Asianet Suvarna News Asianet Suvarna News

ಜಾರಕಿಹೊಳಿ ಆಪ್ತರ ಮೇಲೆ ಗುಂಡಿನ ದಾಳಿ

ಗುಂಡುಹಾರಿಸಿ ಪರಾರಿಯಾದ ಮುಸುಕುಧಾರಿ ವ್ಯಕ್ತಿ| ಪ್ರಾಣಾಪಾಯದಿಂದ ಪಾರು| ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ನಡೆದ ಘಟನೆ| ಕಾಂಗ್ರೆಸ್‌ ಕಾರ್ಯಕರ್ತರೆ ಗುರಿ| 

Firing on Satish Jarakiholi Supporters in Belagavi grg
Author
Bengaluru, First Published Dec 18, 2020, 11:14 AM IST

ಬೆಳಗಾವಿ/ಯಮಕನಮರಡಿ(ಡಿ.18): ಗ್ರಾಪಂ ಚುನಾವಣೆ ವೈಷಮ್ಯದ ಹಿನ್ನೆಲೆಯಲ್ಲಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ಸೇರಿದಂತೆ ಇಬ್ಬರ ಮೇಲೆ ಮುಸುಕುಧಾರಿ ವ್ಯಕ್ತಿಯೊಬ್ಬ ಗುಂಡುಹಾರಿಸಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಶಾಸಕರ ಆಪ್ತ ಕಾರ್ಯದರ್ಶಿ ಕಿರಣಸಿಂಗ್‌ ರಜಪೂತ ಮತ್ತು ಕಾಂಗ್ರೆಸ್‌ ಮುಖಂಡ ಭರಮಾ ದೂಪದಾಳೆ ಎಂಬುವರ ಮೇಲೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್‌ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭರಮಾ ದೂಪದಾಳೆ ಮತ್ತು ಕಿರಣಸಿಂಗ್‌ ರಜಪೂತ, ಅಲತಾಪ ಚಡೆದಾರ ಅವರು ಮಂಗಳವಾರ ರಾತ್ರಿ ಗ್ರಾಮದ ಬಸ್ತಿ ಮಂದಿರ ಹತ್ತಿರ ಕುಳಿತು ಚುನಾವಣೆ ವಿಷಯವಾಗಿ ಚರ್ಚೆ ಮಾಡುತ್ತಿರುವಾಗ ಅನಾಮಧೇಯ ವ್ಯಕ್ತಿಯೊಬ್ಬ ಮುಖವಾಡ ಧರಿಸಿ, ಮಾಸ್ಕ್‌ ಹಾಕಿಕೊಂಡು ಕಾಲ್ನಡಿಗೆಯಿಂದ ಬಂದು ಈತನ (ಭರಮಾ ಭೂಪಾಲ ದೂಪದಾಳೆ) ಎಡಗೈ ಭುಜದ ಕೆಳಗೆ ಕಂಟ್ರಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ಆತನಿಗೆ ಸಣ್ಣ ಗಾಯವಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಭರಮಾ ಭೂಪಾಲ ದೂಪದಾಳೆಯನ್ನು ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಗುಂಡಿನ ದಾಳಿ ಮಾಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಶೀಘ್ರವಾಗಿ ಭೇದಿಸುವುದಾಗಿ ಬೆಳಗಾವಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಧ್ಯಮದವರಿಗೆ ತಿಳಿಸಿದರು. ಇದು ಆಸ್ತಿಯ ವಿಷಯವಾಗಿರಬಹುದು. ಈ ಕುರಿತು ಪತ್ತೆ ಮಾಡಲಾಗುವುದು. ಗುಂಡಿನ ದಾಳಿಗೆ ಒಳಗಾಗಿರುವ ಭರಮಾ ದೂಪದಾಳೆ ಮಾಧ್ಯಮದವರೊಂದಿಗೆ ಮಾತನಾಡಿ, ನಾವು 4 ಜನ ಗ್ರಾಮ ಪಂಚಾಯತಿ ಚುನಾವಣೆ ವಿಷಯವಾಗಿ ಮಾತನಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಏಕಾಏಕಿ ಕಾಲ್ನಡಿಗೆಯಿಂದ ಬಂದು ಗುಂಡು ಹಾರಿಸಿದ್ದಾನೆ. ನನ್ನ ಸಹೋದರರಾದ ಮಹಾವೀರ ದೂಪದಾಳೆ ಈ ಹಿಂದೆ ಜೀವ ಬೆದರಿಕೆ ಹಾಕಿ ಸುಫಾರಿ ನೀಡಿದ್ದನ್ನು ಸ್ಮರಿಸಿಕೊಂಡರು. ಆದರೆ, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದರು.

