ಜೂ. 15ರಿಂದ ವಿಮಾನಯಾನ ಸೇವೆ ಆರಂಭ: ಬೆಂಗ್ಳೂರಿಂದ ಬೀದರ್‌ಗೆ ಬರೀ 50 ನಿಮಿಷ ಸಾಕು..!

*  ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚನೆ
*  ವಾರಕ್ಕೆ 4 ದಿನಗಳು ವಿಮಾನಯಾನ ಸೇವೆ ಲಭ್ಯ
*  ಬೆಂಗಳೂರಿನಿಂದ ಬೀದರ್‌ಗೆ ಕೇವಲ 50 ನಿಮಿಷಗಳ ಕಾಲಾವಧಿ 

Flight Service Will Be Starts from Bidar on June 15th grg

ಬೀದರ್‌(ಜೂ.11): ಜೂ.15ರಂದು ಜಿಲ್ಲೆಗೆ ನಾಗರಿಕ ವಿಮಾನಯಾನ ಸೇವೆ ಒದಗಿಸುತ್ತಿರುವ ಸ್ಟಾರ್‌ಏರ್‌ ವಿಮಾನ ಸೇವೆ ಆರಂಭದ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಟಾರ್‌ಏರ್‌ ನಾಗರಿಕ ವಿಮಾನಯಾನ ಸೇವೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಾಗಿನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸ್ಟಾರ್‌ ಏರ್‌ ವಿಮಾನ ಸೇವೆಯು ಕೇಂದ್ರ ಸರ್ಕಾರ ಉಡಾನ್‌ ಯೋಜನೆಯಡಿ ಒದಗಿಸುತ್ತದೆ. ಈ ಕಾರ್ಯಕ್ರಮ ಉದ್ಘಾಟನೆಯನ್ನು ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಲಿದ್ದು, ಜಿಲ್ಲೆಯ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮುತಾಲಿಕ್‌, ಆಂದೋಲಶ್ರೀ ಬಸವಕಲ್ಯಾಣ ಪ್ರವೇಶಕ್ಕೆ ತಡೆ

ಪ್ರಯಾಣಿಕರಿಗೆ ಕಾಣಿಕೆ:

ಬೀದರ್‌ ವಿಮಾನ ನಿಲ್ದಾಣದ ನಿರ್ದೇಶಕರಾದ ಅಮಿತ್‌ ಮಿಶ್ರಾ ಮಾತನಾಡಿ, ಜೂ. 15ರಂದು ಸ್ಟಾರ್‌ಏರ್‌ ಸೇವೆ ಬೀದರ್‌ ಜಿಲ್ಲೆಯಲ್ಲಿ ಆರಂಭಿಸುತ್ತಿದ್ದು, ಮಧ್ಯಾಹ್ನ 2.55ಕ್ಕೆ ಬೆಂಗಳೂರಿನಿಂದ ವಿಮಾನ ಹೊರಟು ಬೀದರ್‌ಗೆ 4.5ಕ್ಕೆ ಬಂದು ತಲುಪಲಿರುವ ಈ ಮೊದಲ ವಿಮಾನಕ್ಕೆ ವಾಟರ್‌ ಸೆಲ್ಯೂಟ್‌, ಲೈಟಿಂಗ್‌ ಲ್ಯಾಂಪ್‌, ರಿಬ್ಬನ್‌ ಕತ್ತರಿಸುವ ಮೂಲಕ ಸ್ವಾಗತಿಸಲಾಗುತ್ತದೆ. ವಿಮಾನದಿಂದ ಮೊದಲು ಬರುವ ಪ್ರಯಾಣಿಕರಿಗೆ ಬೋರ್ಡಿಂಗ್‌ ಪಾಸ್‌ ನೀಡುವುದರ ಜೊತೆಗೆ ಇತರೆ ಎಲ್ಲ ಪ್ರಯಾಣಿಕರಿಗೆ ಕಾಣಿಕೆ ನೀಡಲಾಗುತ್ತದೆ ಎಂದು ಹೇಳಿದರು.

ಸ್ಟಾರ್‌ ಏರ್‌ನ ಸೀನಿಯರ್‌ ಮ್ಯಾನೇಜರ್‌ ಕಿರಣ ಮಾತನಾಡಿ, ಸ್ಟಾರ್‌ಏರ್‌ ವಿಮಾನವು ಗೋದಾವತ್‌ ಎಂಟರ್‌ ಪ್ರೈಸೆಸ್‌ನ ಸಂಜಯ ಗೋದಾವತ್‌ ಮಾಲೀಕತ್ವದ ವಿಮಾನ ಸೇವೆಯಾಗಿದೆ. ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಲ್ಲಿ ಬೀದರ್‌ ಜಿಲ್ಲೆಗೆ ಸೇವೆ ಒದಗಿಸಲಿದೆ. ಸ್ಟಾರ್‌ ಏರ್‌ ವಿಮಾನವು ಜಟ್‌ ಎಂಜಿನ ಮೇಲೆ ಕೆಲಸ ನಿರ್ವಹಿಸುವುದರಿಂದ ಅತೀ ವೇಗದಲ್ಲಿ ಜನರಿಗೆ ಸೇವೆ ಒದಗಿಸುತ್ತದೆ ಎಂದಿದ್ದಾರೆ.

ಇಂಧನ ಇಲಾಖೆಯಿಂದ ಹೈಬ್ರಿಡ್‌ ಪಾರ್ಕ್ ನಿರ್ಮಾಣ: ಸಚಿವ ಸುನೀಲಕುಮಾರ

ವಾರದಲ್ಲಿ 4 ದಿನ ಪ್ರಯಾಣ:

ಇದು ಬೆಂಗಳೂರಿನಿಂದ ಬೀದರ್‌ಗೆ ಬಂದು ತಲುಪಲು ಕೇವಲ 50 ನಿಮಿಷಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ವಿಮಾನವು ಒಂದು ಬದಿಗೆ ಒಂದು ಸೀಟ್‌, ಇನ್ನೊಂದು ಬದಿಗೆ ಎರಡು ಸೀಟುಗಳನ್ನು ಹೊಂದಿದ್ದು, ಒಟ್ಟು 50 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಒಬ್ಬ ಪ್ರಯಾಣಿಕರಿಗೆ 2599 ರು. ಎಲ್ಲ ತೆರಿಗೆ ಸೇರಿದಂತೆ ಪ್ರಯಾಣ ವೆಚ್ಚವಾಗಲಿದೆ. ಈ ವಿಮಾನವು ವಾರದಲ್ಲಿ ನಾಲ್ಕು ದಿನ ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸೇವೆ ನೀಡಲಿದೆ. ಬೀದರ್‌ನಿಂದ ಬೆಂಗಳೂರಿಗೆ ಮೊದಲು ವಿಮಾನದ ಟಿಕೆಟ್‌ ಬುಕ್‌ ಮಾಡುವ ಪ್ರಯಾಣಿಕರಿಗೆ ಮುಖ್ಯ ಅತಿಥಿಗಳಿಂದ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದರು.

ಈ ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ನಮೀಮ್‌ ಮೋಯಿನ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios