Asianet Suvarna News Asianet Suvarna News

12ರಂದು ಕಣ್ಣೂರಿಗೆ, 14ರಂದು ಮಂಗಳೂರಿಗೆ ಭಾರತೀಯರ ಏರ್‌ಲಿಫ್ಟ್

ಮೇ 12ರಂದು ಕಣ್ಣೂರು ವಿಮಾನ ನಿಲ್ದಾಣ ಮತ್ತು ಮೇ 14ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಭಾರತೀಯರನ್ನು ಕರೆ ತರುವ ವಿಮಾನಗಳು ಆಗಮಿಸಲಿದೆ.

 

Flight to reach kannur on 12th and mangalore on 14th
Author
Bangalore, First Published May 9, 2020, 7:12 AM IST

ಮಂಗಳೂರು(ಮೇ.09): ಮೇ 12ರಂದು ಕಣ್ಣೂರು ವಿಮಾನ ನಿಲ್ದಾಣ ಮತ್ತು ಮೇ 14ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಭಾರತೀಯರನ್ನು ಕರೆ ತರುವ ವಿಮಾನಗಳು ಆಗಮಿಸಲಿದೆ.

ಕರಾವಳಿ ಭಾಗದ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಜತೆಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ ಎಂದು ಶಾಸಕ ಯು.ಟಿ ಖಾದರ್‌ ಹೇಳಿದರು.

ಹೆಚ್ಚುತ್ತಿರುವ ಕೊರೋನಾ: ಮದ್ಯದಂಗಡಿ ಮುಚ್ಚಲು ಕೋರ್ಟ್ ಆದೇಶ

ಗಲ್ಫ್‌ , ಮಸ್ಕತ್‌, ಕತಾರ್‌, ಸೌದಿ ಅರೆಬಿಯಾ, ಮಧ್ಯ ಪೂರ್ವ ದೇಶಗಳಲ್ಲಿ ಹೆಚ್ಚಿನ ಕರಾವಳಿಗರು ನೆಲೆಸಿದ್ದಾರೆ. ಅವರಲ್ಲಿ ಅಸೌಖ್ಯದಿಂದ ಇರುವ ಹಿರಿಯ ನಾಗರಿಕರು, ಗರ್ಭಿಣಿಯರು, ವೀಸಾ ಮುಗಿದವರು, ಪ್ರವಾಸಕ್ಕೆ ತೆರಳಿದವರು ಇದ್ದಾರೆ. ಅವರನ್ನು ತುರ್ತಾಗಿ ವಾಪಸ್‌ ಕರೆತರಲು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಶೇ. 40ಕ್ಕಿಂತ ಕಡಿಮೆ ಆಲ್ಕೋಹಾಲ್ ಇರುವ ಮದ್ಯ 'ಹಲಾಲ್'!

ಅವರ ಶ್ರಮದಿಂದ ಮಾ.14ರಂದು ಮಂಗಳೂರು ವಿಮಾನ ನಿಲ್ದಾಣಕ್ಕೂ ವಿಮಾನಗಳು ಬರಲಿವೆ. ಬರುವ ಮಂದಿಯನ್ನು ಎ, ಬಿ, ಸಿ ಕ್ಯಾಟಗರಿಯಡಿ ವಿಂಗಡಿಸಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ಮತ್ತು ಅಸೌಖ್ಯದಿಂದ ಇರುವವರಿಗೆ ಕೆಲ ಹೊಟೇಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅವರ ಇಚ್ಛೆಯಂತೆ ಉಳಿದುಕೊಳ್ಳಬಹುದು.  ಎನ್‌.ಜಿ.ಒ.ಗಳು ಸಹಕಾರ ನೀಡಲಿದ್ದು, ರಂಝಾನ್‌ ಉಪವಾಸ ಸಂದರ್ಭವೂ ಆಗಿರುವುದರಿಂದ ಜಿಲ್ಲಾಡಳಿತಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ.

ಭಾರತೀಯ ವಾಯುಸೇನೆ ವಿಮಾನ ಅಪಘಾತ, ಕೆಳಕ್ಕೆ ಜಿಗಿದ ಪೈಲೈಟ್ ರಕ್ಷಿಸಿದ ಗ್ರಾಮಸ್ಥರು!

ಕಣ್ಣೂರು ವಿಮಾನ ನಿಲ್ದಾಣಕ್ಕೆ ಬರುವ ಕರಾವಳಿಗರಿಗೆ ಜಿಲ್ಲಾಡಳಿತ ಬಸ್‌ ಕಳುಹಿಸಬೇಕಾಗಿದೆ ಎಂದರು. ಒಟ್ಟು 15,000 ವಿದೇಶಿಗರು ಕರ್ನಾಟಕಕ್ಕೆ ಆಗಮಿಸಲಿರುವಾಗ ಜಿಲ್ಲೆಯ 3 ರಿಂದ 4 ಸಾವಿರ ಮಂದಿ ಇರುವ ಸಾಧ್ಯತೆಗಳಿವೆ ಎಂದರು.

Follow Us:
Download App:
  • android
  • ios