*   ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮಗು ಸಾವು*   ಮಾನ್ವಿ ಪಟ್ಟಣದಲ್ಲಿ ಡೆಂಗ್ಯೂ ಜ್ವರದಿಂದ ‌ಅನೇಕ ಮಕ್ಕಳು ನರಳಾಟ*   ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಗು ಸಾವು 

ರಾಯಚೂರು(ಸೆ.20): ಜಿಲ್ಲೆಯ ಮಾನ್ವಿಯಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿಯಾಗಿದೆ. ಉಮ್ಮೇ ಕುಲ್ಸುಮ್ ಎಂಬ ಐದು ವರ್ಷದ ಹೆಣ್ಣು ಮಗು ಡೆಂಗ್ಯೂ ಜ್ವರದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. 

ಮಾನ್ವಿ ಪಟ್ಟಣದ ನಿವಾಸಿ ಸೈಯಾದ್ ಎಂಬುವರ ಮಗುವಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಇಂದು ಸಾವನ್ನಪ್ಪಿದೆ. 

ಸಿಂಧನೂರು: ಡೆಂಗ್ಯೂ ಜ್ವರಕ್ಕೆ 6 ವರ್ಷದ ಬಾಲಕಿ ಬಲಿ

ಇನ್ನು ಮಾನ್ವಿ ಪಟ್ಟಣದಲ್ಲಿ ಡೆಂಗ್ಯೂ ಜ್ವರದಿಂದ ‌ಅನೇಕ ಮಕ್ಕಳು ನರಳಾಡುತ್ತಿದ್ದಾರೆ. ಮಾನ್ವಿ ತಾಲೂಕಾ ಆಸ್ಪತ್ರೆ ಹಾಗೂ ರಾಯಚೂರು ನಗರದ ಆಸ್ಪತ್ರೆಗಳೆಲ್ಲ ಫುಲ್ ಆಗಿವೆ. ಚಿಕಿತ್ಸೆಗೆಂದು ಮಕ್ಕಳನ್ನು ‌ಆಸ್ಪತ್ರೆಗೆ ಕರೆದುಕೊಂಡು ಬಂದು ಪೋಷಕರು ಪರದಾಡುತ್ತಿದ್ದಾರೆ. ಮೃತ ಮಗುವಿಗೆ ಮಾನ್ವಿ, ರಾಯಚೂರು ಹಾಗೂ ಹೈದ್ರಾಬಾದ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ನಿನ್ನೆಯಷ್ಟೇ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿಯೂ ಕೂಡ ಓರ್ವ ಬಾಲಕಿ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದಳು.