Asianet Suvarna News Asianet Suvarna News

ದಾವಣಗೆರೆ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿ ಡಿಜಿಟಲ್‌ ಬಜೆಟ್ ಮಂಡನೆ

* ದಾವಣಗೆರೆ ಮಹಾನಗರ ಪಾಲಿಕೆಯ 2022-23ನೇ ಸಾಲಿನ  ಬಜೆಟ್ ಮಂಡನೆ
* ಒಟ್ಟು  512.12 ಕೋಟಿ ರೂ.ಗಳ ಬಜೆಟ್ ಗಾತ್ರದಲ್ಲಿ  21.56 ಕೋಟಿ ರೂ. ಗಳ ಉಳಿತಾಯದ ಬಜೆಟ್ 
* ದಾವಣಗೆರೆ ಮಹಾನಗರ ಪಾಲಿಕೆ  ಇತಿಹಾಸದಲ್ಲಿ ಮೊದಲ ಬಾರಿ ಡಿಜಿಟಲ್‌ ಬಜೆಟ್ ಮಂಡನೆ

First Davangere City Corporation 21.56 crore savings budget Via a Digital rbj
Author
Bengaluru, First Published Mar 31, 2022, 5:01 PM IST | Last Updated Mar 31, 2022, 5:01 PM IST

ವದರಿ ; ವರದರಾಜ್  ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ, (ಮಾ.31) :  ದಾವಣಗೆರೆ ಮಹಾನಗರ ಪಾಲಿಕೆಯ 2022-23ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 21.56ಕೋಟಿ ರೂ.ಗಳ ಉಳಿತಾಯ ಬಜೆಟ್ (Davangere City Corporation  Budget) ಮಂಡಿಸಲಾಗಿದೆ. 2022-23ನೇ ಆರ್ಥಿಕ ವರ್ಷಕ್ಕೆ ಪಾಲಿಕೆ ಮೇಯರ್ ಆರ್. ಜಯಮ್ಮ ಗೋಪಿನಾಯ್ಕ್  ಆದೇಶದ ಮೇರೆಗೆ ಮತ್ತು ಪಾಲಿಕೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಇಂದು(ಗುರುವಾರ) ಬಜೆಟ್ ಮಂಡಿಸಿದರು.

 ದಾವಣಗೆರೆ ಮಹಾನಗರ ಪಾಲಿಕೆ  ಇತಿಹಾಸದಲ್ಲಿ  ಮೊದಲ ಬಾರಿಗೆ ಡಿಜಿಟಲ್‌ ಬಜೆಟ್ (Digital Budget) ಮಂಡನೆ ಇದು ಸಾಕ್ಷಿಯಾಗಿದೆ. ಒಟ್ಟು  512.12 ಕೋಟಿ ರೂ.ಗಳ ಬಜೆಟ್ ಗಾತ್ರದಲ್ಲಿ  21.56 ಕೋಟಿ ರೂ. ಗಳ ಉಳಿತಾಯದ ಬಜೆಟ್ ಇದಾಗಿದೆ.    ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸದ್ಯ ಇರುವ ಆರಂಭಿಕ ಶಿಲ್ಕು 12256.27 ಲಕ್ಷ ರೂ.ಗಳ ಜೊತೆಗೆ ರಾಜಸ್ವ ಸ್ವೀಕೃತಿಯಿಂದ 13633.80 ಲಕ್ಷ ರೂ. ಬಂಡವಾಳ ಸ್ವೀಕೃತಿಯಿಂದ 8930.36 ಲಕ್ಷ ರೂ. ಅಸಾಮಾನ್ಯ ಸ್ವೀಕೃತಿಯಿಂದ 16392.27 ಲಕ್ಷ ರೂ. ಸೇರಿದಂತೆ 2022-23ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು 51212.70 ಲಕ್ಷ ರೂ. ಆದಾಯ ಕ್ರೂಡೀಕರಿಸುವ ನಿರೀಕ್ಷೆ ಹೊಂದಿದೆ. 

