ಮ್ಯಾಟ್ರಿಮೋನಿಯಲ್ಲಿ ಸೊಸೆ ಹುಡುಕಲು ಹೋಗಿ 18 ಲಕ್ಷ ಕಳೆದುಕೊಂಡ ಬೆಂಗಳೂರಿನ ವೃದ್ಧ!

ಮ್ಯಾಟ್ರಿಮೋನಿ ಸೈಟ್‌ನಲ್ಲಿ ತನ್ನ ಮಗನಿಗೆ ಸೊಸೆ ಹುಡುಕುತ್ತಿದ್ದ ನಿವೃತ್ತ ವ್ಯಕ್ತಿಯೊಬ್ಬರು ಗೋಲ್ಡ್ ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ನಕಲಿ ಪ್ರೊಫೈಲ್ ಮೂಲಕ ಯುವತಿಯೊಬ್ಬಳು ವ್ಯಕ್ತಿಯನ್ನು ಸಂಪರ್ಕಿಸಿ, ಚಿನ್ನದ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾಳೆ.

Bengaluru Man looking for daughter in law on matrimony app cheated of Rs 18 lakh san

ಬೆಂಗಳೂರು (ನ.22): ಮ್ಯಾಟ್ರಿಮೋನಿ ಸೈಟ್‌ನಲ್ಲಿ ತನ್ನ ಮನೆಗೆ ಸೂಕ್ತವಾದ ಸೊಸೆಯನ್ನು ಹುಡುಕುವ ಹಾದಿಯಲ್ಲಿದ್ದ ನಿವೃತ್ತ ವ್ಯಕ್ತಿಯೊಬ್ಬ ಕೊನೆಗೆ ಗೋಲ್ಡ್‌ ಇನ್ವೆಸ್ಟ್‌ಮೆಂಟ್‌ನಲ್ಲಿ ಬಂಧಿಯಾಗಿ ಬರೋಬ್ಬರಿ 18 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಯುವತಿಯ ಹೆಸರಿನಲ್ಲಿ ವ್ಯಕ್ತಿಯಿಂದ 18 ಲಕ್ಷ ರೂಪಾಯಿ ಪಡೆದುಕೊಂಡು ಮೋಸ ಮಾಡಲಾಗಿದೆ. ಮೂರು ದಿನಗಳ ಅಂತರದಲ್ಲಿ ಶಂಕರ್‌ ಆರ್‌ (ಹೆಸರು ಬದಲಿಸಲಾಗಿದೆ) ಎನ್ನುವ ವ್ಯಕ್ತಿಗೆ ಬರೋಬ್ಬರಿ 17.68 ಲಕ್ಷ ರೂಪಾಯಿ ವಂಚಿಸಲಾಗಿದೆ. 69 ವರ್ಷದ ಶಂಕರ್‌ ಬೆಂಗಳೂರಿನ ಆರ್‌ಆರ್‌ ನಗರದ ನಿವಾಸಿಯಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ತನ್ನ ಮಗನಿಗೆ ಸೂಕ್ತ ಯುವತಿ ಹಾಗೂ ಮನೆಗೆ ಒಳ್ಳೆಯ ಸೊಸೆಯನ್ನು ಹುಡುಕುವ ಪ್ರಯತ್ನದಲ್ಲಿ ಭಾರತ್‌ ಮ್ಯಾಟ್ರಿಮೋನಿ ಪೋರ್ಟಲ್‌ನಲ್ಲಿ ಮಗನ ವಿವರಗಳನ್ನು ಅಪ್‌ಲೋಡ್‌ ಮಾಡಿದ್ದರು.