ಬೆಳಗಾವಿ ಜಿಲ್ಲೆಯನ್ನೂ ವಿಭಜನೆ ಮಾಡಿ: ಸತೀಶ ಜಾರಕಿಹೊಳಿ

ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹುಕ್ಕೇರಿ ಸಿಪಿಐ ಜಿ.ಐ.ಕಲ್ಯಾಣಶೆಟ್ಟಿ, ಯಮಕನಮರಡಿ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತರೆ ಗುರಿ

ಯಮಕನಮರಡಿಯಲ್ಲಿ ನನ್ನ ಆಪ್ತ ಸೇರಿ ಇಬ್ಬರ ಮೇಲೆ ಬುಧವಾರ ರಾತ್ರಿ ಅಜ್ಞಾತ ವ್ಯಕ್ತಿಯೊಬ್ಬ ಗುಂಡುಹಾರಿಸಿ, ಪರಾರಿಯಾಗಿದ್ದಾನೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಪೂರ್ಣ ಮಾಹಿತಿ ನನಗಿಲ್ಲ. ರಾತ್ರಿ ಘಟನೆ ನಡೆದಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್‌ ಆಗಿದ್ದಾರೆ ಎಂದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಅಂಕಲಗಿಯಲ್ಲಿ ಪದೇ ಪದೇ ಕಾಂಗ್ರೆಸ್‌ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ರಾಜು ತಳವಾರಗೆ ರಾಜಕೀಯ ರಕ್ಷಣೆ ಇದೆ. ಅಂಕಲಗಿ ಗ್ರಾಮದಲ್ಲಿ ಮತ್ತೆ ಗೂಂಡಾಗಿರಿ ನಡೆದಿದೆ. ಕಳೆದ 6 ತಿಂಗಳಲ್ಲಿ ಮೂರು ಸಲ ಇಂತಹ ಘಟನೆ ನಡೆದಿದೆ. ಇಲ್ಲಿ ಭಯದ ವಾತಾವರಣ ಮುಂದುವರಿದಿದ್ದು, ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗಲಾಟೆಯಾದ ಎರಡು ಕುಟುಂಬಗಳ ಸಂಬಂಧಿಕರು ಎಂಬ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೌದು ಇಬ್ಬರು ಸಂಬಂಧಿಕರು. ಆದರೆ ಪಕ್ಷ ಬೇರೆ ಬೇರೆ ಇದೆ. ಸಂಧಾನದ ಅವಶ್ಯಕತೆ ಇಲ್ಲ. ಕಠಿಣ ಕ್ರಮ ಕೈಗೊಳ್ಳಬೇಕು. ಟೈಗರ್‌ ಗ್ಯಾಂಗ್‌ ರೀತಿಯಲ್ಲಿ ಇದನ್ನು ಮಟ್ಟ ಹಾಕಬೇಕು. ದೊಡ್ಡ ಪ್ರಮಾಣದ ಹಣ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಜಾರಕಿಹೊಳಿ

ಗುಂಡಿನ ದಾಳಿ ಹಿಂದೆ ಆಂತರಿಕ ವಿಚಾರ: ಡಿಕೆಶಿ

ಯಮಕನಮರಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಆಂತರಿಕ ವಿಚಾರಗಳಿದ್ದು, ಪಕ್ಷದ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಕೆಲವು ಆಂತರಿಕ ವಿಚಾರಗಳಿವೆ ಎಂದು ಹೇಳಲಾಗುತ್ತಿದೆ. ಶನಿವಾರವೇ ಬೆಳಗಾವಿಗೆ ಭೇಟಿ ನೀಡಿ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಈ ವಿಚಾರ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಕಾಂಗ್ರೆಸ್‌ ಕಾರ್ಯಕರ್ತರಾದ ಕಿರಣ್‌ ರಜಪೂತ್‌ ಹಾಗೂ ಬರಮಾ ದೂಪದಾಳೆ ಎಂಬುವರ ಮೇಲೆ ಅಪರಿಚಿತರು ಫೈರಿಂಗ್‌ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Follow Us:
Download App:
  • android
  • ios