Asianet Suvarna News Asianet Suvarna News

Bengaluru: ಜ.19ರಿಂದ ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ನಲ್ಲಿ ಸಿದ್ಧತೆ

ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ಕ್ರಿ.ಶ 1537ರಲ್ಲಿ ನಿರ್ಮಾಣಗೊಂಡ ಬೆಂಗಳೂರು ನಗರದ ಹುಟ್ಟು, ಬೆಳವಣಿಗೆಯ ಹಾದಿ ಕುರಿತ ಇತಿಹಾಸ ಬಿಂಬಿಸುವ ವಿಶಿಷ್ಟಆಕರ್ಷಣೆಗಳು ಈ ಬಾರಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯಲಿವೆ.

Flower Show From Janaury 19th To 26th In Lalbagh At Bengaluru gvd
Author
First Published Jan 5, 2023, 6:01 AM IST

ಬೆಂಗಳೂರು (ಜ.05): ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ಕ್ರಿ.ಶ 1537ರಲ್ಲಿ ನಿರ್ಮಾಣಗೊಂಡ ಬೆಂಗಳೂರು ನಗರದ ಹುಟ್ಟು, ಬೆಳವಣಿಗೆಯ ಹಾದಿ ಕುರಿತ ಇತಿಹಾಸ ಬಿಂಬಿಸುವ ವಿಶಿಷ್ಟಆಕರ್ಷಣೆಗಳು ಈ ಬಾರಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯಲಿವೆ.

ಈಗಾಗಲೇ ಜ.19ರಿಂದ 29ರವರಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ ಸಜ್ಜುಗೊಳ್ಳುತ್ತಿದೆ. ಬೆಂಗಳೂರು ಇತಿಹಾಸದ ಕುರಿತು ಫಲಪುಷ್ಪ ಪ್ರದರ್ಶನ ಆಯೋಜಿಸುವ ಬಗ್ಗೆ ತೋಟಗಾರಿಕೆ ಇಲಾಖೆ ಈಗಾಗಲೇ ತೀರ್ಮಾನ ಕೈಗೊಂಡಿದೆ. ಬೆಂಗಳೂರು ನಗರಕ್ಕೆ ಸುಮಾರು 1,500 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಈ ಇತಿಹಾಸವ​ನ್ನು ಈಗಿನ ಯುವ ಜನತೆಗೆ ಅರ್ಥೈಸಬೇಕಾಗಿದೆ. ಇದಕ್ಕಾಗಿ ಇದೇ ವಿಷಯವನ್ನು ಪ್ರಸಕ್ತ ವರ್ಷದ ವಿಷಯ ವಸ್ತುವನ್ನಾಗಿಸಲು ನಿರ್ಧರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ರಿಷಬ್‌ ಶೆಟ್ಟಿ ರಾಯಭಾರಿ

ಕಲಾಸಂಘ ಕೈಬಿಟ್ಟು ಪ್ರದರ್ಶನ: ಶತಮಾನದ ಇತಿಹಾಸವಿರುವ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘ(ಎಂಎಚ್‌ಎಸ್‌) ಸಹಭಾಗಿತ್ವದಲ್ಲಿ ಈವರೆಗೂ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿತ್ತು. ಪ್ರತಿ ವರ್ಷ ಮೈಸೂರು ಉದ್ಯಾನ ಕಲಾಸಂಘ ಪ್ರದರ್ಶನಕ್ಕೆ ಹಣಕಾಸು ನೆರವು ಒದಗಿಸುತ್ತಿತ್ತು. ಅದರಲ್ಲಿ ಬಂದ ಲಾಭಾಂಶದಲ್ಲಿ ಇಲಾಖೆ ಮತ್ತು ಸಂಘ ಹಂಚಿಕೊಳ್ಳುತ್ತಿದ್ದವು. ಇದೀಗ ಪ್ರಸಕ್ತ ವರ್ಷದಿಂದ ತೋಟಗಾರಿಕೆ ಇಲಾಖೆಯೇ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಮುಂದಾಗಿದೆ. ಹೀಗಾಗಿ ಮೈಸೂರು ಉದ್ಯಾನ ಕಲಾ ಸಂಘವನ್ನು ಕೈಬಿಟ್ಟು ಈ ಬಾರಿ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ: ಪ್ರದರ್ಶನದ ಪ್ರಯುಕ್ತ ಸರ್ಕಾರಿ, ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ ಇಲ್ಲವೇ ಕೈ ತೋಟಗಳು, ತರಕಾರಿ, ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್‌, ಥಾಯ್‌ಆರ್ಚ್‌ ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಜ.3ರಿಂದ 9ರವರೆಗೆ ಲಾಲ್‌ಬಾಗ್‌ನಲ್ಲಿರುವ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಇಕೆಬಾನ ಪೂರಕ ಕಲೆಗಳು, ವಿವಿಧ ಅಲಂಕಾರಿಕ ತೋಟಗಳ ಸ್ಪರ್ಧೆ ಅಥವಾ ಕುಂಡದಲ್ಲಿ ಬೆಳೆದ ಗಿಡಗಳ ಸ್ಪರ್ಧೆ ಮತ್ತು ಇಲಾಖಾ ಮಳಿಗೆಗಳು ಸ್ಪರ್ಧೆಗೆ ಲಾಲ್‌ಬಾಗ್‌ನಲ್ಲಿರುವ ತೋಟಗಾರಿಕೆಯ ಯೋಜನೆ, ತೋಟದ ಬೆಳೆಗಳು ಮತ್ತು ಹಣ್ಣುಗಳು ವಿಭಾಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗೆ: ನಂದಿನಿ (63640 37030), ಚುಂಚಯ್ಯ (99164 33061), ಆರ್‌.ಎನ್‌.ಶ್ರೀನಿವಾಸ(98458 07374) ಸಂಪರ್ಕಿಸಬಹುದು.

ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ

ಮೂರು ವರ್ಷ ರದ್ದಾಗಿದ್ದ ಕಾರ್ಯಕ್ರಮ: ಕೊರೋನಾ ಸೋಂಕು ಹಿನ್ನೆಲೆಯಲ್ಲಿ 2020ರಿಂದ 22ರವರೆಗೆ ಮೂರು ವರ್ಷಗಳು ಗಣರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗುತ್ತಿದ್ದ ಫಲಪುಷ್ಪ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು. ಈ ಬಾರಿ ಸೋಂಕಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಫಲಫುಷ್ಪ ಪ್ರದರ್ಶನವನ್ನು 10 ದಿನ ನಡೆಸಲು ತೋಟಗಾರಿಕೆ ಇಲಾಖೆ ತೀರ್ಮಾನ ಕೈಗೊಂಡಿದೆ. ಆದರೆ, ಸೋಂಕು ಹೆಚ್ಚಳಗೊಂಡರೆ ಯಾವುದೇ ಸಂದರ್ಭದಲ್ಲಿ ನಿರ್ಧಾರ ಬದಲಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Follow Us:
Download App:
  • android
  • ios