Karnataka Budget: ಬೊಮ್ಮಾಯಿ ಚೊಚ್ಚಲ ಬಜೆಟ್‌ಗೆ ವಿಧಾನ ಮಂಡಲದ ಅಂಗೀಕಾರ

ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ (Davangere City Corporation ) ಬಜೆಟ್‌ನಲ್ಲಿ ವಾಹನ ನಿಬಿಡ ಪ್ರದೇಶಗಳಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ನಗರದ 2 ಸ್ಥಳಗಳಲ್ಲಿ ಸ್ಕೈ  ವಾಕ್ ನಿರ್ಮಿಸಲು ನಿರ್ಧರಿಸಿಲಾಗಿದೆ.  ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗ  ಹಾಗೂ ರೈಲ್ವೇ ಸ್ಟೇಶನ್  ಮುಂಭಾಗ ಮತ್ತು ರೇಣುಕ ಮಂದಿರದ ಮುಂದೆ ಸ್ಕೈವಾಕ್ ಗಳ ನಿರ್ಮಾಣಕ್ಕೆ ಹಣ ಮೀಸಲಿರಿಸಿದೆ.  ಸಾರ್ವಜನಿಕರು ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟಲು ಪರದಾಡುವ ಸನ್ನವೇಶವಿದ್ದು, ಹಲವಾರು ಬಾರಿ ಅಪಘಾತಗಳಿಗೆ ಕಾರಣವಾಗಿರುತ್ತದೆ. ಹಾಗಾಗಿ ಸ್ಕೈವಾಕ್ ಗಳ ನಿರ್ಮಿಸಲಾಗುವುದು ಎಂದರು.

ಈ ಬಾರಿ ಬಜೆಟ್ ನಲ್ಲಿ ನಗರದ ಸೌಂಧರ್ಯಕರಣಕ್ಕೆ ಒತ್ತುಕೊಡಲಾಗಿದ್ದು  (Bonsai Garden) ಬೋನ್‌ಸಾಯ್ ಉದ್ಯಾನವನದ ನಿರ್ಮಾಣಕ್ಕೆ 10 ಲಕ್ಷ ರೂಗಳನ್ನು ದಾವಣಗೆರೆ ಮಹಾನಗರ ಪಾಲಿಕೆ ತನ್ನ ಬಜೆಟ್‌ನಲ್ಲಿ ಘೋಷಿಸಿದೆ.  ನಗರದ ಪಾಲಿಕೆ ವ್ಯಾಪ್ತಿಯಲ್ಲಿರುವ ಒಂದು ಉದ್ಯಾನ ವನದಲ್ಲಿ (Bonsai) ಬೋನ್ಸಾಯಿ ಉದ್ಯಾನವನ ನಿರ್ಮಿಸಲು ಉದ್ದೇಶಿಸಿದೆ.  ಸುಂದರವಾದ ವಿವಿಧ ಪ್ರಜಾತಿಯ ಕುಬ್ಜ ಮರಗಳನ್ನು ಬೆಳೆಸುವುದರ ಮೂಲಕ ಕುಬ್ಜ ಮರಗಳ ಉದ್ಯಾನವನ ನಿರ್ಮಿಸಿ ನಗರವನ್ನು ಸುಂದರವಾಗಿಸಲು ಯೋಜಿಸಲಾಗಿದೆ. 

 ಬಜೆಟ್ ಸಭೆಯಲ್ಲಿ ಕಾಂಗ್ರೆಸ್  ಬಿಜೆಪಿ ಸದಸ್ಯರ ಮಾತಿನ ಚಕಮಕಿ
 ಮಹಾನಗರ ಪಾಲಿಕೆ ಸಭಾಂಗಣದಲ್ಲಿ  ನಡೆದ ಬಜೆಟ್ ಸಭೆಯ ಪ್ರಾರಂಭದಲ್ಲೇ ಶಾಮನೂರು ಸಮೀಪದ ಶಾಮನೂರು ಶಿವಶಂಕರಪ್ಪ ಬಡಾವಣೆ ಹೆಸರಿನ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ಮಹಾನಗರ ಪಾಲಿಕೆಯ 16 ನೇ ವಾರ್ಡ್ ಸದಸ್ಯ ಎ. ನಾಗರಾಜ್ ಮಾತನಾಡಿ, ಶಾಮನೂರು ಸಮೀಪದ ಶಾಮನೂರು ಶಿವಶಂಕರಪ್ಪ ಬಡಾವಣೆಯ ನಿವಾಸಿಗಳು ಬಡಾವಣೆಯ ಹೆಸರನ್ನು ಮಲ್ಲಿಕಾರ್ಜುನಪ್ಪ ಬಡಾವಣೆ ಎಂಬುದಾಗಿ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದಾರೆ.  ಅದರಿಂದ ನಾಗರಿಕರಿಗೆ ತೊಂದರೆ ಆಗಲಿದೆ.‌ ಹಾಗಾಗಿ ಬಡಾವಣೆ ಹೆಸರು ಬದಲಾವಣೆ ಮಾಡಬಾರದು ಎಂದು ಮನವಿ ಮಾಡಿದರು.ಈ ವೇಳೆ ಬಿಜೆಪಿ ಹಾಗು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಚರ್ಚೆಯನ್ನು ಬೇರೆಡೆಗೆ ತಿರುಗಿಸಲಾಯಿತು.

Latest Videos
Follow Us:
Download App:
  • android
  • ios