ಸೊಳ್ಳೆಗಳ ನಿಯಂತ್ರಿಸಲು ಫಾಗಿಂಗ್ ಸಿಂಪಡಣೆ
ಪಿರಿಯಾಪಟ್ಟಣ ತಾಲೂಕಿನ ಅರಳಿಮರದ ಕೊಪ್ಪಲು ಗ್ರಾಮದಲ್ಲಿ ಕಿತ್ತೂರು ಗ್ರಾಪಂ ಹಾಗೂ ಸಂಗರಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಡೆಂಘೀ, ಚಿಕನ್ ಗುನ್ಯಾ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಲು ಗ್ರಾಮದ ಎಲ್ಲ ಬೀದಿಗಳಲ್ಲಿ ಫಾಗಿಂಗ್ ಸಿಂಪಡಣೆ ಮಾಡಲಾಯಿತು.
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಅರಳಿಮರದ ಕೊಪ್ಪಲು ಗ್ರಾಮದಲ್ಲಿ ಕಿತ್ತೂರು ಗ್ರಾಪಂ ಹಾಗೂ ಸಂಗರಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಡೆಂಘೀ, ಚಿಕನ್ ಗುನ್ಯಾ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಲು ಗ್ರಾಮದ ಎಲ್ಲ ಬೀದಿಗಳಲ್ಲಿ ಫಾಗಿಂಗ್ ಸಿಂಪಡಣೆ ಮಾಡಲಾಯಿತು.
ಪಿಡಿಒ ರಾಜಶೇಖರ್ ಮಾತನಾಡಿ, ಈ ಗ್ರಾಮದಲ್ಲಿ ಚಿಕ್ಕ ಮಗುವಿಗೆ ಡೆಂಘೀ ಪ್ರಕರಣ ಕಂಡು ಬಂದಿದ್ದರಿಂದ ಗ್ರಾಮವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಿದ್ದೇವೆ, ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಫಾಗಿಂಗ್ ಸಿಂಪಡಣೆ ಮಾಡಿದ್ದೇವೆ. ಆರೋಗ್ಯ ಸಿಬ್ಬಂದಿಗಳು ಕೂಡ ಪ್ರತಿ ಮನೆಮನೆಗೂ ಭೇಟಿ ನೀಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಹಿತಿ ನೀಡಿದ್ದಾರೆ ಎಂದರು.
ಸಂಗರಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಅಧಿಕಾರಿ ಉಷಾ ಮಾತನಾಡಿ, ಡೆಂಘೀ ಹಾಗೂ ಚಿಕನ್ ಗುನ್ಯಾ ರೋಗಿಗಳಿಗೆ ಯಾವುದೇ ನಿರ್ದಿಷ್ಟ ಔಷಧಿ ಲಸಿಕೆ ಇರುವುದಿಲ್ಲ, ಸಾರ್ವಜನಿಕರು ರೋಗಗಳನ್ನು ತಡೆಗಟ್ಟಲು ಮುಂಜಾಗ್ರತ ಕ್ರಮ ವಹಿಸುವಂತೆ ತಿಳಿಸಿದರು.
ಗ್ರಾಪಂ ಸದಸ್ಯ ನಟರಾಜ್, ಸಮುದಾಯ ಆರೋಗ್ಯ ಅಧಿಕಾರಿ ರೇಖಾ, ಪ್ರಾಥಮಿಕ ಸುರಕ್ಷತಾಧಿಕಾರಿ ಸುಚಿತ್ರ, ಮಹೇಶ್, ಆಶಾ ಕಾರ್ಯಕರ್ತೆ ರಮ್ಯ ಇದ್ದರು.
