* ಎರಡೂ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆದ ಸಿಎಂ* ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ಅಂಗೀಕಾರ* ಕಳೆದ ಸಾಲಿಗಿಂತ ಶೇ.7.9ರಷ್ಟು ಹೆಚ್ಚಿನ ಗಾತ್ರದ ಬಜೆಟ್ ನೀಡುವಲ್ಲಿ ಯಶಸ್ವಿ
ಬೆಂಗಳೂರು(ಮಾ.30): 2022-23ನೇ ಆರ್ಥಿಕ ವರ್ಷಕ್ಕಾಗಿ 2.17 ಲಕ್ಷ ಕೋಟಿ ರು. ಅನುದಾನ(Grants) ಕಲ್ಪಿಸಲು ಕರ್ನಾಟಕ ಧನವಿನಿಯೋಗ (ಸಂಖ್ಯೆ-2) ವಿಧೇಯಕಕ್ಕೆ ಅನುಮೋದನೆ ನೀಡುವ ಮೂಲಕ ಬಜೆಟ್(Budget) ಅನ್ನು ವಿಧಾನಮಂಡಲದಲ್ಲಿ(Assembly Session) ಅಂಗೀಕರಿಸಲಾಯಿತು.
ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರು.
ಕರ್ನಾಟಕ(Karnataka) ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತವನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಸೇವೆ ಮತ್ತು ಉದೇಶಗಳಿಗಾಗಿ ವಿನಿಯೋಗಿಸಲಾಗುವುದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಧರ್ಮ ದ್ವೇಷ, ಸಿಎಂ ಬೊಮ್ಮಾಯಿಗೆ ಬುದ್ಧಿಜೀವಿಗಳಿಂದ ಮಹತ್ವದ ಪತ್ರ
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕಳೆದ ಸಾಲಿಗಿಂತ ಶೇ.7.9ರಷ್ಟು ಹೆಚ್ಚಿನ ಗಾತ್ರದ ಬಜೆಟ್ ನೀಡುವಲ್ಲಿ ಯಶಸ್ವಿಯಾಗಿದೇವೆ. ಬಜೆಟ್‌ನ ಎಲ್ಲಾ ಘೋಷಣೆಗಳನ್ನು ಖಂಡಿತವಾಗಿ ಅನುಷ್ಠಾನ ಮಾಡುತ್ತೇವೆ ಎಂದರು.
ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ಅಂಗೀಕಾರ
ಇದೇ ವೇಳೆ, ಆರ್ಥಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ-2022 ಅನ್ನು ಅಂಗೀಕರಿಸಲಾಗಿದೆ. ಹಣಕಾಸಿನ ಕೊರತೆಯ ಮಿತಿಯನ್ನು ಶೇ.3ರಿಂದ ಶೇ.3.5ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾಲ ಹೆಚ್ಚಳದಿಂದ ಆರ್ಥಿಕ ಸವಾಲನ್ನು ಎದುರಿಸಲಾಗಿದೆ. ಹೀಗಾಗಿ ಹಣಕಾಸಿನ ಕೊರತೆಯ ಮಿತಿಯನ್ನು ಹೆಚ್ಚಿಸಲಾಗುತ್ತಿದೆ. 2022-23ನೇ ಆರ್ಥಿಕ ವರ್ಷಕ್ಕೆ ಈ ತಿದ್ದುಪಡಿ ಅನ್ವಯವಾಗಲಿದೆ. ಸ್ವೀಕೃತಿಗಳ ಇಳಿಕೆಯ ಕಾರಣದಿಂದಾಗಿ ರಾಜಸ್ವ ಕೊರತೆಯು ಉದ್ಭವಿಸಬಹುದು. ಈ ಹಿನ್ನೆಲೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರವು ತಿಳಿಸಿದೆ.
