ಡಿಜಿಟಲ್ ಇಂಡಿಯಾ ಎಫೆಕ್ಟ್: ಹೂವು ಮಾರಾಟ ಮಾಡೋ ಅಜ್ಜಿ ಬಳಿಯೂ ಫೋನ್ ಪೇ..!
10 ಹೂವು ಪಡೆದು ಚಿಲ್ಲರೆ ಇಲ್ಲ ಎಂದರೆ ತನ್ನ ಚೀಲದಿಂದ ಸ್ಕ್ಯಾನರ್ ತೆಗೆದು ಇದಕ್ಕೆ ಹಣ ನೀಡಿ ಎಂದು ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಇಳಿ ವಯಸ್ಸಿನ ಮಹಿಳೆ ಮೊಬೈಲ್ ನೋಡದಿದ್ದರೂ ಆಧುನಿಕ ಬದುಕಿಗೆ ಒಗ್ಗಿರುವುದು ಬಹುವಿಶೇಷ.
ಗೋಕರ್ಣ(ಅ.22): ಇಂದಿನ ದಿನದಲ್ಲಿ ಎಲ್ಲೆಡೆ ಡಿಜಿಟಲ್ ಯುಗ. ಹಣ ಪಾವತಿಗೆ ಪೋನ್ ಪೇ, ಗೂಗಲ್ ಪೇ, ಈ ಪಾವತಿ ಪದ್ಧತಿ ಇಲ್ಲಿನ ಮಹಾಬಲೇಶ್ವರ, ಮಹಾಗಣಪತಿ ಮಂದಿರದ ಎದುರು ಹೂ ಮಾರುವ ಮಹಿಳೆಯರ ಕೈಯಲ್ಲೂ ಬಂದಿದೆ.
₹ 10 ಹೂವು ಪಡೆದು ಚಿಲ್ಲರೆ ಇಲ್ಲ ಎಂದರೆ ತನ್ನ ಚೀಲದಿಂದ ಸ್ಕ್ಯಾನರ್ ತೆಗೆದು ಇದಕ್ಕೆ ಹಣ ನೀಡಿ ಎಂದು ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಇಳಿ ವಯಸ್ಸಿನ ಮಹಿಳೆ ಮೊಬೈಲ್ ನೋಡದಿದ್ದರೂ ಆಧುನಿಕ ಬದುಕಿಗೆ ಒಗ್ಗಿರುವುದು ಬಹುವಿಶೇಷ.
ಪ್ರಾಚಾರ್ಯರ ಕಿರುಕುಳಕ್ಕೆ ತರಗತಿ ಕೋಣೆಯಲ್ಲಿಯೇ ಕುಸಿದು ಬಿದ್ದ ಕಾಲೇಜು ಪ್ರಾಧ್ಯಾಪಕಿ
ಇಲ್ಲಿ ನಿತ್ಯ ಹಲವಾರು ಹಾಲಕ್ಕಿ ಮಹಿಳೆಯರು ಹೂವು ಮಾರಿ ಜೀವನ ನಡೆಸುತ್ತಿದ್ದು, ಇವರಲ್ಲಿ ಬಂಕಿ ಕೊಡ್ಲದಿಂದ ಬರುವ ಪಾರ್ವತಿ ಫೋನ್ ಪೇ ಹೊಂದಿದ್ದಾಳೆ.