Asianet Suvarna News Asianet Suvarna News

ಪ್ರವಾಹ ಎಫೆಕ್ಟ್: ಬೆಳಗಾವಿಯಲ್ಲಿ ಜನರೇಟರ್‌ಗಳಿಗೆ ಭಾರೀ ಬೇಡಿಕೆ

ಮಳೆ ಬಂದು ಪ್ರವಾಹಕ್ಕೆ ನದಿ ಪಾತ್ರದಲ್ಲಿರುವ ಜನರಿಗೆ ಸಾಕಷ್ಟು ಜನರಿಗೆ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಸುರಿದ ಮಳೆ ಹಲವಾರು ಕಂಪನಿ, ಸಂಸ್ಥೆ, ಹೋಟೆಲ್‌ಗಳು, ಆಸ್ಪತ್ರೆಗಳು, ಜ್ಯುವೆಲ್ಲರಿ ಅಂಗಡಿಗಳಿಗೆ ಆರ್ಥಿಕ ಹೊರೆಯನ್ನು ತಂದೊಡ್ಡಿದೆ. 

Flood Effect huge demand To Janareters In Belagavi
Author
Bengaluru, First Published Aug 22, 2019, 9:21 PM IST

ಬೆಳಗಾವಿ, [ಆ.22]: ಜಿಲ್ಲೆಯಲ್ಲಿ ಆ.2ರಿಂದ ಆ.12ರವರೆಗೆ ಸತತವಾಗಿ ಮಳೆ ಸುರಿದಿದೆ. ಈ ನೀರು ಎಲ್ಲ ಕಂಪನಿಗಳು, ಹೋಟೆಲ್‌ಗಳು, ಆಸ್ಪತ್ರೆಗಳು ವಿದ್ಯುತ್ ಕೈಕೊಟ್ಟಾಗ ಪರ‌್ಯಾಯವಾಗಿ ಬಳಸುತ್ತಿದ್ದ ಎಲೆಕ್ಟ್ರಿಕಲ್ ಜನರೇಟರ್‌ಗೂ ನುಗ್ಗಿದೆ.

ಕಾರಣ ಈ ಎಲೆಕ್ಟ್ರಿಕಲ್ ಜನರೇಟರ್‌ನ್ನು ಎಲ್ಲರೂ ಕಟ್ಟಡದ ನೆಲಮಾಳಿಗೆ ಅಥವಾ ಕಟ್ಟಡದ ಹೊರಗಡೆಯ ಇಟ್ಟುಕೊಂಡಿದ್ದಾರೆ. ಈಗ ಮಳೆ ನಿಂತಿದ್ದು ನೀರು ನುಗ್ಗಿದ ಪರಿಣಾಮ ಸಾಕಷ್ಟು ಜನರೇಟರ್‌ಗಳು ದುರಸ್ತಿಗೆ ಬಂದಿದ್ದು, ಬಾಡಿಗೆ ಜನರೇಟರ್‌ಗಳಿಗೆ ಭಾರಿ ಬೇಡಿಕೆ ಬಂದಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

3 ಸಾವಿರಕ್ಕೂ ಅಧಿಕ ಜನರೇಟರ್‌ಗಳು
ಸಾಮಾನ್ಯವಾಗಿ ಹೋಟೆಲ್, ದೊಡ್ಡ ದೊಡ್ಡ ವ್ಯಾಪಾರ ಮಳಿಗೆ, ಆಸ್ಪತ್ರೆ, ಕಂಪನಿಗಳು ಸೇರಿದಂತೆ ವಿವಿಧೆಡೆ ಸುಮಾರು ೩ಕ್ಕೂ ಸಾವಿರಕ್ಕೂ ಅಧಿಕ ಹಲವು ಕಂಪನಿಯ ಜನರೇಟರ್‌ಗಳು ಬಳಕೆ ಮಾಡಲಾಗುತ್ತಿದೆ. ಆದರೆ, ನಗರದಲ್ಲಿ ಬಿಟ್ಟು ಬಿಡದೇ ಸುರಿದ ಭಾರಿ ಮಳೆಗೆ ನೀರು ಕಟ್ಟಡದ ಕೆಳಭಾಗಕ್ಕೆ ನುಗ್ಗಿದೆ. ಇದರಿಂದಾಗಿ ಜನರೇಟರ್‌ಗಳು ಸಾಕಷ್ಟು ಹಾನಿಯಾಗಿವೆ. 

