ಭಾರತೀಯ ವಾಯುಸೇನೆ ವಿಮಾನ ಅಪಘಾತ, ಕೆಳಕ್ಕೆ ಜಿಗಿದ ಪೈಲೈಟ್ ರಕ್ಷಿಸಿದ ಗ್ರಾಮಸ್ಥರು!
ಫೈಟ್ ಜೆಟ್ ವಿಮಾನ ಪತನಗೊಂಡ ಕಾರಣ ಪೈಲೈಟ್ ಪ್ಯಾರಚ್ಯೂಟ್ ಮೂಲಕ ಕೆಳಕ್ಕೆ ಜಿಗಿದಿದ್ದಾರೆ. ಈ ವೇಳೆ ಸ್ಥಳೀಯರು ಪೈಲೆಟ್ ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸ್ಥಳೀಯರ ಕಾರ್ಯಕ್ಕೆ ಪಂಜಾಬ್ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂಜಾಬ್(ಮೇ.08): ಭಾರತೀಯ ವಾಯುಸೇನಾ A ಮಿಗ್-29 ಫೈಟರ್ ವಿಮಾನ ತಾಂತ್ರಿಕ ಕಾರಣದಿಂದ ಅಪಘಾತವಾಗಿದೆ. ಪಂಜಾಬ್‌ನ ಹೊಶಿಯಾರ್‌ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಂದು(ಮೇ.08) ಬೆಳಗ್ಗೆ ಹಾರಾಟ ಆರಂಭಿಸಿದ A ಮಿಗ್-29 ಫೈಟರ್ ವಿಮಾನ ತಾಂತ್ರಿಕ ಕಾರಣ ಪತನಗೊಂಡಿದೆ. ತಕ್ಷಣವೇ ಪ್ಯಾರಚ್ಯೂಟ್ ಮೂಲಕ ಹೊರಗಿಜಿದ ಪೈಲೆಟ್‌ನನ್ನು ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ. ಸ್ಥಳೀಯರ ಸಹಾಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶ್ಲಾಘಿಸಿದ್ದಾರೆ.
ನಿಸ್ವಾರ್ಥ ಸೇವೆಗೆ ಸೇನೆಯ ಸಲ್ಯೂಟ್, ಚಪ್ಪಾಳೆ ಮೂಲಕ ಧನ್ಯವಾದ ಹೇಳಿದ ಕೊರೋನಾ ವಾರಿಯರ್ಸ್!
ಹಾರಾಟ ಆರಂಭಿಸಿದ ಕೆಲ ಹೊತ್ತಲ್ಲೇ ಫೈಟ್ ಜೆಟರ್‌ನಲ್ಲಿ ತಾಂತ್ರಿಕ ಕಾರಣ ಕಾಣಿಸಿಕೊಂಡಿದೆ. ಹೀಗಾಗಿ ಪರಿಸ್ಥಿತಿ ಗಂಭೀರತೆ ಅರಿತ ಪೈಲೆಟ್ ಎಂ.ಕೆ .ಪಾಂಡೆ ಪ್ಯಾರಚ್ಯೂಟ್ ಮೂಲಕ ಹೊರಕ್ಕೆ ಜಿಗಿದಿದ್ದಾರೆ. ವಿಮಾನ ಪತನದ ಶಬ್ದಕ್ಕೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಪೈಲೈಟ್‌ಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನೀರು ನೀಡಿ ಆರೈಕೆ ಮಾಡಿದ್ದಾರೆ.
ತಕ್ಷಣವೇ ಸೇನಾ ಹೆಲಿಕಾಪ್ಟರ್ ಮೂಲಕ ಪೈಲೈಟ್ ಎಂ.ಕೆ.ಪಾಂಡೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಸೇನೆ ವಿಮಾನ ಪತನ ಕುರಿತು ತನಿಖೆಗೆ ಆದೇಶಿಸಿದೆ. ಇತ್ತೀಚೆಗೆ ಮಿಗ್ 21 ವಿಮಾನ ತಾಂತ್ರಿಕ ಕಾರಣಗಳಿಂದ ಪತನಗೊಂಡಿದೆ.
ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!.
ಘಟನೆ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಭಾರತೀಯ ವಾಯುಸೇನಾ A ಮಿಗ್-29 ಫೈಟರ್ ವಿಮಾನ ತಾಂತ್ರಿಕ ಕಾರಣದಿಂದ ಪತನಗೊಂಡಿದೆ. ಹೋಶಿಯಾರ್ ಜಿಲ್ಲೆ ಬಳಿ ಪತನಗೊಂಡಿದ್ದು, ಪೈಲೆಟ್ ಸುರಕ್ಷಿತವಾಗಿ ಕೆಳಕ್ಕೆ ಹಾರಿದ್ದಾರೆ. ಸ್ಥಳೀಯರು ಪ್ರಮಥ ಚಿಕಿತ್ಸೆ ನೀಡಿ ಆರೈಕೆ ಮಾಡಿರುವುದು ಶ್ಲಾಘನೀಯ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.