ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ 2ರಲ್ಲಿ ಡಿಸೆಂಬರ್‌ನಿಂದ ಪ್ರಯಾಣಿಕ ವಿಮಾನ ಸೇವೆ ಪ್ರಾರಂಭವಾಗಲಿದೆ. ಮೊದಲು ದೇಶೀ ವಿಮಾನಗಳು ಹಾರಾಟ ನಡೆಸಲಿದ್ದು, ಜನವರಿಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಲಿದೆ. 

ಬೆಂಗಳೂರು (ನ.13): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ 2ರಲ್ಲಿ ಡಿಸೆಂಬರ್‌ನಿಂದ ಪ್ರಯಾಣಿಕ ವಿಮಾನ ಸೇವೆ ಪ್ರಾರಂಭವಾಗಲಿದೆ. ಮೊದಲು ದೇಶೀ ವಿಮಾನಗಳು ಹಾರಾಟ ನಡೆಸಲಿದ್ದು, ಜನವರಿಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಲಿದೆ. ಪ್ರಯಾಣಿಕ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌-1ರ ಪಕ್ಕದಲ್ಲಿಯೇ ನಿರ್ಮಿಸಿರುವ ಎರಡನೇ ಟರ್ಮಿನಲನ್ನು ಶುಕ್ರವಾರ ಪ್ರಧಾನಿ ಮೋದಿ ಉದ್ಘಾಟಿಸಿದ್ದರು. 

ಈ ನೂತನ ಟರ್ಮಿನಲ್‌ನಲ್ಲಿ ಅಧಿಕೃತವಾಗಿ ಡಿಸೆಂಬರ್‌ ಮೊದಲ ವಾರದಿಂದ ವಿಮಾನ ಸೇವೆ ಆರಂಭಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್‌) ನಿರ್ಧರಿಸಿದೆ. ಹಳೆಯ ಟರ್ಮಿನಲ್‌ನಂತೆಯೇ ದೇಶೀ (ಡೊಮೆಸ್ಟಿಕ್‌), ಅಂತಾರಾಷ್ಟ್ರೀಯ ವಿಮಾನ (ಇಂಟರ್‌ನ್ಯಾಷನಲ್‌) ಸೇವೆ ಎರಡು ಕೂಡಾ ಲಭ್ಯವಿರಲಿವೆ. ಮೊದಲ ಹಂತದಲ್ಲಿ ದೇಶೀ ವಿಮಾನ ಸಂಚಾರ ಸೇವೆ, ಆನಂತರ ದಿನಗಳಲ್ಲಿ ಅಗತ್ಯತೆ ನೋಡಿಕೊಂಡು ಜನವರಿಯಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಸೇವೆ ಪ್ರಾರಂಭಿಸಲು ಬಿಐಎಎಲ್‌ ಮುಂದಾಗಿದೆ.

ನಾನು ವಿಪಕ್ಷ ನಾಯಕ, ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿಲ್ಲ: ಸಿದ್ದು

76 ದೇಶೀ ಮತ್ತು 25 ವಿದೇಶಿ ನಿಲ್ದಾಣಕ್ಕೆ ಸಂಪರ್ಕ: ದೇಶದಲ್ಲಿ 3ನೇ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ಹೊಂದಿರುವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೋನಾ ಪೂರ್ವದಲ್ಲಿ ವಾರ್ಷಿಕ 3.3 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದರು. ಇಲ್ಲಿಂದ ದೇಶದ 76 ವಿಮಾನ ನಿಲ್ದಾಣಗಳಿಗೆ, 25 ವಿದೇಶ ವಿಮಾನ ನಿಲ್ದಾಣಗಳಿಗೆ ನೇರ ವಿಮಾನ ಸೇವೆ ಲಭ್ಯವಿದೆ. 28 ಫ್ರಾಂಚೈಸಿಗಳು ವಿಮಾನ ಸೇವೆ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುವ ಉದ್ದೇಶದಿಂದ ನೂತನ ಟರ್ಮಿನಲ್‌ ನಿರ್ಮಿಸಿದ್ದು, ಸದ್ಯದ ಟರ್ಮಿನಲ್‌ 1ಕ್ಕೆ ಹೋಲಿಸಿದರೆ ಟರ್ಮಿನಲ್‌-2 ಹೆಚ್ಚಿನ ವಿಸ್ತೀರ್ಣ ಮತ್ತು ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ನಿಲ್ದಾಣ ವಿಸ್ತರಣೆಯಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಾಂಚೈಸಿಗಳು ಸೇವೆ ನೀಡಲು ಮುಂದೆ ಬಂದು ಮತ್ತಷ್ಟುವಿದೇಶಿ ಸ್ಥಳಗಳಿಗೆ ವಿಮಾನ ಸೇವೆ ಹೆಚ್ಚಳವಾಗಲಿವೆ ಎಂದು ಬಿಐಎಎಲ್‌ ಮಾಹಿತಿ ನೀಡಿದೆ.

ಉರುಳಿಗೆ ಸಿಲುಕಿ ಹೆಣ್ಣು ಹುಲಿ ಸಾವು: ಕೊಳೆತ ಸ್ಥಿತಿಯಲ್ಲಿ ಕಳೇಬರ ಪತ್ತೆ

ಕಳೆದ 14 ವರ್ಷಗಳಿಂದ ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದ ಹೆಬ್ಬಾಗಿಲಾಗಿ ವಿಕಾಸಗೊಂಡಿದೆ. ಟರ್ಮಿನಲ್‌ 2 ಆರಂಭದ ಬಳಿಕ ಹೆಚ್ಚು ವಿಮಾನ ಸೇವೆ ಲಭ್ಯವಾಗಿ ಭಾರತದ ಹೊಸ ಹೆಬ್ಬಾಗಿಲಾಗಿ ವಿಮಾನ ನಿಲ್ದಾಣವನ್ನು ರೂಪಿಸುವ ಗುರಿ ಹೊಂದಿದ್ದೇವೆ.
-ಹರಿ ಮರಾರ್‌, ವ್ಯವಸ್ಥಾಪಕ ನಿರ್ದೇಶಕ ಬಿಐಎಎಲ್‌