3 ಕೆವಿಯಿಂದ ಹಿಡಿದು 1250 ಕೆವಿಯ ಜನರೇಟರ್ ಬಳಕೆಯಲ್ಲಿವೆ. ಈ ಪೈಕಿ ಸದ್ಯ ಲೆಕ್ಕದ ಪ್ರಕಾರ ಬೆಳಗಾವಿಯಲ್ಲಿಯೇ ಹೆಚ್ಚು ಇದ್ದು, ಉಳಿದಂತೆ ಜಿಲ್ಲೆಯ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಇವೆ. ಈ ಜನರೇಟರ್‌ಗಳಿಗೆ 50 ಸಾವಿರ ವೆಚ್ಚದಿಂದ ಹಿಡಿದು 1 ಕೋಟಿಗೂ ಅಧಿಕ ಬೆಲೆಯುಳ್ಳ (ಕೆವಿ ಗೆ ಅನುಗುಣವಾಗಿ)ದ್ದಾಗಿರುತ್ತವೆ. ಇವುಗಳಿಗೆ ವಾರಂಟಿ ಇದೆ.  ಆದರೆ, ನೀರು ನುಗ್ಗಿದರೆ ಯಾವುದೇ ಗ್ಯಾರಂಟಿ ಅನ್ವಯವಾಗುವುದಿಲ್ಲ. ಇದರಿಂದ ಇರುವ ಜನರೇಟರ್ ಅನ್ನೇ ರಿಪೇರಿ ಮಾಡಿಸಬೇಕಿದೆ.

ಬಾಡಿಗೆ ಜನರೇಟರ್‌ಗೆ ಭಾರಿ ಬೇಡಿಕೆ
ಈಗ ಮಳೆ ಸ್ಥಗಿತವಾಗಿದೆ. ಆದರೆ, ಕಟ್ಟಡದ ಕೆಳಭಾಗದಲ್ಲಿರುವ ನೀರನ್ನು ಖಾಲಿ ಮಾಡಲು ಸುಮಾರು ನಾಲ್ಕೈದು ದಿನಗಳೇ ಕಳೆದಿವೆ. ಇದಾದ ನಂತರ ಮುಳುಗಡೆ ಕಂಡ ಜನರೇಟರ್ ರಿಪೇರಿಗೆ ಕನಿಷ್ಠ ಮೂರ‌್ನಾಲ್ಕು ದಿನಗಳಾದರೂ ಬೇಕಾಗಬಹುದು. ಇದರಿಂದ ವಿದ್ಯುತ್ ವ್ಯತ್ಯಯವಾದರೆ ಪರ‌್ಯಾಯವಾಗಿ ವ್ಯವಸ್ಥೆ ಇರಬೇಕು. ಹೀಗಾಗಿ ಈಗ ಬಹುತೇಕ ಜನರು ಜನರೇಟರ್ ಬಾಡಿಗೆಗೆ ಮುಗಿಬಿದ್ದಿದ್ದಾರೆ. ಸುಮಾರು 2 ಸಾವಿರದಿಂದ 5 ಸಾವಿರವರೆಗೆ ದಿನವೊಂದಕ್ಕೆ ಬಾಡಿಗೆ ನೀಡಬೇಕಿದೆ. ಜನರೇಟರ್‌ಗಳು ರಿಪೇರಿಯಾಗುವತನಕ ಬಾಡಿಗೆ ಪಡೆಯುವುದು ಅನಿವಾರ್ಯವಾಗಿದೆ.

ಇದರ ಜತೆಗೆ ಜನರೇಟರ್ ರಿಪೇರಿಗೆ ಸಾಕಷ್ಟು ಬೇಡಿಕೆಗಳು ಬರುತ್ತಿವೆ. ಹೀಗಾಗಿ ರಿಪೇರಿಗಾಗಿ ಸಾಲು ಸಾಲೇ ಇದೆ. ರಿಪೇರಿಗಾಗಿ ಮೊದಲೇ ಬುಕ್ಕಿಂಗ್ ಮಾಡಬೇಕಿದ್ದು, ಬುಕಿಂಗ್ ಮಾಡಿದ ನಾಲ್ಕಾರು ದಿನಗಳು ಕಳೆದ ನಂತರ ಸರದಿ ಬರುತ್ತಿದೆ. ಸಾಮಾನ್ಯವಾಗಿ 6 ತಿಂಗಳ ಅಥವಾ ಗಂಟೆಗಳ ಅನುಗುಣವಾಗಿ ಜನರಲ್ ಸರ್ವಿಸ್ ಮಾಡಲಾಗುತ್ತಿತ್ತು. ಆಗ 3 ರಿಂದ 5 ಸಾವಿರ ವರೆಗೆ ಖರ್ಚು ಮಾಡಬೇಕಾಗಿತ್ತು. ಸದ್ಯ ಅರ್ಧ ನೀರು ಹೊಕ್ಕರೆ ಸರಿಸುಮಾರು 20 ಸಾವಿರ ಹಾಗೆ ಪೂರ್ಣ ನೀರು ಹೊಕ್ಕರೆ 30 ಸಾವಿಕ್ಕೂ ಅಧಿಕ ದುಡ್ಡು ವೆಚ್ಚ ಮಾಡಬೇಕಿದೆ.

