ನಾನೂ ಸೇರಿದಂತೆ ಎಲ್ಲರೂ ಬಸವ ತತ್ವ ಪಾಲನೆ ಮಾಡಬೇಕು ಎಂದು ಕೋರಿಕೊಳ್ಳುತ್ತೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.  

ಮೈಸೂರು(ಏ.26): ನಾನೂ ಸೇರಿದಂತೆ ಎಲ್ಲರೂ ಬಸವ ತತ್ವ ಪಾಲನೆ ಮಾಡಬೇಕು ಎಂದು ಕೋರಿಕೊಳ್ಳುತ್ತೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. 

ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಸಚಿವರು, ಜ್ಯುಬಿಲೆಂಟ್ ಕಾರ್ಖಾನೆಯಿಂದ ಸೋಂಕು ತಗುಲಲು ಮೂಲ ಕಾರಣ ಯಾವುದು ಎಂಬ ಬಗ್ಗೆ ಸೂಕ್ತ ತನಿಖೆಯಾಗಲು ಅಧಿಕಾರಿಯನ್ನು ನೇಮಿಸುವಂತೆ ನಾನು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆ.

ಚಿತ್ರದುರ್ಗ: ಗಾಳಿ ಮಳೆಗೆ 1000ಕ್ಕೂ ಹೆಚ್ಚು ಬಾಳೆ ನಾಶ

ಈ ಹಿನ್ನೆಲೆಯಲ್ಲಿ ಕೊರೋನಾ ಪ್ರಕರಣಕ್ಕೆ ಜಿಲ್ಲಾ ಉಸ್ತುವಾರಿ ಅಧಿಕಾರಿಯಾಗಿರುವ ಹರ್ಷ ಗುಪ್ತ ಅವರು ಸರ್ಕಾರಕ್ಕೆ ಶೀಘ್ರವಾಗಿ ಜ್ಯುಬಿಲೆಂಟ್ ಸೋಂಕಿನ ಮೂಲವನ್ನು ಪತ್ತೆಹಚ್ಚಿ ಸರ್ಕಾರಕ್ಕೆ ವರದಿ ಕೊಡಲು ಮಾನ್ಯ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವರದಿ ಬರಲಿದೆ ಎಂದು ತಿಳಿಸಿದರು. 

ಕೊರೋನಾ ಪ್ರಕರಣಗಳು ಈಗ ಕಡಿಮೆಯಾಗಿದೆ. ಸರ್ಕಾರ ಸಾಕಷ್ಟು ಬಿಗಿಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಹತೋಟಿಗೆ ಬರಲಿದೆ ಎಂದು ಸಚಿವರು ತಿಳಿಸಿದರು.

ಹಣದ ವಿಷಯಕ್ಕೆ ಜಗಳ: ದನದ ವ್ಯಾಪಾರಿಯ ಬರ್ಬರ ಕೊಲೆ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಎಂಜಿ ರಸ್ತೆಯ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಸೂಕ್ತ ವ್ಯವಸ್ಥೆಯಾದ ಮೇಲೆ ಎಲ್ಲವೂ ಸರಿಯಾಗಲಿದೆ. ಸಾರ್ವಜನಿಕರ ಸಹಕಾರದ ಅವಶ್ಯಕತೆ ಇದೆ ಎಂದು ಸಚಿವರು ಹೇಳಿದರು.