ಇಂಧನ ಇಲಾಖೆಯಿಂದ ಹೈಬ್ರಿಡ್‌ ಪಾರ್ಕ್ ನಿರ್ಮಾಣ: ಸಚಿವ ಸುನೀಲಕುಮಾರ

*  ಸೌರ, ಪವನ ಶಕ್ತಿ ಹಾಗೂ ವಿದ್ಯುತ್‌ ಸಂಗ್ರಹಗಾರವುಳ್ಳ ಹೈಬ್ರಿಡ್‌ ಪಾರ್ಕ್ ನಿರ್ಮಾಣಕ್ಕೆ ಯೋಜನೆ
*  ಕಲಬುರಗಿಯಲ್ಲಿ ಸೋಲಾರ ಪಾರ್ಕ್ 2 ತಿಂಗಳಲ್ಲಿ ಟೆಂಡರ್‌
*  ತೋಟದ ಮನೆಗಳ ವಿದ್ಯುತ್‌ ಸಂಪರ್ಕಕ್ಕೆ 20 ಕೋಟಿ

Construction of Hybrid Park by Department of Energy Says Minister Sunil Kumar grg

ಬೀದರ್‌(ಜೂ.05):  ರಾಜ್ಯದ ವಿವಿಧೆಡೆ ಸೌರ, ಪವನ ಶಕ್ತಿ ಹಾಗೂ ಉತ್ಪಾದಿತ ವಿದ್ಯುತ್‌ ಸಂಗ್ರಹಿಸಿಡುವದಕ್ಕಾಗಿ ಹೈಬ್ರಿಡ್‌ ಪಾರ್ಕ್‌ಗಳ ನಿರ್ಮಾಣಕ್ಕೆ ಸರ್ಕಾರ ಯೋಜಿಸಿದ್ದು, ಎರಡು ತಿಂಗಳಲ್ಲಿ ಈ ಕುರಿತು ಸ್ಪಷ್ಟಚಿತ್ರಣ ಹೊರಬರಲಿದೆ ಎಂದು ಇಂಧನ ಸಚಿವ ವಿ.ಸುನೀಲಕುಮಾರ ತಿಳಿಸಿದರು.

ಅವರು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಹೈಬ್ರಿಡ್‌ ಪಾರ್ಕ್‌ಗಳ ಡಿಪಿಆರ್‌ ನಡೆಯುತ್ತಿದ್ದು ರಾಜ್ಯದ ಎಲ್ಲೆಲ್ಲಿ ಇವುಗಳನ್ನು ಸ್ಥಾಪಿಸಬಹುದು ಎಂಬ ವರದಿಯನ್ನಾಧರಿಸಿ ಎರಡು ತಿಂಗಳ ಒಳಗಾಗಿ ಸ್ಪಷ್ಟಚಿತ್ರಣ ಹೊರಹಾಕುತ್ತೇವೆ ಎಂದರು.

ಸೌರಶಕ್ತಿಯಿಂದ ಉತ್ಪಾದಿತ ವಿದ್ಯುತ್‌ಶಕ್ತಿಯನ್ನು ಆಗಿಂದಾಗ್ಗೆ ಬಳಸಬೇಕಿರುವದು ಇಂದಿನ ಅನಿವಾರ್ಯತೆ. ಆದರೆ ಹೈಬ್ರಿಡ್‌ ಪಾರ್ಕ್‌ಗಳ ನಿರ್ಮಾಣವಾದಲ್ಲಿ ಅಲ್ಲಿ ಉತ್ಪಾದಿತ ವಿದ್ಯುತ್ತನ್ನು ಸಂಗ್ರಹಿಸಿಟ್ಟು ಅಗತ್ಯಕ್ಕೆ ತಕ್ಕಂತೆ ಬಳಸಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಜೂನ್ 30ರೊಳಗೆ ಕರ್ನಾಟಕದಲ್ಲಿ 1000 ರಿಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ರಾಜ್ಯದ ಇಂಧನ ಖಾತೆಯ ಜವಾಬ್ದಾರಿ ತೆಗೆದುಕೊಂಡ ನಂತರ ಹೊಸ ಹೊಸ ನೀತಿಗಳನ್ನು ಜಾರಿಗೆ ತರುವ ಮೂಲಕ ಗುಣಾತ್ಮಕ ಬದಲಾವಣೆ ತರಲಾಗಿದೆ. ವಿದ್ಯುತ್‌ ಇಲಾಖೆ ಅಭಿವೃದ್ಧಿಗೊಳಿಸಿ ಜನಸ್ನೇಹಿ ಇಲಾಖೆಯನ್ನಾಗಿಸಲು ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಇಲಾಖೆ ಸಚಿವನಾದ ದಿನದಿಂದ 100 ದಿನದ ಅವಧಿಯಲ್ಲಿ ವಿದ್ಯುತ್‌ ಸಂಪರ್ಕ ರಹಿತ ಮನೆಗಳಿಗೆ ಸಂಪರ್ಕ ನೀಡಲು ಬೆಳಕು ಎಂಬ ಯೋಜನೆ ಜಾರಿಗೆ ತರಲಾಗಿದೆ. ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ಗಳು, ಅವುಗಳ ದುರುಸ್ತಿ ಕೇಂದ್ರಗಳನ್ನು ಆರಂಭಿಸಿ ಸುಟ್ಟ ಟಿಸಿಗಳನ್ನು 24 ಗಂಟೆಯಲ್ಲಿ ಬದಲಾವಣೆ ಮಾಡಲು ಆದೇಶಿಸಿದ್ದೇನೆ, 24 ಗಂಟೆಯಲ್ಲಿ ರಿಪೇರಿ ಆಗದಿದ್ದಲ್ಲಿ 48 ಗಂಟೆಗಳಲ್ಲಿ ಬದಲಾಯಿಸುವ ಕಾರ್ಯ ನಡೆಯುತ್ತಿದೆ ಎಂದರು.

