Lok Sabha Election 2024: ಚುನಾವಣಾ ನೀತಿ ಸಂಹಿತೆ ಜಾರಿ, ಫ್ಲೆಕ್ಸ್‌ಗಳ ತೆರವು!

ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುತ್ತಿದ್ದಂತೆಯೇ ನಗರ ಸೇರಿದಂತೆ ಎಲ್ಲೆಡೆ ಅಳವಡಿಸಲಾಗಿದ್ದ ಸರ್ಕಾರಿ ಹಾಗೂ ನಾನಾ ಪಕ್ಷಗಳ ಜಾಹೀರಾತು ಬಿಂಬಿಸುವ ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ನಗರದ ಹೆದ್ದಾರಿ, ಕಂದಾಯ ಭವನದ ಮುಂಭಾಗ ಸೇರಿದಂತೆ ಪ್ರಮುಖ ವೃತ್ತ ಸೇರಿದಂತೆ ವಿವಿಧೆಡೆ ಇದ್ದ ಬ್ಯಾನರ್ , ಗೋಡೆ ಬರಹಗಳನ್ನು ತೆರವುಗೊಳಿಸಲಾಗುತ್ತಿದೆ.

Flexes Clearance For Lok Sabha Election Code of Conduct in Ramanagara grg

ರಾಮನಗರ(ಮಾ.17): ಲೋಕಸಭಾ ಚುನಾವಣಾ ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿರುವುದರಿಂದ ನಗರದೊಳಗೆ ತಲೆಎತ್ತಿದ್ದ ರಾಜಕೀಯ ನಾಯಕರ ಫ್ಲೆಕ್ಸ್ ಗಳು, ಕಟೌಟ್ ಹಾಗೂ ಗೋಡೆ ಬರಹಳನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ.

ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುತ್ತಿದ್ದಂತೆಯೇ ನಗರ ಸೇರಿದಂತೆ ಎಲ್ಲೆಡೆ ಅಳವಡಿಸಲಾಗಿದ್ದ ಸರ್ಕಾರಿ ಹಾಗೂ ನಾನಾ ಪಕ್ಷಗಳ ಜಾಹೀರಾತು ಬಿಂಬಿಸುವ ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ನಗರದ ಹೆದ್ದಾರಿ, ಕಂದಾಯ ಭವನದ ಮುಂಭಾಗ ಸೇರಿದಂತೆ ಪ್ರಮುಖ ವೃತ್ತ ಸೇರಿದಂತೆ ವಿವಿಧೆಡೆ ಇದ್ದ ಬ್ಯಾನರ್ , ಗೋಡೆ ಬರಹಗಳನ್ನು ತೆರವುಗೊಳಿಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ: ಹ್ಯಾಟ್ರಿಕ್ ಸಂಸದ ಡಿ.ಕೆ.ಸುರೇಶ್ 4ನೇ ಬಾರಿ ಸ್ಪರ್ಧೆ..!

ಸ್ಥಳೀಯ ಸಂಸ್ಥೆಗಳು ತಮ್ಮ ಕಚೇರಿ ಆವರಣದಲ್ಲಿರುವ ಜಾಹಿರಾತುಗಳನ್ನು ತೆರವು ಮಾಡಲಾಗುತ್ತಿದೆ. ರಸ್ತೆ ಬದಿ, ರಸ್ತೆ ವಿಭಜಕದ ಮಧ್ಯೆ ಜಾಹೀರಾತು ಲಕಗಳು, ವಿದ್ಯುತ್ ಕಂಬಗಳು, ಸರ್ಕಲ್‌ಗಳಲ್ಲಿದ್ದ ಕಂಬಗಳು, ಜಾಹೀರಾತು ಫಲಕಗಳು ಸೇರಿದಂತೆ ಅನೇಕ ಕಡೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಭಾವಚಿತ್ರವಿರುವ ಫ್ಲೆಕ್ಸ್ ಗಳು, ಕಟೌಟ್ ಗಳನ್ನು ನಿಲ್ಲಿಸುವುದರ ಜೊತೆಗೆ ಗೋಡೆ ಬರಹಗಳನ್ನು ಬರೆಯಲಾಗಿತ್ತು. ಅಧಿಕೃತ ಮತ್ತು ಅನಧಿಕೃತವಾಗಿ ಅಳವಡಿಸಿದ್ದ ಅವೆಲ್ಲವನ್ನು ತೆರವುಗೊಳಿಸಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.

ಎರಡು-ಮೂರು ತಿಂಗಳಾಗಿದ್ದರೂ ಅನೇಕ ರಾಜಕೀಯ ನಾಯಕರ ಫ್ಲೆಕ್ಸ್ ಗಳನ್ನು ತೆರವುಗೊಳಿಸಿರಲಿಲ್ಲ. ಕೆಲವರು ಪ್ರಭಾವ ಬಳಸಿ ಫ್ಲೆಕ್ಸ್ ಗಳನ್ನು ಉಳಿಸಿಕೊಂಡಿದ್ದರು. ಫ್ಲೆಕ್ಸ್ ಗಳ ಹಾವಳಿಯಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗಿತ್ತು. ಇವುಗಳನ್ನು ತೆರವುಗೊಳಿಸುವುದಕ್ಕೂ ಜಿಲ್ಲಾಡಳಿತ ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಇದೀಗ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಫ್ಲೆಕ್ಸ್ ಗಳ ತೆರವಿಗೆ ಚುರುಕು ನೀಡಿದೆ.

Latest Videos
Follow Us:
Download App:
  • android
  • ios