ಕ್ರೇನ್‌ಗೆ ಹೆಚ್ಚಿದ ಬೇಡಿಕೆ:
3 ಕೆವಿಯಿಂದ 1250 ಕೆವಿಯವರೆಗಿನ ಜನರೇಟರ್ ಬಳಕೆಯಾಗುತ್ತಿದ್ದು, 15 ಕೆವಿಗಿಂತ ಹೆಚ್ಚಿನ ಸಾಮರ್ಥ್ಯದ ಜನರೇಟರ್ ಭಾರವಾಗಿರುತ್ತದೆ. ೮೦೦ ಕೆಜಿಯಿಂದ 15 ಟನ್ ತೂಕದ ಗಾತ್ರದ ಜನರೇಟರ್ ರಿಪೇರಿಗಾಗಿ ಸ್ಥಳಾಂತರ ಮಾಡಬೇಕಾದ ಅನಿವಾರ‌್ಯತೆ ಬಂದಾಗ ಕ್ರೇನ್ ಬಳಕೆ ಅತ್ಯವಶ್ಯಕ. ಇದರಿಂದ ಕ್ರೇನ್‌ಗೂ ಹಣ ನೀಡಬೇಕು. ಇಷ್ಟಕ್ಕೂ ಕ್ರೇನ್ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ಅನಿವಾರ್ಯವಾಗಿ ಹೆಚ್ಚಿನ ದುಡ್ಡು ಹಾಗೂ ಸಮಯ ನೀಡಲೇಬೇಕು.

ಆಸ್ಪತ್ರೆಯಲ್ಲಿ ಬಳಸುವ ಜನರೇಟ್‌ಗಳ ರಿಪೇರಿಗೆ ಮೊದಲು ಆದ್ಯತೆ ನೀಡಲಾಗಿದ್ದು, ನಂತರ ಬ್ಯಾಂಕ್, ಕಂಪನಿಯ ಬೇಡಿಕೆಯ ಅನುಗುಣವಾಗಿ ಸರ್ವಿಸ್ ನೀಡಲಾಗುತ್ತಿದೆ. ಈಗಾಗಲೇ ಬೆಳಗಾವಿಯೊಂದರಲ್ಲೇ ಸುಮಾರು 60ಕ್ಕೂ ಅಧಿಕ ಜನರೇಟರ್‌ಗಳು ನೀರು ನುಗ್ಗಿ ರಿಪೇರಿಗೆ ಬಂದಿವೆ. ಹೆಚ್ಚು ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಕಂಪನಿ, ಸಂಸ್ಥೆಗಳಿಗೆ ಶೀಘ್ರ ಸೇವೆ ಒದಗಿಸಿ ಸರಿಪಡಿಸುವ ವ್ಯವಸ್ಥೆಗೆ ಹೆಚ್ಚುವರಿ ಕೆಲಸಗಾರರನ್ನು ತೆಗೆದುಕೊಂಡು ತುರ್ತು ಸೇವೆ ಒದಗಿಸುತ್ತಿದ್ದೇವೆ ಎಂದು ಗೋಕುಲ್ ಪವರ್ ಸರ್ವಿಸಿಸ್ ಮ್ಯಾನೇಜಿಂಗ್ ಪಾಟ್ನರ್ ಜಗನ್ನಾಥ ಕುಲಕರ್ಣಿ ತಿಳಿಸಿದರು.

-ಮಂಜುನಾಥ ಪ್ಯಾಟಿ ಬೆಳಗಾವಿ

Follow Us:
Download App:
  • android
  • ios