ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ..!

ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಮಂದಿಗೆ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗಿದ್ದು, ಪ್ರವಾಹದ ಸಾಧ್ಯತೆಗಳು ಹೆಚ್ಚಿದೆ. ಈ ನಿಟ್ಟಿನಲ್ಲಿ ಜನರ ಸುರಕ್ಷತೆ ಬಗ್ಗೆ ಕ್ರಮ ವಹಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗೆ ಸೂಚಿಸಿದರು.

Flood possibility in Uttara Kannada says DCM Govind Karajol

ಮೖಸೂರು (ಸೆ.03): ಕೃಷ್ಣ ನದಿ ಪಾತ್ರದಲ್ಲಿ ಶತಮಾನದಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿದ್ದು, ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. 6.30 ಲಕ್ಷ ಕ್ಯೂಸೆಕ್ ನೀರು ಹರಿದಿದ್ದು, ಈಗ ಮತ್ತೆ ಪ್ರವಾಹದ ಮುನ್ಸೂಚನೆ ಸಿಕ್ಕಿದೆ.

ಕೃಷ್ಣಾ ನದಿ ಪಾತ್ರದಲ್ಲಿ ಶತಮಾನದಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿದೆ. ಬರೋಬ್ಬರಿ 6.30 ಲಕ್ಷ ಕ್ಯೂಸೆಕ್ ನೀರು ಹರಿದಿದೆ. ಈಗ ಮತ್ತೆ ಪ್ರವಾಹದ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನೆಲೆ ಮುಂಜಾಗೃತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌:

ಕೂಡಲೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳನ್ನು ಎಷ್ಟು ದಿನ ಸಾಮೂಹಿಕವಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯ ? ಶಾಲಾ, ಕಾಲೇಜುಗಳಲ್ಲಿ ಉಳಿಸಿಕೊಂಡರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತೆ. ಆದ್ದರಿಂದ 50 ಸಾವಿರ ರೂ. ವೆಚ್ಚದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸುವಂತೆ ಸೂಚನೆ ನೀಡಿದ್ದೇವೆ. ಯಾವುದೇ ಹೆಚ್ಚುವರಿ ಹಾನಿಯಾಗದಂತೆ ಅಧಿಕಾರಿಗಳು ಜಾಗೃತಿ ವಹಿಸಿದ್ದಾರೆ ಎಂದು ಹೇಳಿದರು.

ಪರಿಹಾರ ವಿತರಣೆ ಆಗಿದೆ:

ಪರಿಹಾರ ಕಾರ್ಯಗಳು ಆಗಿಲ್ಲ ಎನ್ನುವುದು ಸುಳ್ಳು ಆರೋಪ. ಈಗಾಗಲೇ ಶೇ.90 ರಷ್ಟು ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಗೃಹ ಬಳಕೆ ವಸ್ತು ಕಳೆದುಕೊಂಡವರಿಗೆ ನಿಯಮಾನುಸಾರ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿಯಲ್ಲಿ 3500 ರೂ. ನೀಡಲು ಮಾತ್ರ ಅವಕಾಶ ಇದೆ. ಸಿಎಂ ಯಡಿಯೂರಪ್ಪ ಯಡಿಯೂರಪ್ಪ 6500 ರೂ. ಸೇರಿಸಿ 10,000 ರೂ. ನೀಡಲು ಸೂಚಿಸಿದ್ದಾರೆ ಎಂದರು.

ವಿಜಯಪುರ: ನೆರೆ ಪರಿಹಾರದ ಚೆಕ್ ವಾಪಸ್ ಕೊಟ್ಟ ಬ್ಯಾಂಕ್‌

ಶೇ.10ರಷ್ಟು ಸಂತ್ರಸ್ತರಿಗೆ ಕಾರಣಾಂತರಗಳಿಂದ ಪರಿಹಾರ ನೀಡಿಲ್ಲ. ಬ್ಯಾಂಕ್‌ನವರು ಆರ್‌ಟಿಜಿಎಸ್ ಮಾಡಲು ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ದಾಖಲೆಗಳನ್ನು ಕಳೆದುಕೊಂಡಿರುವವರಿಗೆ ಚೆಕ್ ಮುಖಾಂತರ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಮೈಸೂರಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

Latest Videos
Follow Us:
Download App:
  • android
  • ios