'ಬಡವರ ಅನ್ನ, ಭೂಮಿ ಕಿತ್ತ ಖುಷಿಗೆ ವೇದಿಕೆಯಲ್ಲೇ ಡಾನ್ಸ್‌ ಮಾಡಿದ್ರಾ ಸಚಿವ್ರೇ?..' ಮಂಕಾಳು ವೈದ್ಯ ಡಾನ್ಸ್‌ಗೆ ಜನರ ಆಕ್ರೋಶ

ಒಂದೆಡೆ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅವರ ಸ್ವಕ್ಷೇತ್ರ ಭಟ್ಕಳದಲ್ಲಿ ಮರಳು ಸಮಸ್ಯೆ ತ್ರೀವವಾಗಿ ಬಾಧಿಸುತ್ತಿದೆ. ಗುತ್ತಿಗೆದಾರರು ಹಾಗೂ ಕಾರ್ಮಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಬಡವರ ಭೂಮಿ ಮೇಲೆ ವಕ್ಫ್‌ ಹಾಗೂ ಬಡವರ ಅನ್ನದ ಮೇಲೆ ಸರ್ಕಾರ ಕಣ್ಣು ಹಾಕಿದೆ. ಇದ್ಯಾವುದೂ ತಮಗೆ ಸಂಬಂಧ ಇಲ್ಲ ಎನ್ನುವಂತೆ ಸಚಿವ ಮಂಕಾಳು ವೈದ್ಯ ಮಾಡಿರುವ ಡಾನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

fisheries minister mankal vaidya Viral Dance in Murdeshwar Mathsyamela san

ಭಟ್ಕಳ (ನ.22): ಬಡವರ ಭೂಮಿಯ ಮೇಲೆ ವಕ್ಫ್‌ ಕಣ್ಣು, ಬಡವರ ಅನ್ನದ ಮೇಲೆ ಸರ್ಕಾರದ ಕಣ್ಣಿನಿಂದ ರಾಜ್ಯದ ರೈತರು ಬಡವರು ಕಣ್ಣೀರಿಡುತ್ತಿದ್ದರೆ ಇನ್ನೊಂದೆಡೆ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹಾಗೂ ಇತರ ಕಾಂಗ್ರೆಸ್‌ ಮುಖಂಡರು ಮುರುಡೇಶ್ವರದಲ್ಲಿ ನಡೆಯುತ್ತಿರುವ ಮತ್ಸ್ಯಮೇಳ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಯೇ ಭರ್ಜರಿ ಡಾನ್ಸ್‌ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. 'ಬಡವರ ಅನ್ನ, ಭೂಮಿ ಕಿತ್ತ ಖುಷಿಗೆ ವೇದಿಕೆಯಲ್ಲೇ ಡಾನ್ಸ್‌ ಮಾಡಿದ್ರಾ ಸಚಿವ್ರೇ?..'ಎಂದು ಸ್ಥಳೀಯ ಜನರು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ನ ಸಚಿವ, ಶಿರಸಿ ಶಾಸಕ ಭೀಮಣ್ಣ ನಾಯ್ಕ್‌, ಕಾರವಾರ ಶಾಸಕ ಸತೀಸ್‌ ಸೈಲ್‌ ಹಾಗೂ ಬೆಂಬಲಿಗರು ವೇದಿಕೆಯ ಮೇಲೆ ಡಾನ್ಸ್‌ ಮಾಡಿದ್ದಾರೆ. ಹೆಣ್ಣುಮಕ್ಕಳು, ಮಹಿಳೆಯರು, ಹುಡುಗರೆನ್ನದೆ ಎಲ್ಲರೂ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.

ಮುರುಡೇಶ್ವರದಲ್ಲಿ ನಡೆಯುತ್ತಿರೋ ಮತ್ಸ್ಯ ಮೇಳ ನಡುವೆ ಕಾಂಗ್ರೆಸ್ ಮುಖಂಡರ ಡ್ಯಾನ್ಸ್ ವಿಡಿಯೋಗೆ ಸ್ಥಳೀಯ ಜನರು ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ವಿಶ್ವ ಮೀನುಗಾರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಮತ್ಸ್ಯ ಮೇಳ ನಡೆಯುತ್ತಿದೆ. ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ನೇತೃತ್ವದಲ್ಲಿ ಸುಮಾರು 5-6 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಳ ನಡೆಯುತ್ತಿದೆ. ಮೇಳದ ಹಿನ್ನೆಲೆ‌ ನಡೆದ ಸಂಗೀತ ಮನೋರಂಜನಾ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಶಾಸಕರು ಕುಣಿದು ಕುಪ್ಪಳಿಸಿದ್ದಾರೆ.