ತೋಟದ ಮನೆಗಳ ವಿದ್ಯುತ್‌ ಸಂಪರ್ಕಕ್ಕೆ 20 ಕೋಟಿ:

ರಾಜ್ಯದಲ್ಲಿ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಬೇಕು ಎಂಬ ಬೇಡಿಕೆಯನ್ವಯ ತೋಟಗಳಲ್ಲಿನ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕೊಡಲು ಯೋಜನೆ ಹಾಕಿಕೊಂಡು 20 ಕೋಟಿ ಮೀಸಲಿಡಲಾಗಿದೆ ಎಂದು ಸಚಿವ ವಿ.ಸುನೀಲಕುಮಾರ ತಿಳಿಸಿದರು.

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ Minister Sunil Kumar

ಬೀದರ್‌ ಜಿಲ್ಲೆಯಲ್ಲಿ ಜೆಸ್ಕಾಂ ಅಡಿಯಲ್ಲಿ ಸುಮಾರು 9 ಕಡೆಗಳಲ್ಲಿ 33ಕೆವಿ ಸ್ಟೇಷನ್‌ ನಿರ್ಮಾಣದ ಯೋಜನೆ ಇದ್ದು ಔರಾದ್‌ನ ಸಂತಪೂರದಲ್ಲಿ 220ಕೆವಿ, ಮನ್ನಳ್ಳಿಯಲ್ಲಿ 110ಕೆವಿ ಸ್ಟೇಷನ್‌ಗಾಗಿ ಪ್ರಸ್ತಾವನೆ ಬಂದಿದೆ. ಹೀಗೆ ಜೆಸ್ಕಾಂ ವ್ಯಾಪ್ತಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಕಲಬುರಗಿಯಲ್ಲಿ ಸೋಲಾರ ಪಾರ್ಕ್ 2 ತಿಂಗಳಲ್ಲಿ ಟೆಂಡರ್‌:

ಕಲಬುರಗಿಯಲ್ಲಿ ಸುಮಾರು 500 ಎಕರೆ ಜಾಗದಲ್ಲಿ ಸೋಲಾರ್‌ ಪಾರ್ಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, 2 ತಿಂಗಳಲ್ಲಿ ಡಿಪಿಆರ್‌ ಮಾಡುವ ಮೂಲಕ ಟೆಂಡರ್‌ ಮಾಡಲಾಗುವುದು ಎಂದು ಸಚಿವ ವಿ. ಸುನೀಲಕುಮಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಯಕುಮಾರ ಕಾಂಗೆ, ಅಶೋಕ ಹೊಕ್ರಾಣೆ, ಬಸವರಾಜ ಆರ್ಯ, ಶಿವಪುತ್ರ ವೈದ್ಯ, ಬಾಬುರಾವ ಕಾರಬಾರಿ, ಗುರುನಾಥ ಜ್ಯಾಂತಿಕರ, ಸæೂೕಮನಾಥ ಪಾಟೀಲ್‌ ಮತ್ತಿತರರು ಇದ್ದರು.
 

Latest Videos
Follow Us:
Download App:
  • android
  • ios