ಗ್ರೀನ್‌ ಝೋನ್ ಉಡುಪಿಯಲ್ಲಿ ಕೊರೋನಾಗೆ ಮೊದಲ ಬಲಿ..!

ಉಡುಪಿ ಜಿಲ್ಲೆಯಲ್ಲಿ ಮಾರಕ ಕೊರೋನಾಕ್ಕೆ ಮೊದಲ ಬಲಿಯಾಗಿದೆ. ಮುಂಬೈಯಿಂದ ಬಂದ ವ್ಯಕ್ತಿಯೊಬ್ಬರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರಿಗೆ ಕೊರೋನಾ ಸೋಂಕು ಇದ್ದದ್ದು ದೃಢಪಟ್ಟಿದೆ.

First corona death in greenzone udupi

ಉಡುಪಿ(ಮೇ 17): ಉಡುಪಿ ಜಿಲ್ಲೆಯಲ್ಲಿ ಮಾರಕ ಕೊರೋನಾಕ್ಕೆ ಮೊದಲ ಬಲಿಯಾಗಿದೆ. ಮುಂಬೈಯಿಂದ ಬಂದ ವ್ಯಕ್ತಿಯೊಬ್ಬರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರಿಗೆ ಕೊರೋನಾ ಸೋಂಕು ಇದ್ದದ್ದು ದೃಢಪಟ್ಟಿದೆ.

54 ವರ್ಷ ವಯಸ್ಸಿನ ಈ ವ್ಯಕ್ತಿ ಮೇ 13ರಂದು ಮುಂಬೈಯಿಂದ ಕುಂದಾಪುರಕ್ಕೆ ಬಂದಿದ್ದರು, ತಕ್ಷಣ ಅವರನ್ನು ನಿಯಮದಂತೆ ಕ್ವಾರಂಟೈನ್‌ಗೊಳಪಡಿಸಲಾಗಿತ್ತು. ಆದರೆ ಅವರು ಅದೇ ದಿನ ತೀವ್ರಎದೆ ನೋವಿನಿಂದ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದುಬೈ ಮಾತ್ರವಲ್ಲ, ಮುಂಬೈನಿಂದ ಬಂದವರಲ್ಲೂ ಸೋಂಕು: ಉಡುಪಿಯಲ್ಲಿ ಕೊರೋನಾ ಕಾಟ

ಅವರಿಗೆ ಕೊರೋನಾದ ಗುಣಲಕ್ಷಣವಾದ ಉಸಿರಾಟದ ತೊಂದರೆ ಇದ್ದುದರಿಂದ ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ಗೆ ದಾಖಲಿಸಿ, ಅವರ ಗಂಟಲದ್ರವದ ಮಾದರಿಯನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರು ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರಿಗೆ ಅದೇ ದಿನ ರಾತ್ರಿ ಶಸ್ತ್ರಚಿಕಿತ್ಸೆ ನಡೆಸಲಾಯಿತು, ಆದರೆ ಅವರು ಚೇತರಿಸಿಕೊಳ್ಳದೆ 14ರಂದು ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 15ರಂದು ಗಂಟಲದ್ರವದ ಮಾದರಿಯ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಅವರಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.

57 ಮಂದಿ ಪ್ರಾಥಮಿಕ ಸಂಪರ್ಕ: ಮೃತಪಟ್ಟಈ ವ್ಯಕ್ತಿಯನ್ನು ಮುಂಬೈಯಿಂದ ಬಂದಾಗ ಮೊದಲು ಕುಂದಾಪುರದ ಸಭಾಂಗಣದ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಗಿತ್ತು, ಆಗ ಅಲ್ಲಿದ್ದ 57 ಮಂದಿಯನ್ನು ಅವರ ಪ್ರೈಮರಿ ಕಾಂಟಾಕ್ಟ್$್ಸ ಮತ್ತು 38 ಮಂದಿಯನ್ನು ಸೆಕೆಂಡರಿ ಕಾಂಟಾಕ್ಟ್$್ಸ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಪರೀಕ್ಷೆಗಳ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿದ ಅಶ್ವಥ್ ನಾರಾಯಣ

