Asianet Suvarna News Asianet Suvarna News

Lalbagh Flower Show: ಜ.19ರಿಂದ ಲಾಲ್‌ಬಾಗ್‌ನಲ್ಲಿ ಅದ್ಧೂರಿ ಫಲಪುಷ್ಪ ಪ್ರದರ್ಶನ

ಸಿಲಿಕಾನ್ ಸಿಟಿಯ ಪ್ರೇಮಿಗಳ ನೆಚ್ಚಿನ ತಾಣ ಹಾಗೂ ವಾಯುವಿಹಾರಿಗಳ ಸ್ವರ್ಗ ಎಂದು ಕರೆಸಿಕೊಳ್ಳುವ ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಬೆಂಗಳೂರಿನಲ್ಲಿ 213ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. 

Flower Show From Janaury 19th To 26th In Lalbagh At Bengaluru gvd
Author
First Published Jan 11, 2023, 8:42 PM IST

ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜ.11): ಸಿಲಿಕಾನ್ ಸಿಟಿಯ ಪ್ರೇಮಿಗಳ ನೆಚ್ಚಿನ ತಾಣ ಹಾಗೂ ವಾಯುವಿಹಾರಿಗಳ ಸ್ವರ್ಗ ಎಂದು ಕರೆಸಿಕೊಳ್ಳುವ ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಬೆಂಗಳೂರಿನಲ್ಲಿ 213ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಈ ಫಲಪುಷ್ಪ ಪ್ರದರ್ಶನವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳೋಕೆ ಲಾಲ್‌ಬಾಗ್‌ ಸಿದ್ದವಾಗುತ್ತಿದೆ. ಹಾಗಾದ್ರೆ ಈ ಬಾರಿ 19ರಿಂದ 29ನೇ ತಾರೀಖಿನ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. 

ಮೊದಲ ಬಾರಿಗೆ ಗಾಜಿನ ಮನೆಯ ಹೊರಗಿನ ಮಂಟಪದಲ್ಲಿ ಚಿತ್ರಿಸಲಾಗುತ್ತಿರುವುದು ಪ್ರದರ್ಶನದ ಮುಖ್ಯ ವಿಷಯವಾಗಿದೆ. ಪ್ರತಿ ವರ್ಷ ಸಸ್ಯ ಕಾಶಿ ಲಾಲ್‌ಬಾಗ್‌ನಲ್ಲಿ ಹೂವಿನ ಲೋಕ ಮೇಳೈಸುತ್ತದೆ. ಕಳೆದ ಎರಡು ವರ್ಷಗಳಿಂದ ಕರೋನಾ ಹಿನ್ನಲೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಬಾರಿ ಕರೋನ ಸೋಂಕು ಕಡಿಮೆಯಾಗಿದ್ದು ಸಿಲಿಕಾನ್ ಸಿಟಿಯಲ್ಲಿ ಎಲ್ಲ ಚಟುವಟಿಕೆಗಳು ಗರಿಗೇದರಿದ್ದು ಜನರೆಲ್ಲ ಮತ್ತೆ ಲವಲವಿಕೆಯಿಂದ ಮನೆಯಿಂದ ಹೊರಗಡೆ ಬರುತ್ತಿದ್ದಾರೆ. 

ಜ.19ರಿಂದ ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ನಲ್ಲಿ ಸಿದ್ಧತೆ

ಹೀಗಾಗಿ ಲಾಲ್‌ಬಾಗ್‌ನಲ್ಲಿ ಹೂವಿನ ಲೋಕ ಅನಾವರಣಗೊಳ್ಳಲಿದ್ದು, ಇದಕ್ಕೆ ಈಗಾಗಲೇ ಭರದ ಸಿದ್ಧತೆ ಆರಂಭಗೊಂಡಿದೆ. ಈ ಬಾರಿ ಪ್ಲವರ್ ಶೋನ ವಿಶೇಷವೆನೆಂದರೆ ಮೊದಲ ಬಾರಿಗೆ ಪ್ರದರ್ಶನದ ಮುಖ್ಯ ವಿಷಯವನ್ನು ಗಾಜಿನ ಮನೆಯ ಹೊರಗಿನ ವಿಶೇಷ ಮಂಟಪದಲ್ಲಿ ಚಿತ್ರಿಸಲಾಗುತ್ತಿದೆ. 1500 ವರ್ಷಗಳ ಬೆಂಗಳೂರಿನ ಇತಿಹಾಸ ಆಧಾರಿತ ಪರಿಕಲ್ಪನೆಯನ್ನು ಈ ವರ್ಷದ ಮುಖ್ಯ ವಿಷಯವನ್ನಾಗಿಕೊಂಡಿದೆ. ಈ ವರ್ಷ ಗಾಜಿನ ಮನೆಯಲ್ಲಿ ಅಲಂಕಾರಿಕ ಸಸ್ಯಗಳನ್ನ ಆಯ್ದು ಕತ್ತರಿಸಿದ ಹೂವುಗಳ ವ್ಯವಸ್ಥೆ ಮತ್ತು ಪ್ರದರ್ಶನಕ್ಕೆ ಮುಖ್ಯ ಗಮನವನ್ನು ನೀಡಲಾಗುತ್ತಿದೆ.

ಬೆಂಗ್ಳೂರಿನ ಲಾಲ್‌ಬಾಗ್‌ ರೀತಿ ಮೈಸೂರಲ್ಲೂ ಸಸ್ಯೋದ್ಯಾನ..!

ಊಟಿ ಹಾಗೂ ಹಲವು ಕಡೆಗಳಿಂದ ಹೂವಿನ ಗಿಡಗಳನ್ನು ತರಿಸಿಕೊಳ್ಳಲಾಗುತ್ತದೆ, ಇನ್ನು ಪ್ಲವರ್ ಶೋನ ಉದ್ಘಾಟನೆಯನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಮಾಡಲಿದ್ದಾರೆ. ಶಾಸಕ ಉದಯ್.ಬಿ. ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ, ಸೇರಿದಂತೆ ಅನೇಕ ಗಣ್ಯರು ಚಾಲನೆ ನೀಡಲಿದ್ದಾರೆ. ಒಟ್ಟಿನಲ್ಲಿ ಫಲಪುಷ್ಪ ಪ್ರದರ್ಶನದ ತಯಾರಿ ಅದ್ದೂರಿಯಾಗಿ ಸಾಗಿ ಬರುತ್ತಿದ್ದು ಬೆಂಗಳೂರಿಗರಂತೂ ಹೂವಿನ ಸೌಂದರ್ಯವನ್ನು ನೋಡಿ ಕಣ್ಣು ತುಂಬಿಸಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

Follow Us:
Download App:
  • android
  • ios