾರಿ ನಡೆಸಿದ್ದಳು. ಆ ವೇಳೆ ಮತ್ತೆ ಮನೆಯಲ್ಲಿ ಜಗಳ ಶುರುವಾಗಿ ಕೋಪಗೊಂಡ ಗಂಡ ಜೆಟ್ಟೆಪ್ಪ ಕೊಡಲಿಯಿಂದ ತಲೆಗೆ ಹೊಡೆದು ಹಾಕಿದ್ದಾನೆ. ಅಷ್ಟಕ್ಕೇ ರೇಣುಕಾ ಬಿದ್ದು ರಕ್ತದಲ್ಲಿ ನರಳಾಟ ನಡೆಸಿದ್ದಾಳೆ. ಈ ವೇಳೆ ಕುತ್ತಿಗೆ ಭಾಗಕ್ಕೆ ಮತ್ತೆ ಹೊಡೆದು ಮನೆ ಬಿಟ್ಟಿದ್ದಾನೆ. ಅತ್ತ ರಕ್ತದಲ್ಲಿ ನರಳಾಟ ನಡೆಸಿ ರೇಣುಕಾ ಮನೆಯಲ್ಲೇ ಪ್ರಾಣಬಿಟ್ಟಿದ್ದಾಳೆ. ಇತ್ತ ಪತಿ - ಪತ್ನಿಗೆ ಕೊಂದು ಇಬ್ಬರು ಮಕ್ಕಳನ್ನು ಕರೆದುಕೊಂಡು ಲಿಂಗಸೂಗೂರು ಠಾಣೆಗೆ ಬಂದು ಶರಣಾಗಿದ್ದಾನೆ. 

ಮಂತ್ರಾಲಯದಲ್ಲಿ ಉತ್ತರಾಧನೆಯ ರಥೋತ್ಸವ ಸಂಭ್ರಮ

ಒಟ್ಟಿನಲ್ಲಿ ಹೆಂಡತಿ ಪರಪುರುಷನ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾಳೆ ಎಂಬ ಶಂಕೆಯಿಂದ ಗಂಡ ಕೋಪಗೊಂಡು ‌ಪತ್ನಿಯ ಜೀವವೇ ತೆಗೆದಿದ್ದಾನೆ. ಈಗ ಪತಿ ಜೈಲು ಪಾಲಾಗಿದ್ದಾನೆ. ಪತ್ನಿ ಮಣ್ಣು ಪಾಲಾಗಿದ್ದಾಳೆ. ಇತ್ತ ಪ್ರಪಂಚದ ಜ್ಞಾನ ಇಲ್ಲದ ಎರಡು ಮಕ್ಕಳು ಬೀದಿಪಾಲಾಗಿವೆ. ಗಂಡ- ಹೆಂಡತಿ ಇಬ್ಬರು ಸ್ವಲ್ಪ ತಾಳ್ಮೆಯಿಂದ ಹಿರಿಯರ ಸಮ್ಮುಖದಲ್ಲಿ ಕುಳಿತು ಮಾತನಾಡಿಕೊಂಡಿದ್ರೆ ಇಂತಹ ದುರಂತ ‌ನಡೆಯುತ್ತಿರಲಿಲ್ಲ. ಅದು ಏನೇ  ಇರಲಿ, ಆತನೇ ಜೀವ ಅಂತ ಜೆಟ್ಟೆಪ್ಪನನ್ನ ನಂಬಿ ಪ್ರೀತಿಸಿ ಮದುವೆಯಾಗಿದ್ದಾಕೆ, ಕೊನೆಗೆ ಆತನಿಂದಲೇ ಉಸಿರು ಚೆಲ್ಲಿದ್ದು ದುರಂತ ಸರಿ.

Follow Us:
Download App:
  • android
  • ios