ದಿಗ್ಗಜರು ಸಿನಿಮಾದ 'ಕುಚಿಕು ಕುಚಿಕು..' ಹಾಡಿಗೆ ಸಚಿವ ಮಾಂಕಾಳು ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ. ಆ ಬಳಿಕ ವೇದಿಕೆಗೆ ಬಂದಿದ್ದ ಬೆಂಬಲಿಗರು ಹಾಗೂ ಯುವತಿಯರ ಜತೆಯೂ ಸಚಿವರು ಹಾಗೂ ಶಾಸಕರು ಡಾನ್ಸ್ ಮಾಡಿದ್ದಾರೆ. ಸಚಿವರು ಹಾಗೂ ಶಾಸಕರು ಯುವತಿಯರು ಮತ್ತು ಬೆಂಬಲಿಗರ ಜತೆ ಡ್ಯಾನ್ಸ್ ಮಾಡ್ತಿರೋ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿರೋಧ ಪಕ್ಷಗಳಿಂದ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.

ಮಾಜಿ ಶಾಸಕ ಸುನಿಲ್‌ ನಾಯ್ಕ್‌ ಟೀಕೆ: ಅಭಿವೃದ್ಧಿ ಬಗ್ಗೆ ಚಿಂತೆ ಮಾಡಬೇಕಾಗಿದ್ದ ರಾಜ್ಯದ ನಾಯಕರುಗಳು ವೇದಿಕೆಯ ವೇಲೆ ಡಾನ್ಸ್‌ಮಾಡುತ್ತಾ ಮೋಜು ಮಾಡಿದ್ದನ್ನು ಭಟ್ಕಳದ ಮಾಜಿ ಶಾಸಕ ಸುನೀಲ್ ನಾಯ್ಕ್  ಟೀಕಿಸಿದ್ದಾರೆ. 'ಒಂದು ಲೋಡ್ ಮರಳು ಸಿಗದೇ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಕಷ್ಟ ಪಡ್ತಿದ್ದಾರೆ. ಲಕ್ಷಗಟ್ಟಲೇ ಜನರು ಒಂದು ರೇಷನ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೈತರು ತಮ್ಮ ಸ್ವಂತ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಆದರೆ, ಮೀನುಗಾರಿಕಾ ಸಚಿವರು ವೇದಿಕೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವುದು ನೋಡಿ ನಾಚಿಕೆ, ಬೇಜಾರಾಯ್ತು. ಕಾಂಗ್ರೆಸ್ ಸರಕಾರ ಬಂದು ವರ್ಷ ಕಳೆದರೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನ ತಂದಿಲ್ಲ' ಎಂದು ಟೀಕಿಸಿದ್ದಾರೆ.

ಮ್ಯಾಟ್ರಿಮೋನಿಯಲ್ಲಿ ಸೊಸೆ ಹುಡುಕಲು ಹೋಗಿ 18 ಲಕ್ಷ ಕಳೆದುಕೊಂಡ ಬೆಂಗಳೂರಿನ ವೃದ್ಧ!

ಮೀನುಗಾರಿಕಾ ದಿನಾಚರಣೆ ಮಾಡಿ 5-6 ಕೋಟಿ ರೂ. ವೆಚ್ಚ ಮಾಡಿ ಇಡೀ ಜಿಲ್ಲೆ, ಕ್ಷೇತ್ರಕ್ಕೆ ಮಾಡ್ತಿರುವ ದ್ರೋಹ. ಮೀನುಗಾರರು ತಮ್ಮ ಸರ್ಟಿಫಿಕೇಟ್ ಸಮಸ್ಯೆಯಿಂದ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಆದರೆ, ಮೀನುಗಾರಿಕಾ ಸಚಿವರು ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಮೀನುಗಾರರು ಹಾಗೂ ಎಸ್‌ಟಿ ಸಮಾಜದವರು ಡಿಸಿಎಂಗೆ ಮನವಿ ನೀಡಲು ಅವಕಾಶ ಮಾಡಿಕೊಟ್ಟಿಲ್ಲ. ಕೋಟಿಗಟ್ಟಲೆ ಖರ್ಚು ಮಾಡಿ ನಿಮ್ಮ ವಯಕ್ತಿಕ ತೆವಲು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದೀರಿ ಎಂದು ಟೀಕೆ ಮಾಡಿದ್ದಾರೆ.

ಬಿಜೆಪಿ MLA ಸಿಕೆ ರಾಮಮೂರ್ತಿ ನನ್ನ ಟೀಕಿಸಿದ್ರು, ಅದಕ್ಕೆ ಜಯನಗರಕ್ಕೆ ಅನುದಾನ ನಿಲ್ಲಿಸಿದ್ದೆ: ಡಿಕೆಶಿ

Latest Videos
Follow Us:
Download App:
  • android
  • ios