Petrol pump run by jail inmates in Dharwad: ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ಇನ್ನು ಮುಂದೆ ಪೆಟ್ರೋಲ್ ಬಂಕ್ ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ. 

ವರದಿ : ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಜು. 14): ಧಾರವಾಡದ ಕೇಂದ್ರ ಕಾರಾಗೃಹದಲ್ಲಿ (Central Prison Dharwad) ಬಂಧಿಯಾಗಿರುವ ಖೈದಿಗಳಲ್ಲಿ ಹುಮ್ಮಸ್ಸು ತುಂಬಲು ಹಾಗೂ ಅವರ ಮನ ಪರಿವರ್ತನೆಗೊಳಿಸಲು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ಎಫ್ಎಂ ರೇಡಿಯೋ ಕೇಂದ್ರ, ಕೈದಿಗಳ ಭೇಟಿಗೆ ಹೊಸ ತಂತ್ರಜ್ಞಾನ, ಕೃಷಿ ಚಟುವಟಿಕೆಯೊಂದಿಗೆ ಕೈದಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಈಗ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ಇನ್ನು ಮುಂದೆ ಪೆಟ್ರೋಲ್ ಬಂಕ್ (Petrol Bunk) ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ, ಜೊತೆಗೆ ಸಂಬಳವನ್ನು ಪಡೆಯಲಿದ್ದಾರೆ. 

ಹೌದು! ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಕೆಲಸ ನೀಡಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ (Indian Oil Corporation) ಸಹಭಾಗಿತ್ವದಲ್ಲಿ ಜೈಲು ಆವರಣದಲ್ಲಿ ಒಂದು ಎಕರೆ ಜಾಗ ಗುರುತಿಸಲಾಗಿದೆ. ಕೈದಿಗಳಿಂದಲೇ ನಿರ್ವಹಣೆಗೊಳ್ಳುತ್ತಿರುವ ರಾಜ್ಯದ ಮೊದಲ ಪೆಟ್ರೋಲ್‌ ಬಂಕ್ ಇದಾಗಲಿದೆ. 

ಪೆಟ್ರೋಲ್‌ ಬಂಕ್‌ಗಳಲ್ಲಿ ಕೆಲಸ ಮಾಡುವ ಕೈದಿಗಳಿಗೆ ದಿನನಿತ್ಯ ಕೂಲಿ ನೀಡಿ ತಿಂಗಳ ಕೊನೆಯಲ್ಲಿ ದುಡಿದ ಹಣ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈಗಾಗಲೇ ಪೆಟ್ರೋಲ್ ಬಂಕ್ ತೆರಯಲು ಅಧಿಕಾರಿಗಳು ಸಭೆ ನಡೆಸಿದ್ದು, ಸದ್ಯದಲ್ಲಿಯೇ ಪೆಟ್ರೋಲ್ ಬಂಕ್ ಆರಂಭವಾಗಲಿದೆ. ಇದರೊಂದಿಗೆ ದೊಡ್ಡ ಶಾಪಿಂಗ್ ಮಾಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಪೆಟ್ರೋಲ್ ಬಂಕ್ ನ್ ಉಸ್ತುವಾರಿಯನ್ನು ಜೈಲು ಹಕ್ಕಿಗಳೇ ನೋಡಿಕೊಳ್ಳಲಿದ್ದಾರೆ.

ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ತುಂಬಿಸಲಿದ್ದಾರೆ ಕೈದಿಗಳು: ಈ ಪೆಟ್ರೋಲ್ ಬಂಕ್ ನಲ್ಲಿ ಜೈಲಿನಲ್ಲಿರುವ ಕೈದಿಗಳು ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ತುಂಬಿಸಲಿದ್ದಾರೆ ಎನ್ನಲಾಗಿದೆ. ಕೈದಿಗಳಿಗೆ ಉದ್ಯೋಗ ನೀಡುವ ಈ ಯೋಜನೆ ಇದ್ದಾಗಿದೆ. ಈಗಾಗಲೇ ಸ್ವತಃ ಕೈದಿಗಳು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ:ಸೆಂಟ್ರಲ್‌ ಜೈಲುಗಳಲ್ಲಿನ್ನು 5ಜಿ ಜಾಮರ್‌: ಗೃಹ ಸಚಿವ ಆರಗ ಜ್ಞಾನೇಂದ್ರ

ಇವರು ತಯಾರಿಸುವ ಉತ್ಪನ್ನಗಳುಗೆ ಈಗಲೂ ಉತ್ತಮ ಬೇಡಿಕೆ ಇದ್ದು, ಕೊರೊನಾ ಸಮಯದಲ್ಲಿ ಮಾಸ್ಕ್ ತಯಾರಿಸಲು ಅವರಿಗೆ ತರಬೇತಿ ನೀಡಿ, ಪ್ರತಿದಿನ ತರಬೇತಿ ಅವಧಿಯಲ್ಲಿ 75 ರೂ.ಹಾಗೂ ತರಬೇತಿ ಬಳಿಕ 100 ರೂ.ನೀಡಲಾಗಿತ್ತು. ಈಗ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಪೆಟ್ರೋಲ್ ಬಂಕ್ ತೆರೆದು ಜೈಲು ಕೈದಿಗಳನ್ನೇ ನಿಯೋಜಿಸಿಕೊಳ್ಳುವ ಕೈದಿಗಳಿಗೆ ಉದ್ಯೋಗ ಒದಗಿಸಲು ಮುಂದಾಗಿದ್ದು,ಕಾರಾಗೃಹದ ಆವರಣದಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲು ಕಾರಾಗೃಹ ಕೈಗೊಂಡಿರುವ ಮೊದಲ ಪ್ರಯತ್ನ ಇದಾಗಿದೆ. ಧಾರವಾಡ ಕೇಂದ್ರ ಕಾರಾಗೃಹವು ಮಾದರಿ ಕಾರಾಗೃಹವಾಗಿ ಮಾರ್ಪಟ್ಟಿದೆ.

ಉತ್ತಮ ನಡೆತೆ ರೂಪಿಸಿಕೊಳ್ಳಲು ವರದಾನ: ಧಾರವಾಡ ಕೇಂದ್ರ ಕಾರಾಗೃಹವು 50 ಎಕರೆ ಜಮೀನಿನಲ್ಲಿ ವಿಸ್ತಾರವಾಗಿದ್ದು, 20 ಎಕರೆಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಬಾವಿಗಳು ಹಾಗೂ ಕೊಳವೆ ಬಾವಿಗಳಿಂದ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ನಿರ್ವಹಣೆಯನ್ನು ಸ್ವತಃ ಜೈಲುಹಕ್ಕಿಗಳೇ ನಿರ್ವಹಿಸುತ್ತಿದ್ದಾರೆ. ಇಲ್ಲಿ ಬೆಳೆಯುವ ತರಕಾರಿಗಳನ್ನು ಮಾರಾಟ ಮಾಡಿಕೊಂಡು ಬರುತ್ತಾರೆ. 

ಇದರೊಂದಿಗೆ ಕಾರಾಗೃಹದ ಜಮೀನಿನಲ್ಲಿ 100 ತೆಂಗಿನ ಗಿಡಗಳು, 100 ಮಾವಿನ ಮರಗಳು, ಹಾಗೂ ಸಪೋಟ, ಹುಣಸೆ ಆಲದ ಮರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. 8 ರಿಂದ 10 ಜೋಡಿ ಎತ್ತುಗಳನ್ನು ಟ್ರಾಕ್ಟರ್ ಇದ್ದು, ಹೈನುಗಾರಿಕೆಗಾಗಿ 80 ಹಸುಗಳನ್ನು ಸಾಕಲಾಗುತ್ತಿದೆ.ಇವುಗಳೆಲ್ಲವೂ ಕೈದಿಗಳೇ ನಿರ್ವಹಣೆ ಮಾಡುತ್ತಿರುವುದರಿಂದ ಎಲ್ಲಾ ಕಹಿ ಘಟನೆಗಳು ಮರೆತು ಉತ್ತಮ ನಡೆತೆ ರೂಪಿಸಿಕೊಳ್ಳಲು ವರದಾನವಾಗಿದೆ.