ಡೆಂಘಿ ಎಚ್ಚರ
ಬೆಂಗಳೂರು(ಸೆ.20): ವಾತಾವರಣ ಬದಲಾಗ್ತಿದ್ದಂತೆ ಆರೋಗ್ಯದಲ್ಲೂ ಏರುಪೇರಾಗ್ತಿದೆ. ಇತ್ತೀಚೆಗಂತೂ ಡೆಂಗ್ಯೂ ಫೀವರ್ ದುಪ್ಪಟ್ಟಾಗ್ತಿದೆ. ಸಿಕ್ಕಾಪಟ್ಟೆ ತಲೆನೋವು ಜ್ವರ ಅಂತ ಸಿಟಿ ಜನ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದು ಆಸ್ಪತ್ರೆ ರಷ್ ಆಗ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯೂ ಎಚ್ಚೆತ್ತುಕೊಂಡಿದ್ದು ಶಾಲಾ ಮಕ್ಕಳಿಗೆ ಪೋಷಕರಿಗೆ ಎಚ್ಚರಿಕೆ ನೀಡಿದೆ. ಕೆಮ್ಮು, ಹೊಟ್ಟೆ ನೋವು ಚಳಿಜ್ವರ, ವೈರಲ್ ಫೀವರ್, ಮೈ- ಕೈ ನೋವು ತಲೆನೋವು, ನ್ಯೂಮೋನಿಯಾ, ಡೆಂಘೀ ಸೇರಿದಂತೆ ಬೇರೆ ಬೇರೆ ವೈರಸ್ ಗಳ ಕಾಟ ಶುರುವಾಗ್ತಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ಆರೋಗ್ಯದ ಬಗ್ಗೆ ಕೇರ್ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಈಡಿಸ್ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತಿದ್ದು, 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ರೋಗ ಲಕ್ಷಣಗಳು
* ಇದ್ದಕ್ಕಿದ್ದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈಕೈ & ಕೀಲು ನೋವು, ವಾಕರಿಕೆ ವಾಂತಿ
* ತೀವ್ರ ಹೊಟ್ಟೆ ನೋವು
* ಬಾಯಿ, ಮೂಗು & ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು
* ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗುರುತುಗಳು
*ಕಪ್ಪು ಬಣ್ಣದ ಮಲ ವಿಸರ್ಜನೆ
* ವಿಪರೀತ ಬಾಯಾರಿಕೆ
* ತಣ್ಣನೆಯ ಬಿಳಿಚಿದ ಚರ್ಮ
* ಜ್ಞಾನ ತಪ್ಪುವುದು
* ರಕ್ತದ ಒತ್ತಡದ ಕುಸಿತ & ನಾಡಿ ಬಡಿತದ ಕುಸಿತ
ಜಾಗರೂಕರಾಗಿರಿ! ಡೆಂಗ್ಯೂ ಸೊಳ್ಳೆಗಳು ರೆಫ್ರಿಜರೇಟರ್‌ನಲ್ಲೂ ಹುಟ್ಟುತ್ತೆ !
ಮುಂಜಾಗ್ರತಾ ಕ್ರಮವಾಗಿ ಏನು ಮಾಡಬೇಕು?
1. ಮನೆಯಲ್ಲಿರುವ ಎಲ್ಲಾ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಬಾವಣೆಯಲ್ಲಿರುವ ತೊಟ್ಟಿಯ ನೀರನ್ನು
ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ನೀರನ್ನು ಮತ್ತೆ ಭದ್ರವಾಗಿ ತುಂಬಿಸಿ
2. ಮನೆಯ ಸುತ್ತ-ಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟಿನ್, ಟೈರು ಇತ್ಯಾದಿ ಘನತ್ಯಾಜ್ಯ
ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಘನತ್ಯಾಜ್ಯ ವಸ್ತುಗಳನ್ನು ಬೋರಲಾಗಿಡುವುದು ಮತ್ತು ಶೀಘ್ರವಾಗಿ ಸೂಕ್ತ ವಿಲೇವಾರಿ ಮಾಡಬೇಕು
3. ಏರ್ ಕೂಲರ್‌ಗಳಲ್ಲಿ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಬದಲಾಯಿಸಬೇಕು.
4. ಯಾವಾಗಲೂ ಮೈ ತುಂಬಾ ಬಟ್ಟೆ ಧರಿಸಬೇಕು.
5. ಹಗಲು ಹೊತ್ತಿನಲ್ಲಿ ನಿದ್ರಿಸುವ / ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು ಮತ್ತು ವಯಸ್ಸಾದವರು
ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
6. ಡೆಂಗಿ ಜ್ವರ ಪೀಡಿತರೂ ಸಹ ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
7. ಜ್ವರ ಪೀಡಿತರು ಸಾಕಷ್ಟು ದ್ರವರೂಪದ ಆಹಾರಗಳನ್ನು ಸೇವಿಸುವುದು ಹಾಗೂ ಅಗತ್ಯ ವಿಶ್ರಾಂತಿಯನ್ನು
ಪಡೆಯಬೇಕು.
8. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.
ಜೊತೆಗೆ ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿತಾಣ ಸಮೀಕ್ಷೆಗೆಂದು ಮನೆ ಭೇಟಿ ನೀಡುವ ಆರೋಗ್ಯ ಇಲಾಖೆಯ
ಸಿಬ್ಬಂದಿ ಹಾಗೂ ಆಶಾ ಸ್ವಯಂಸೇವಕರು ನೀಡುವ ಸಲಹೆ - ಸೂಚನೆಗಳನ್ನು ತಪ್ಪದೆ ಪಾಲಿಸ್ಬೇಕು.
ಶಾಲಾ - ಕಾಲೇಜು, ಅಂಗನವಾಡಿ, ಸರ್ಕಾರಿ / ಖಾಸಗಿ ಕಛೇರಿಗಳು, ಬಸ್ ಡಿಪೋಗಳು ಇತ್ಯಾದಿಗಳಲ್ಲಿಯೂ
ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಅಗತ್ಯ.