ನಿರೀಕ್ಷೆ ಮೀರಿ ತೆರಿಗೆ ಸಂಗ್ರಹ
ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರವು ಬದ್ಧವಾಗಿದ್ದು, ಮೋಟಾರು ವಾಹನ ತೆರಿಗೆ ಹೊರತುಪಡಿಸಿದರೆ ತೆರಿಗೆ ಸಂಗ್ರಹವು ನಿಗದಿತ ಗುರಿಗಿಂತ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Karnataka Politics: ಶಿಗ್ಗಾಂವಿ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಮಂಗಳವಾರ ಇಲಾಖಾವಾರು ಅನುದಾನ(Grants) ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮೋಟಾರು ವಾಹನ ತೆರಿಗೆ(Tax) ಸಂಗ್ರಹ ಹೊರತುಪಡಿಸಿದರೆ ಉಳಿದ ತೆರಿಗೆ ಸಂಗ್ರಹವು ನಿರೀಕ್ಷೆಗಿಂತ ಹೆಚ್ಚು ಸಂಗ್ರಹವಾಗಿದೆ. 7,500 ಕೋಟಿ ರು.ಗಿಂತ ಹೆಚ್ಚು ತೆರಿಗೆ ಸಂಗ್ರಹಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ, 9,500 ಕೋಟಿ ರು. ನಷ್ಟು ತೆರಿಗೆ ಸಂಗ್ರಹವಾಗಿದೆ. ಕೋವಿಡ್‌ನಿಂದಾಗಿ(Covid-19) 21-22ನೇ ಆರ್ಥಿಕ ಸಾಲಿನ ಮೊದಲ ಐದು ತಿಂಗಳು ತೆರಿಗೆ ಸಂಗ್ರಹಣೆ ಉತ್ತಮವಾಗಿರಲಿಲ್ಲ. ನಂತರದ ತಿಂಗಳಲ್ಲಿ ತೆರಿಗೆ ಸಂಗ್ರಹಣೆ ಹೆಚ್ಚಳವಾಗಿದೆ. ಆರ್ಥಿಕ ಶಿಸ್ತಿಗೆ ಒತ್ತು ನೀಡಿ ತೆರಿಗೆ ಸಂಗ್ರಹದಲ್ಲಿ ದಕ್ಷತೆ ತೋರಿದ ಪರಿಣಾಮ ಗುರಿ ಮೀರಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ತೆರಿಗೆ ಸಂಗ್ರಹದಲ್ಲಿನ ಕೊರತೆಗಳನ್ನು ಸರಿಪಡಿಸಲು ಕೈಗೊಂಡ ಕ್ರಮಗಳಿಂದ ನಿಗದಿತ ಗುರಿ ಮೀರಿ ಆದಾಯ ಸಂಗ್ರಹ ಮಾಡಲಾಗಿದೆ. ಸ್ಟ್ಯಾಂಪ್ ಡ್ಯೂಟಿಯಲ್ಲಿ(Stamp Duty) ಶೇ.10ರಷ್ಟು ರಿಯಾಯಿತಿ(Discount) ನೀಡಿದ್ದರಿಂದ 100 ಕೋಟಿ ರು. ಹೆಚ್ಚು ಆದಾಯ ಸಂಗ್ರಹವಾಗಿದೆ. ತೆರಿಗೇತರ ಆದಾಯ ಹೆಚ್ಚಳಕ್ಕೂ ಗಮನ ನೀಡಲಾಗಿದೆ. ನಾಲ್ಕು ಸಾವಿರ ಕೋಟಿ ರು. ತೆರಿಗೆಯೇತರ ಆದಾಯ ಗುರಿಯನ್ನು ಹೊಂದಲಾಗಿದ್ದು, ಆರು ಸಾವಿರ ಕೋಟಿ ರು. ತೆರಿಗೆಯೇತರ ಆದಾಯವನ್ನು ಸಂಗ್ರಹಿಸಲಾಗಿದೆ. ಮಾರಾಟವಾಗದೆ ಉಳಿದಿದ್ದ ಕಬ್ಬಿಣದ ಅದಿರನ್ನು ಮಾರಾಟ ಮಾಡಿ 500 ಕೋಟಿ ರು. ಸಂಗ್ರಹಿಸಲಾಗಿದೆ. ಅಂತೆಯೇ ಬಾಕಿ ಇದ್ದ ಅರಣ್ಯ ಇಲಾಖೆಯ(Forest Department) ಅನುಮತಿಯನ್ನು ನೀಡಿ ಗಣಿ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಪರಿಣಾಮ ತೆರಿಗೇತರ ಆದಾಯ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