ಇವರಿಗೆ ಚಿಕಿತ್ಸೆ ನೀಡಿದ ಕುಂದಾಪುರ ತಾಲೂಕು ಆಸ್ಪತ್ರೆ ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಸಂಪೂರ್ಣ ಸುರಕ್ಷೆಗಳನ್ನು ಧರಿಸಿದ್ದರು. ಆದರೆ 3 ಮಂದಿ ವೈದ್ಯಕೇತರ ಸಿಬ್ಬಂದಿಗಳು ಮಾತ್ರ ಯಾವುದೇ ಸುರಕ್ಷೆ ಇಲ್ಲದೆ ಅವರ ಸಂಪರ್ಕಕ್ಕೆ ಬಂದಿದ್ದಾರೆ. ಅವರನ್ನು ಮತ್ತು ಮೃತರ ಕುಟುಂಬದ 5 ಮಂದಿಯನ್ನು ಇದೀಗ ಪ್ರತ್ಯೇಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮೃತರ ಅಂತ್ಯಕ್ರಿಯೆಗಳನ್ನು ಕೋವಿಡ್‌ ಮಾರ್ಗದರ್ಶಿ ನಿಯಮಗಳಂತೆ, ಪೂರ್ಣ ನಿಗಾ ವಹಿಸಿ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹೈರಿಸ್ಕ್‌ನಲ್ಲಿ 39 ಮಂದಿ

ಉಡುಪಿ ಜಿಲ್ಲೆಯಿಂದ ಶನಿವಾರ ಸುಮಾರು 109 ಮಂದಿಯ ಗಂಟಲದ್ರವದ ಮಾದರಿಗಳನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಮುಂಬೈ ಮತ್ತಿತರ ಹಾಟ್‌ಸ್ಪಾಟ್‌ನಿಂದ ಬಂದ 95 ಮಂದಿ ಇದ್ದಾರೆ, ಅವರಲ್ಲೂ 39 ಮಂದಿಯನ್ನು ಹೈರಿÓ್ಕ… ಜನರು ಎಂದು ಪ್ರತ್ಯೇಕವಾಗಿ ಗುರುತಿಸಲಾಗಿದೆ. 3 ಮಂದಿ ಕೊರೋನಾ ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದವರು, 5 ಮಂದಿ ಪ್ಲೂಜ್ವರ ಮತ್ತು 6 ಮಂದಿ ಉಸಿರಾಟದ ತೊಂದರೆಯಲ್ಲಿದ್ದವರ ಗಂಟಲದ್ರವದ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಶನಿವಾರ 7 ವರದಿಗಳು ಬಂದಿದ್ದು ಅದರಲ್ಲಿ 1 ಪಾಸಿಟಿವ್‌ ಆಗಿದ್ದು, ಉಳಿದವು ನೆಗೆಟಿವ್‌ ಆಗಿದೆ, ಇನ್ನೂ 133 ಮಂದಿಯ ವರದಿಗಳು ಬರಬೇಕಾಗಿದೆ. ಹೊರರಾಜ್ಯಗಳಿಂದ ಜಿಲ್ಲೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಹೋಂ ಕ್ವಾರಂಟೈನ್‌ನಲ್ಲಿರುವವ ಸಂಖ್ಯೆ 804 ಕ್ಕೇರಿದೆ, ಹಾಸ್ಟಿಟಲ್‌ ಕ್ವಾರಂಟೈನ್‌ನಲ್ಲಿರುವ ಸಂಖ್ಯೆ 41ಕ್ಕೇರಿದೆ, ಐಸೋಲೇಷನ್‌ ವಾರ್ಡಿನಲ್ಲಿರುವವರ ಸಂಖ್ಯೆ 75ಕ್ಕೇರಿದೆ.

Latest Videos
Follow Us:
Download App:
  • android
  • ios