ವಿಜಯಪುರ: ನೆರೆ ಪರಿಹಾರದ ಚೆಕ್ ವಾಪಸ್ ಕೊಟ್ಟ ಬ್ಯಾಂಕ್
ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವೇನೋ ನೀಡಲಾಗಿದೆ. ಆದರೆ ಬ್ಯಾಂಕ್‌ನಲ್ಲಿ ಹಣವಿಲ್ಲದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಜನರ ಪರಿಸ್ಥಿತಿ ಉಂಟಾಗಿದೆ. ಹಣ ಪಡೆಯೋಕೆ ಅಂತ ಚೆಕ್ ತೆಗೆದುಕೊಂಡು ಜನ ಬ್ಯಾಂಕ್‌ಗೆ ಹೋದ್ರೆ ದುಡ್ಡಿಲ್ಲ ಅಂತ ಬ್ಯಾಂಕ್ ಸಿಬ್ಬಂದಿ ಚೆಕ್ ವಾಪಸ್ ಕೊಡ್ತಿದ್ದಾರೆ.
ವಿಜಯಪುರ (ಸೆ.03): ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವೇನೋ ನೀಡಲಾಗಿದೆ. ಆದರೆ ಬ್ಯಾಂಕ್‌ನಲ್ಲಿ ಹಣವಿಲ್ಲದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಜನರ ಪರಿಸ್ಥಿತಿ ಉಂಟಾಗಿದೆ. ಹಣ ಪಡೆಯೋಕೆ ಅಂತ ಚೆಕ್ ತೆಗೆದುಕೊಂಡು ಜನ ಬ್ಯಾಂಕ್‌ಗೆ ಹೋದ್ರೆ ದುಡ್ಡಿಲ್ಲ ಅಂತ ಬ್ಯಾಂಕ್ ಸಿಬ್ಬಂದಿ ಚೆಕ್ ವಾಪಸ್ ಕೊಡ್ತಿದ್ದಾರೆ.
ನೆರೆ ಪೀಡಿತ ತಾಲೂಕಲ್ಲಿ 150 ದಿನ ನರೇಗಾ ಕೆಲಸ?
ವಿಜಯಪುರದ ಮುದ್ದೇಬಿಹಾಳ ತಾಲೂಕಿನ ದೇವೂರ ಗ್ರಾಮದ ನೆರೆ ಸಂತ್ರಸ್ಥರಿಗೆ ನೀಡಲಾಗಿರುವ ಚೆಕ್‌ಗಳನ್ನು ಬ್ಯಾಂಕ್ ಸಿಬ್ಬಂದಿ ಹಿಂದಿರುಗಿಸುತ್ತಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೊಳೂರು ಗ್ರಾಮದ ಯೂನಿಯನ್ ಬ್ಯಾಂಕ್‌ನಲ್ಲಿ ನಗದು ಇಲ್ಲದೆ ಅನಿವಾರ್ಯವಾಗಿ ಸಿಬ್ಬಂದಿ ಚೆಕ್‌ಗಳನ್ನು ಹಿಂದಿರುಗಿಸಿದ್ದಾರೆ.
ಗಮನಿಸಿ, ರಾಜ್ಯ ಸರ್ಕಾರದ ಸ್ಪಂದನೆ, ಸಿಇಟಿ ಶುಲ್ಕ ಪಾವತಿ ದಿನಾಂಕ ವಿಸ್ತರಣೆ
ಬ್ಯಾಂಕ್ನಲ್ಲಿ ಹಣವಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ಚೆಕ್ ಸ್ವೀಕರಿಸಿಲ್ಲ. ತಾತ್ಕಾಲಿಕ ಪರಿಹಾರದ ಚೆಕ್ ಡ್ರಾ ಆಗದ ಕಾರಣ ನೆರೆ ಸಂತ್ರಸ್ತರು ಇನ್ನಷ್ಟು ಕಂಗಾಲಾಗಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳ ನಡೆಗೆ ಸಂತ್ರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.