ನವೆಂಬರ್ 12 ರಂದು, ದುಷ್ಕರ್ಮಿಗಳು ಬಳಸಿದ್ದ ಅನಿಕಾ ವರ್ಮಾ ಎನ್ನುವ ನಕಲಿ ಪ್ರೊಫೈಲ್‌ನೊಂದಿಗೆ ಅವರ ಮಗನ ಪ್ರೊಫೈಲ್ ಹೊಂದಿಕೆ ಆಗಿತ್ತು.ಅನಿಕಾ ತನ್ನನ್ನು ತಾನು ಪರಿಚಯಿಸಿಕೊಂಡು, ಮಾತುಕತೆ ಆರಂಭ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತಾನು ದುಬೈ ಮೂಲದ ಫ್ಯಾಷನ್ ಡಿಸೈನರ್ ಮತ್ತು ಮೂಲತಃ ಮುಂಬೈನ ಹುಡುಗಿ ಎಂದು ಶಂಕರ್‌ಗೆ ತಿಳಿಸಿದ್ದಳು. ಫೋನ್‌ ನಂಬರ್‌ ವಿನಿಮಯವಾದ ಬಳಿಕ, ಇವರ ಸಂಭಾಷಣೆ ವಾಟ್ಸಾಪ್‌ನಲ್ಲಿ ಮುಂದುವರಿದಿತ್ತು.

ಈ ವೇಲೆ ಅನಿಕಾ ತಾವು ದುಬೈನಲ್ಲಿ ಚಿನ್ನದಲ್ಲಿ ಹೂಡಿಕೆ ಮತ್ತು ವ್ಯಾಪಾರ ಮಾಡುವ ಇತರ ವ್ಯವಹಾರದ ಬಗ್ಗೆ ಹೇಳಿಕೊಂಡಿದ್ದಳು ಎಂದು ಶಂಕರ್‌ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಸ್ತಾಪವನ್ನು ಒಪ್ಪಿಕೊಂಡ ನಂತರ, ಅನಿಕಾ ವೃದ್ಧ ಶಂಕರ್ ಅವರೊಂದಿಗೆ  ಚಿನ್ನದ ಹೂಡಿಕೆಯ ಪ್ರಯೋಜನಗಳ ಕುರಿತು ಮಾತುಕತೆಯಲ್ಲಿ ತೊಡಗಿಕೊಂಡಿದ್ದಳು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

"ಅವಳು (ಅನಿಕಾ) ನಾನು ಅವಳ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಿದರೆ, ನಾವು ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೇವೆ ಮತ್ತು ನನ್ನ ಮಗನಿಗೆ ಮನೆ ಖರೀದಿಸಲು ಸಹಾಯ ಮಾಡುವುದಾಗಿ ಹೇಳಿದ್ದರು" ಎಂದು ಪೊಲೀಸತರಿಗೆ ತಿಳಿಸಿದ್ದಾರೆ. ನವೆಂಬರ್‌ 12 ರಿಂದ 15ರ ಒಳಗೆ ಶಂಕರ್‌ ಅನಿಕಾಗೆ 17.68 ಲಕ್ಷ ರೂಪಾಯಿ ಹಣವನ್ನು ವಿವಿಧ ಬ್ಯಾಂಕ್‌ಗಳಿಂದ ಟ್ರಾನ್ಸ್‌ಫರ್‌ ಮಾಡಿದ್ದರು.

ಕೆಜಿಎಫ್‌-2 ಸ್ಟೋರಿ ಕಾಪಿ ಮಾಡಿದ ಪುಷ್ಪ-2; ಇಷ್ಟೆಲ್ಲಾ ಕಾಕತಾಳೀಯ ಇರೋಕೆ ಹೇಗೆ ಸಾಧ್ಯ?

"ಹಣವನ್ನು ಯುಕೋ ಬ್ಯಾಂಕ್ ಖಾತೆ ಮತ್ತು ಐಸಿಐಸಿಐ ಬ್ಯಾಂಕ್ ಖಾತೆಗೆ ಕಳುಹಿಸಲಾಗಿದೆ" ಎಂದು ಪೊಲೀಸ್ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ' ಎಂದಿದ್ದಾರೆ.

ಬಿಜೆಪಿ MLA ಸಿಕೆ ರಾಮಮೂರ್ತಿ ನನ್ನ ಟೀಕಿಸಿದ್ರು, ಅದಕ್ಕೆ ಜಯನಗರಕ್ಕೆ ಅನುದಾನ ನಿಲ್ಲಿಸಿದ್ದೆ: ಡಿಕೆ ಶಿವಕುಮಾರ್‌

Latest Videos
Follow Us:
Download App:
  • android
  • ios