ಮೊಳಕಾಲ್ಮುರು(ಡಿ.28): ಸರ್ಕಾರಿ ಬಸ್‌ ಮತ್ತು ಕ್ರೂಸರ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುಡಿಮೆ ಅರಸಿ ಹೊರಟಿದ್ದ ರಾಯಚೂರು ಮೂಲದ 22 ಕೂಲಿ ಕಾರ್ಮಿಕರ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟು, 17 ಮಂದಿ ಗಾಯಗೊಂಡಿರುವ ಧಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿನ ಜಾವ ಜರುಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೊಸೂರು ಗ್ರಾಮದ ತಿಮ್ಮಣ್ಣ (40), ರತ್ನಮ್ಮ (38), ಸೋಮನಮರಡಿ ಗ್ರಾಮದ ದುರುಗಪ್ಪ (15), ಗಣಬೇರಿ ಗ್ರಾಮದ ಮಹೇಶ (19), ಗಾಣದಾಳ್‌ ಅಮರೇಷ (50)ಮೃತರು. ಇವರೊಂದಿಗಿದ್ದ 17 ಜನ ಗಂಭೀರವಾಗಿ ಗಾಯಗೊಂಡಿದ್ದು, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಪೈಕಿ 3 ಜನರ ಸ್ಥಿತಿ ತೀವ್ರ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ತಡೆಗೋಡೆಗೆ ಕಾರು ಡಿಕ್ಕಿ: ಮೂರು ತಿಂಗಳ ಮಗು ಸೇರಿ ಇಬ್ಬರ ದುರ್ಮರಣ

ಕ್ರೂಸರ್‌ನಲ್ಲಿದ್ದವರೆಲ್ಲರೂ ಬಡ ಕೂಲಿ ಕಾರ್ಮಿಕರೇ ಆಗಿದ್ದು, ಬೆಂಗಳೂರಿನಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ ಮೊದಲ ಹಂತದ ಹಂತದ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿ ಒಂದೆರಡು ದಿನ ಕುಟುಂಬದ ಜೊತೆ ಕಾಲ ಕಳೆದು ವಾಪಸ್‌ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಬಿ.ಜಿ.ಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖಾಮುಖಿ ಅಪಘಾತ ಸಂಭವಿಸಿದೆ.