ಪ್ರವಾಹ ಪೀಡಿತ ಕೊಡಗಿನ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳು ಮತ್ತಿತರ ಅಗತ್ಯದ ವಸ್ತುಗಳನ್ನು ಈಗಾಗಲೇ ಸಹೃದಯರು ಕಳುಹಿಸಿಕೊಟ್ಟಿದ್ದಾರೆ. ಆದರೆ, ಇನ್ನೂ ಕೆಲ ಸಾಮಾಗ್ರಿಗಳು ತುರ್ತಾಗಿ ಬೇಕಾಗಿವೆ.

ನೆರೆ ಕಡಿಮೆಯಾಗುತ್ತಿದ್ದಂತೆ ಜನರು ತಮ್ಮ ತಮ್ಮ ಮನೆಗಳಿಗೆ ವಾಪಾಸು ಮರಳಬೇಕಾದರೆ ಮೊದಲು ಮನೆಗಳನ್ನು ಸ್ವಚ್ಛಗೊಳಿಸಬೇಕು. ಆ ನಿಟ್ಟಿನಲ್ಲಿ ಈ ಕೆಳಗೆ ಉಲ್ಲೇಖಿಸಿರುವ ಸಾಮಾಗ್ರಿಗಳು ತುರ್ತಾಗಿ ಬೇಕಾಗಿವೆ.

ನೆಲ/ಗೋಡೆ, ಪೀಠೋಪಕರಣಗಳನ್ನು ಉಜ್ಜಲು ಬೇಕಾಗಿರುವ 

  • ಬ್ಲೀಚಿಂಗ್ ಪೌಡರ್
  • ಸ್ಕ್ರಬ್ಬರ್ ಗಳು, ಬ್ರಷ್ಷ್‌ಗಳು
  • ಫಿನೈಲ್ 
  • ಕೈಗವಸು ಮತ್ತು ಮಾಸ್ಕ್ ಗಳು
  • ಬಕೆಟ್ಗಳು, ಪೊರಕೆ, ನೆಲವೊರಸುವ ಮಾಪ್ ಗಳು
  • ಡೆಟಾಲ್ ನಂತಹ ಸೋಂಕು ನಿವಾರಕ ಸಾಮಾಗ್ರಿಗಳು