ಇದನ್ನೂ ಓದಿಹುಬ್ಬಳ್ಳಿ ಧಾರವಾಡದಲ್ಲಿ ಕ್ರೈಂಗಳಿಗಿಲ್ಲ ಕಡಿವಾಣ: ಜೈಲಿನಲ್ಲಿ 4 ಹೊಸ ಬ್ಯಾರಕ್ ನಿರ್ಮಾಣ!

ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ಮನ ಪರಿವರ್ತನೆಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಕೈದಿಗಳಿಗೆ ಗ್ರಂಥಾಲಯ, ಕೃಷಿ ಚಟುವಟಿಕೆ, ರೆಡಿಯೋ ಜಾಕಿ, ಸಾಕ್ಷರತಾ ತರಬೇತಿ, ಯೋಗ ಧ್ಯಾನ ಮತ್ತು ಪ್ರಾಣಾಯಾಮ ತರಬೇತಿಯೊಂದಿಗೆ 
ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗಿದ್ದು, ಸದ್ಯದಲ್ಲಿಯೇ ಪೆಟ್ರೋಲ್ ಬಂಕ್ ಆರಂಭಿಸಿ ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ. ಜೊತೆಗೆ ಸಂಬಳವು ಪಡೆಯಲಿದ್ದಾರೆ

ರಾಜ್ಯದಲಿಯೇ ಮೊದಲು: ಧಾರವಾಡ ಕೇಂದ್ರ ಕಾರಾಗೃಹದ ಜಮೀನಿನಲ್ಲಿ ಪೆಟ್ರೋಲ್ ಬಂಕ್ ಆರಂಭಿಸಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ಸಂ ಯೋಗದಲ್ಲಿ ಶೀಘ್ರ ಆರಂಭವಾಗಲಿದ್ದು, ಈ ಪೆಟ್ರೋಲ್ ಬಂಕ್ ನಲ್ಲಿ ಕೈದಿಗಳಿಗೆ ಕೆಲಸ, ನಿಯೋಜಿಸಿಕೊಂಡು ಸಂಬಳ ಅವರೇ ನೀಡಲಿದ್ದಾರೆ. ಇದರ ನಿರ್ವಹಣೆಯನ್ನು ಕೈದಿಗಳೇ ಮಾಡಲಿದ್ದಾರೆ. ಶೀಘ್ರದಲ್ಲೇ ಪೆಟ್ರೋಲ್ ಬಂಕ್ ಆರಂಭವಾಗಲಿದೆ. ಇದರೊಂದಿಗೆ ದೊಡ್ಡ ಶಾಪಿಂಗ್ ಮಾಲ್ ಕೂಡಾ ಆಗಲಿದೆ. ಇದು ಕಾರಾಗೃಹದಲ್ಲಿರುವ ಕೈದಿಗಳಿಗೆ ಕೆಲಸಕ್ಕೆ ನಿಯೋಜಿಸಿಕೊಂಡು ಪೆಟ್ರೋಲ್ ಬಂಕ್ ಆರಂಭ ಮಾಡುತ್ತಿರುವುದು ರಾಜ್ಯದಲಿಯೇ ಮೊದಲು ಆರಂಭ ಮಾಡಲಾಗಿತ್ತಿದೆ ಎಂದು ಜೈಲು ಅಧೀಕ್ಷಕ ಎಂ.ಎ.ಮರಿಗೌಡರ ಹೇಳಿದ್ದಾರೆ.