ಬೆಂಗಳೂರು [ಮಾ.13]: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ-ಅನಂತಪುರ ನಡುವೆ ಮಾ.13ರಿಂದ ಫ್ಲೈ ಬಸ್‌ ಸೇವೆ ಆರಂಭಿಸಲು ಕೆಎಸ್‌ಆರ್‌ಟಿಸಿ ಮುಂದಾ​ಗಿತ್ತು. 

ಆದರೆ, ಇದೀಗ ರಾಜ್ಯ​ದಲ್ಲಿ ಕೊರೋನಾ ಭೀತಿ ಎದು​ರಾ​ಗಿದೆ ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡಲಾಗಿದೆ. 

KSRTC ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಕುಸಿತ!

ಜನರು ಮನೆ ಬಿಟ್ಟು ಹೊರ​ಡು​ತ್ತಿಲ್ಲ. ಭಾರೀ ಮುಂಜಾ​ಗೃತ ಕ್ರಮ ಕೈಗೊ​ಳ್ಳ​ಲಾ​ಗು​ತ್ತಿದೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಏ.1ರಿಂದ ಈ ಫ್ಲೈ ಬಸ್‌ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.

ಫ್ಲೈ ಬಸ್ ಸೇವೆಯಿಂದ ಬೆಂಗಳೂರಿನಿಂದ ಅಂತಪುರಕ್ಕೆ ತೆರಳುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.