Asianet Suvarna News Asianet Suvarna News

ಉರುಳಿಗೆ ಸಿಲುಕಿ ಹೆಣ್ಣು ಹುಲಿ ಸಾವು: ಕೊಳೆತ ಸ್ಥಿತಿಯಲ್ಲಿ ಕಳೇಬರ ಪತ್ತೆ

ಉರುಳಿಗೆ ಸಿಲುಕಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಸಮೀಪದ ಜಮೀನು ಒಂದರಲ್ಲಿ ನಡೆದಿದೆ. 

Tiger Found Dead at Antharasanthe in HD Kote gvd
Author
First Published Nov 13, 2022, 10:26 AM IST

ಎಚ್.ಡಿ.ಕೋಟೆ (ನ.13): ಉರುಳಿಗೆ ಸಿಲುಕಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಸಮೀಪದ ಜಮೀನು ಒಂದರಲ್ಲಿ ನಡೆದಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ತಾರಕ ಸಮೀಪ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 12-13 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆಯಾಗಿದೆ. 

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಜಮೀನಿನಲ್ಲಿ ಕಾಡು ಹಂದಿಗಾಗಿ ಹಾಕಿದ್ದ ಉರುಳಿಗೆ ಸಿಲುಕಿದ್ದ ಹುಲಿ ಸಾವನ್ನಪ್ಪಿರುವುದ ಬೆಳಕಿಗೆ ಬಂದಿದೆ. ಅಲ್ಲದೇ ಹುಲಿಗೆ ಮೂರು ಮರಿಗಳು ಸಹ ಇದ್ದು, ಸದ್ಯ ಮರಿಗಳ ರಕ್ಷಣೆಯ ದೃಷ್ಟಿಯಿಂದ ಮರಿಗಳ ಹುಡುಕಾಟದಲ್ಲಿ ಅರಣ್ಯ ಇಲಾಖೆ ತೊಡಗಿದೆ. ಸದ್ಯ ಈಗಾಗಲೇ ಕೊಂಬಿಂಗ್ ಕಾರ್ಯಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಸುತ್ತಲು ಕ್ಯಾಮೆರಾ ಟ್ರಾಪ್‌ಗಳನ್ನು ಅಳವಡಿಸಿದ್ದಾರೆ ಹುಡುಕಾಟ ಆರಂಭಿಸಿದ್ದಾರೆ.

ತಾಯಿ ಇದ್ದರೂ ದೂರಾದ ಹುಲಿ ಮರಿಯನ್ನು ಆರೈಕೆ ಮಾಡಿದ್ದೇ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಿಬ್ಬಂದಿ!

ಕೆಆರ್‌ಎಸ್‌ ಬಳಿ ಚಿರತೆ ಮತ್ತೆ ಪ್ರತ್ಯಕ್ಷ: ವಿಶ್ವವಿಖ್ಯಾತ ಪ್ರವಾಸಿ ತಾಣ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷಗೊಂಡು ಸಿಬ್ಬಂದಿ ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಪ್ರವಾಸಿಗರಿಗೆ ಬೃಂದಾವನ ಗಾರ್ಡನ್‌ ವೀಕ್ಷಣೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇಡೀ ಬೃಂದಾವನ ಹಾಗೂ ಅಣೆಕಟ್ಟೆಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಕಳೆದ ನ.4ರಂದು ಕೆ.ಆರ್‌.ನಗರದಲ್ಲಿ ಚಿರತೆ ಕಾಣಿಸಿಕೊಂಡು ಹಲವರ ಮೇಲೆ ದಾಳಿ ಮಾಡಿದ ಪ್ರಕರಣ ಮಾಸುವ ಮುನ್ನವೇ ಕೆಆರ್‌ಎಸ್‌ನಲ್ಲಿಯೂ ಮೀನುಗಾರಿಕೆ ಇಲಾಖೆ ಬಳಿ ಚಿರತೆ ಕಾಣಿಸಿಕೊಂಡಿದೆ. 

ಕಣ್ಣೆದುರೆ ಚಿರತೆಯನ್ನು ನೋಡಿದ ಸಿಬ್ಬಂದಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಭಾನುವಾರ ಮಧ್ಯರಾತ್ರಿ ಸುಮಾರು 12.30ರ ವೇಳೆ ಕೆಆರ್‌ಎಸ್‌ ಬೃಂದಾವನಕ್ಕೆ ತೆರಳುವ ಚೆಕ್‌ ಪೋಸ್ಟ್‌ ಬಳಿ ಚಿರತೆ ಹಾದು ಹೋಗುತ್ತಿದ್ದು, ಹತ್ತಾರು ನಾಯಿಗಳು ಸೇರಿ ಚಿರತೆಯನ್ನು ಓಡಾಡಿಸುತ್ತಿರುವ ದೃಶ್ಯ ಹೆದ್ದಾರಿ ಹೋಟೆಲ್‌ಗಳ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು ಸಾರ್ವಜನಿಕರಲ್ಲೂ ಸಹ ಭಯದ ವಾತಾವರಣ ಸೃಷ್ಟಿಮಾಡಿದೆ. ಕಳೆದ 20 ದಿನಗಳ ಅಂತರದಲ್ಲಿ ಸುಮಾರು ಐದಾರು ಬಾರಿ ಕಾಣಿಸಿಕೊಂಡಿರುವ ಚಿರತೆ ಅಧಿಕಾರಿಗಳ ನಿದ್ದೆಗೆಡಿಸಿದೆ. 

Shivamogga: ತ್ಯಾವರೆಕೊಪ್ಪದ ಸಫಾರಿಯ ದೀರ್ಘಾಯುಷಿ ಹಿರಿಯ ಹುಲಿ ‘ಹನುಮ’ ಸಾವು

ಅ.21ರಂದು ಹಾಡಹಗಲೇ ಸಿಬ್ಬಂದಿಗೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚಿರತೆ ನಂತರ ಶ್ರೀರಂಗಪಟ್ಟಣದ ಅರಣ್ಯ ಇಲಾಖೆ ಸಿಬ್ಬಂದಿ ರಾಯಲ್ ಆರ್ಕಿಡ್‌ ಹೋಟೆಲ್ ಬಳಿ ಬೋನ್‌ ಇರಿಸಿ ಕ್ಯೂಬಿಂಗ್‌ ಕೂಡ ನಡೆಸಿದ್ದರು. ಆದರೆ, ನಂತರ ಅತ್ತ ಚಿರತೆ ಸುಳಿಯಲಿಲ್ಲ. ಮತ್ತೆ ಅ.27ರಂದು ನಾಥ್‌ರ್‍ಗೇಟ್‌ ಬಳಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿ ಸಂತೋಷ್‌ ಅವರ ಕಣ್ಣಿಗೆ ಬಿದ್ದಿದ್ದ ಚಿರತೆ ನಂತರ ಅಧಿಕಾರಿಗಳು ಮತ್ತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿ ಸ್ಥಳಕ್ಕೆ ಬಂದ ಪಾಂಡವಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಅದೇ ಸ್ಥಳದಲ್ಲಿ ರಾತ್ರಿ 10ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿತ್ತು. ನಂತರ ಅಲ್ಲಿಂದ ಚಿರತೆ ಕಾಲ್ಕಿತ್ತಿತ್ತು.

Follow Us:
Download App:
  • android
  • ios