ಮಂಗಳೂರು(ಮೇ 13): ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಸಿಬ್ಬಂದಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆಸ್ಪತ್ರೆಯ ಸ್ಟಾಫ್ ನರ್ಸ್ ಗಳು ಸೇರಿ 39 ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದೆ.

ಕೊರೋನಾ ಪರೀಕ್ಷಾ ವರದಿ‌ ನೆಗೆಟಿವ್ ಹಿನ್ನೆಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮೃತ ಕೊರೋನಾ ಸೋಂಕಿತ ವೃದ್ದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಗೆ ಕೊರೋನಾ ಇರುವ ಬಗ್ಗೆ ಆತಂಕ ಉಂಟಾಗಿತ್ತು.

ಹೀಗಾಗಿ ಆಸ್ಪತ್ರೆ ಸೀಲ್ ಡೌನ್ ಬಳಿಕ ಇವರನ್ನ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಎರಡು ಬಾರಿ ಸ್ವ್ಯಾಬ್ ಪರೀಕ್ಷೆ ನಡೆಸಿದ ಬಳಿಕ ವರದಿ ನೆಗೆಟಿವ್ ಬಂದಿದೆ. ವರದಿ ನೆಗೆಟಿವ್ ಹಿನ್ನೆಲೆ ಆಸ್ಪತ್ರೆಯಿಂದ 39 ಮಂದಿ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನು 14 ದಿನಗಳ ಕಾಲ ಮನೆಯಲ್ಲೇ ಕ್ವಾರೆಂಟೈನ್ ಇರಲು ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಹೊಸ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ, ಆದರೆ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ, ಕಾರ್ಕಳ ತಾಲೂಕಿನ ನಿವಾಸಿಗಳಾದ ತಾಯಿ (53) ಮತ್ತವರ ಮಗ (26) ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.

ಮಂಗಳೂರಿನ ಫಸ್ವ್‌ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ತಾಯಿ ಮತ್ತು ಅವರೊಂದಿಗಿದ್ದ ಮಗ, ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ 80 ವರ್ಷದ ಮಹಿಳೆಗೆ ಕೋರೊನಾ ಸೋಂಕಿರುವುದು ಪತ್ತೆಯಾಗಿತ್ತು.

ಕೊರೋನಾ ವಾರಿಯರ್ಸ್‌ಗಳಿಗೆ ಸಿಂಗಾಪುರ ಎಂಟಿಆರ್‌ ಊಟ!

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ಎಲ್ಲ ರೋಗಿ ಮತ್ತವರು ಜೊತೆಗಿದ್ದವರನ್ನು ಕ್ವಾರಂಟೈನ್‌ ಗೊಳಪಡಿಸಲಾಗಿತ್ತು. ಅವರ ಪೈಕಿ ಸೋಂಕಿತ ಮಹಿಳೆಯೊಂದಿಗೆ ಸಂಪರ್ಕ ಪಡೆದ ಕಾರ್ಕಳದ ತಾಯಿ - ಮಗ ಇಬ್ಬರಿಗೂ ಈಗ ಸೊಂಕು ಪತ್ತೆಯಾಗಿದೆ. ಆದರೆ ಅವರು ಕ್ವಾರಂಟೈನ್‌ನಲ್ಲಿದ್ದುದರಿಂದ ಮನೆಗೆ ಬಂದಿರಲಿಲ್ಲ, ಆದ್ದರಿಂದ ಅವರು ಬೇರೆ ಯಾರಿಗೂ ಸಂಪರ್ಕವಾಗಿರಲಿಲ್ಲ, ಆದ್ದರಿಂದ ಅವರಿಂದ ಉಡುಪಿ ಜಿಲ್ಲೆಯಲ್ಲಿ ಸೋಂಕು ಹರಡುವ ಸಾಧ್ಯತೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

88 ವರದಿ ನೆಗೆಟಿವ್‌: ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಹಾಟ್‌ಸ್ಪಾಟ್‌ನಿಂದ ಬಂದ 9 ಮಂದಿ, ಫä್ಲಜ್ವರದ 8 ಮಂದಿ, ಉಸಿರಾಟದ ತೊಂದರೆ ಇರುವ 5 ಮಂದಿ, ಕೋವಿಡ್‌ ಸಂಪರ್ಕಿತ 1 ಮತ್ತು ಕೋವಿಡ್‌ ಲಕ್ಷಣಗಳಿರುವ 1 ಸೇರಿ ಒಟ್ಟು 24 ಮಂದಿಯ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಂಗಳವಾರ 88 ಮಂದಿಯ ವರದಿಗಳು ನೆಗೆಟಿವ್‌ ಬಂದಿದ್ದು, ಇನ್ನೂ 87 ಮಂದಿಯ ವರದಿಗಳು ಬರುವುದಕ್ಕೆ ಬಾಕಿ ಇವೆ.