Mangaluru: ಉಳ್ಳಾಲ ನಗರಸಭೆ ಬಜೆಟ್ ನಲ್ಲೂ ಸಂಘರ್ಷ ಸೃಷ್ಟಿಸಿದ ಕಿವಿ ಮೇಲಿನ ಹೂ!

ರಾಜ್ಯ ಬಜೆಟ್ ವೇಳೆ ಕಿವಿ ಮೇಲೆ ಹೂವಿಟ್ಟು ಆಡಳಿತಾರೂಢ ಬಿಜೆಪಿ ವಿರುದ್ದ ತಿರುಗಿಬಿದ್ದಿದ್ದ ಕಾಂಗ್ರೆಸ್ ಪಕ್ಷದ ವಿರುದ್ದ ಮಂಗಳೂರಿನ ಸ್ಥಳೀಯ ಸಂಸ್ಥೆಯೊಂದರ ಬಜೆಟ್ ವೇಳೆ ಜೆಡಿಎಸ್ ಸದಸ್ಯರು ಕಿವಿ ಮೇಲೆ ಹೂ ಇಟ್ಟು ತಿರುಗೇಟು ನೀಡಿದ ಘಟನೆ ನಡೆದಿದೆ. ಕಿ

Flowers tucked behind ears created conflict in Ullal Municipal Council  budget gow

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಫೆ.21): ರಾಜ್ಯ ಬಜೆಟ್ ವೇಳೆ ಕಿವಿ ಮೇಲೆ ಹೂವಿಟ್ಟು ಆಡಳಿತಾರೂಢ ಬಿಜೆಪಿ ವಿರುದ್ದ ತಿರುಗಿಬಿದ್ದಿದ್ದ ಕಾಂಗ್ರೆಸ್ ಪಕ್ಷದ ವಿರುದ್ದ ಮಂಗಳೂರಿನ ಸ್ಥಳೀಯ ಸಂಸ್ಥೆಯೊಂದರ ಬಜೆಟ್ ವೇಳೆ ಜೆಡಿಎಸ್ ಸದಸ್ಯರು ಕಿವಿ ಮೇಲೆ ಹೂ ಇಟ್ಟು ತಿರುಗೇಟು ನೀಡಿದ ಘಟನೆ ನಡೆದಿದೆ. ಕಿವಿಗೆ ಹೂವಿಟ್ಟು ಉಳ್ಳಾಲ ನಗರಸಭೆಯ ಆಡಳಿತ ಪಕ್ಷ ಕಾಂಗ್ರೆಸ್ ನ ಬಜೆಟ್ ಅಣಕಿಸಿದ ಜೆಡಿಎಸ್ ಸದಸ್ಯರ ನಡೆ ನಗರಸಭೆಯಲ್ಲಿ ಭಾರೀ ಗಲಾಟೆ ಗದ್ದಲಕ್ಕೆ ಕಾರಣವಾಗಿದೆ. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಮಂಗಳೂರಿನ ಉಳ್ಳಾಲ ನಗರಸಭೆಯ 2023-24 ನೇ ಸಾಲಿನ ಬಜೆಟ್ ಮಂಡನೆ ವೇಳೆ ಘಟನೆ ನಡೆದಿದ್ದು, ಬಜೆಟ್ ವಿರೋಧಿಸಿದ ಜೆಡಿಎಸ್ ಕೌನ್ಸಿಲರ್ ಗಳು ಕಿವಿಗೆ ಹೂವಿಟ್ಟು ಕಾಂಗ್ರೆಸ್ ಬಜೆಟ್ ಅನ್ನು ಅಣಕಿಸಿದ್ದಾರೆ. ರಾಜ್ಯ ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿವಿಗೆ ಹೂ ಇಟ್ಟು ಬಿಜೆಪಿ ಸರಕಾರವನ್ನ ಅಣಕಿಸಿದ್ದರು. ಆದರೆ ಕಾಂಗ್ರೆಸ್ನ ಅಸ್ತ್ರವನ್ನೇ ಜೆಡಿಎಸ್ ನ ಉಳ್ಳಾಲ ನಗರಸಭೆ ಸದಸ್ಯರು ಕಾಂಗ್ರೆಸ್ ವಿರುದ್ದ ಪ್ರಯೋಗ ಮಾಡಿದ್ದಾರೆ. ಇದರಿಂದ ಆಡಳಿತ-ವಿರೋಧ ಪಕ್ಷಗಳ ನಡುವೆ ಗದ್ದಲ ಏರ್ಪಟ್ಟಿತು. ಬಳಿಕ ಅಧ್ಯಕ್ಷೆ ಚಿತ್ರಕಲಾ ಗಲಾಟೆಯ ಮಧ್ಯೆಯೇ ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಕಾಂಗ್ರೆಸಿಗರಿಗೆ ಜನರೇ ಕಿವಿ ಮೇಲೆ ಹೂವು ಇಟ್ಟಿದ್ದಾರೆ: ಸಿಎಂ ವ್ಯಂಗ್ಯ

 ಈ ವೇಳೆ ಎಸ್ ಡಿಪಿಐ ಸದಸ್ಯ ಅಜೆಂಡದಲ್ಲಿ ಸಭೆ ಪೂರ್ಣಗೊಂಡಿಲ್ಲವೆಂದು ದಾಖಲಿಸಲು ಸೂಚಿಸಿದಾಗ ಮತ್ತೆ ಗದ್ದಲ ನಡೆದು, ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯೆಯರು ಎಸ್ಡಿಪಿಐನ ಅಝ್ಗರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಒತ್ತಾಯಿಸಿದರು.  ಇದರಿಂದ ಕೆರಳಿದ ಅಝ್ಗರ್ ಕೈ ಸದಸ್ಯೆಯರ ಜೊತೆ ಮಾತಿನ ಚಕಮಕಿ ನಡೆಸಿ ತಳ್ಳಾಟ ನಡೆಸಿ ಸಂಘರ್ಷ ಏರ್ಪಟ್ಟಿದೆ.

ಕಾಂಗ್ರೆಸ್‌ನಿಂದ ‘ಕಿವಿ ಮೇಲೆ ಹೂವು’ ಅಭಿಯಾನ ಆರಂಭ

ಈ ವೇಳೆ ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ, ಕಾಂಗ್ರೆಸ್  ಬಜೆಟ್ ಗೆ ಬೆಂಬಲ ಸೂಚಿಸಿದರೆ, ಜೆಡಿಎಸ್ ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲನ್ನ ಬಡಿದು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಹಿರಿಯ ಸದಸ್ಯ ದಿನಕರ್ ಉಳ್ಳಾಲ್ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿದ್ದು, ನೀವಿಬ್ಬರು ಒಂದೇ ನಾಣ್ಯದ ಎರಡು ಮುಖಗಳೆಂದು ಆಕ್ಷೇಪಿಸಿದ್ದಾರೆ.

Latest Videos
Follow Us:
Download App:
  • android
  • ios